Zodiac Sign: ಒಂದೇ ರಾತ್ರಿಯಲ್ಲಿ ಬದಲಾಗುತ್ತದೆ ಈ ರಾಶಿಗಳ ಜನರ ಭಾಗ್ಯ, ಈ ಗ್ರಹದ ಕೃಪೆ ಇವರ ಮೇಲಿರುತ್ತದೆ

Astrology: ಗ್ರಹಗಳ ನಡೆ ನಮ್ಮ ಜೀವನದ ಮೇಲೆ ಭಾರಿ ಪ್ರಭಾವವನ್ನು ಬೀರುತ್ತದೆ. ಆದರೆ, ಕೆಲವೊಮ್ಮೆ ಜನರ ಜೀವನದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳು ಕಾಣಿಸಲು ಆರಂಭಿಸುತ್ತವೆ. ಇದರ ಹಿಂದೆಯೂ ಕೂಡ ಗ್ರಹಗಳೇ ಕಾರಣವಾಗಿರುತ್ತವೆ. ಯಾವ ರಾಶಿಗಳ ಜನರ ಜೊತೆಗೆ ಇದು ಹೆಚ್ಚಾಗಿ ಸಂಭವಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : May 3, 2022, 09:08 PM IST
  • ಈ ರಾಶಿಗಳ ಜನರ ಜೀವನದಲ್ಲಿ ಹಠಾತ್ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ
  • ಇವರ ಅದೃಷ್ಟ ಒಂದೇ ರಾತ್ರಿಯಲ್ಲಿ ಬದಲಾಗುತ್ತದೆ.
  • ಯಾವ ಯಾವ ರಾಶಿಗಳ ಜನರಲ್ಲಿ ಈ ಬದಲಾವಣೆ ಕಾಣಿಸಿಕೊಳ್ಳುತ್ತವೆ ತಿಳಿಯೋಣ ಬನ್ನಿ
Zodiac Sign: ಒಂದೇ ರಾತ್ರಿಯಲ್ಲಿ ಬದಲಾಗುತ್ತದೆ ಈ ರಾಶಿಗಳ ಜನರ ಭಾಗ್ಯ, ಈ ಗ್ರಹದ ಕೃಪೆ ಇವರ ಮೇಲಿರುತ್ತದೆ title=
Rahu Remedies

Rahu Remedies: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ ಪಲ್ಲಟದ ಪ್ರಭಾವ ವ್ಯಕ್ತಿಗಳ ಜೀವನದ ಮೇಲಾಗುತ್ತದೆ ಎನ್ನಲಾಗುತ್ತದೆ. ಗ್ರಹಗಳ ನಡೆ ಅಥವಾ ಪರಿವರ್ತನೆ ವ್ಯಕ್ತಿಯ ಜೀವನದಲ್ಲಿ ಶುಭ ಅಥವಾ ಅಶುಭ ಫಲಗಳಿಗೆ ಕಾರಣವಾಗುತ್ತದೆ.ಇದೇ ವೇಳೆ ರಾಶಿಗಳ ಆಧಾರದ ಮೇಲೆ, ಯಾವ ಗ್ರಹದ ಸ್ಥಾನವು ಶುಭ ಮತ್ತು ಯಾವ ಗ್ರಹದ ಸ್ಥಾನವು ಅಶುಭ ಎಂಬುದನ್ನು ನಾವು ತಿಳಿದುಕೊಳ್ಳಬಹುದು. ಆದರೆ, ಕೆಲವು ರಾಶಿಗಳ ಜನರ ಜೀವನದಲ್ಲಿ ಹಠಾತ್ ಬದಲಾವಣೆಗಳು ಕಂಡುಬರುತ್ತವೆ. ಈ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಮಿಥುನ ರಾಶಿ - ರಾಹುವನ್ನು ಜ್ಯೋತಿಷ್ಯದಲ್ಲಿ ಪಾಪ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿದ್ದರೆ, ಅದು ಆ ವ್ಯಕ್ತಿಯ ಜೀವನದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೀವನದಲ್ಲಿ ಹಠಾತ್ ಘಟನೆಗಳಿಗೆ ರಾಹು ಗ್ರಹವೇ ಕಾರಣವೆಂದು ಪರಿಗಣಿಸಲಾಗುತ್ತದೆ. ರಾಹು ಮಿಥುನ ರಾಶಿಯಲ್ಲಿ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಮಿಥುನ ರಾಶಿಯವರ ಜಾತಕದವರಲ್ಲಿ ರಾಹು ಒಂದು ವೇಳೆ ಉಚ್ಛ ಸ್ಥಾನದಲ್ಲಿದ್ದರೆ, ಆತ ಅವರಿಗೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ.

ವ್ಯಕ್ತಿಯು ಹಠಾತ್ ಪ್ರಗತಿಯನ್ನು ಹೊಂದುತ್ತಾನೆ. ಆಕಸ್ಮಿಕ ಧನಲಾಭದ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಜನರು ಇದ್ದಕ್ಕಿದ್ದಂತೆ ಯಶಸ್ಸನ್ನು ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯ ಜನರು ರಾಹುವನ್ನು ಪ್ರಸನ್ನಗೊಳಿಸಲು ಕೆಲ ಕ್ರಮಗಳನ್ನು ಕೈಗೊಂಡರೆ ಅದು ತುಂಬಾ ಲಾಭಕಾರಿ ಸಾಬೀತಾಗಲಿದೆ.

ಮಕರ ರಾಶಿ - ಮಕರ ರಾಶಿಯವರಿಗೆ ರಾಹು ಮಂಗಳಕರ ಸಾಬೀತಾಗುತ್ತಾನೆ. ಶನಿಯು ಈ ರಾಶಿಯ ಅಧಿಪತಿ. ಶನಿಯನ್ನು ಕರ್ಮ ಫಲ ದಾತ ಅಥವಾ ನ್ಯಾಯದ ದೇವರು ಎಂದೂ ಕೂಡ ಕರೆಯಲಾಗುತ್ತದೆ. ಕಷ್ಟಪಟ್ಟು ದುಡಿಯುವ ಜನರನ್ನು ರಾಹು ಇಷ್ಟಪಡುತ್ತಾನೆ ಮತ್ತು ಅವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಇದರಿಂದ ವ್ಯಕ್ತಿಯು ಇದ್ದಕ್ಕಿದ್ದಂತೆ ಉನ್ನತ ಸ್ಥಾನವನ್ನು ಪಡೆಯುತ್ತಾನೆ,  ಆದರೆ ಈ ರಾಶಿಯವರು ಯಾವುದೇ ರೀತಿಯ ತಪ್ಪು ಕೆಲಸ ಮಾಡದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ರಾಹು ಅವರಿಗೆ ದೊಡ್ಡ ಹಾನಿಯನ್ನೇ ತರಬಹುದು. ಆದ್ದರಿಂದ, ನಿಮ್ಮ ಮಾತು ಮತ್ತು ಸಹವಾಸದಲ್ಲಿ ಸಂಯಮವನ್ನು ಕಾಯ್ದುಕೊಳ್ಳಿ.

ರಾಹುವನ್ನು ಮೆಚ್ಚಿಸಲು ಈ ಉಪಾಯಗಳನ್ನು ಮಾಡಿ
ಜ್ಯೋತಿಷ್ಯಶಾಸ್ತ್ರದ
ಪ್ರಕಾರ, ರಾಹುವನ್ನು ಮೆಚ್ಚಿಸಲು ಎರಡೂ ರಾಶಿಯ ಜನರು ಶನಿವಾರದಂದು ಉಪವಾಸ ವೃತ ಕೈಗೊಳ್ಳಬೇಕು. ಇದಲ್ಲದೆ ಶಿವನನ್ನು ಪೂಜಿಸಲು ಕೂಡ ಸಲಹೆ ನೀಡಲಾಗುತ್ತದೆ. ಶಿವಲಿಂಗಕ್ಕೆ ಪೂಜಿಸುವಾಗ ಲಿಂಗದ ಮೇಲೆ ಬೆಲಪತ್ರಿ ಮತ್ತು ಧತ್ತೂರಿ ಎಲೆಗಳನ್ನು ಅರ್ಪಿಸುವುದರಿಂದ ರಾಹುವಿನ ಅಶುಭ ಪ್ರಭಾವ ದೂರಾಗುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ-Vaishakh Purnima 2022: ಮೃತ್ಯುವಿನ ಮೇಲೆ ಜಯ ಸಾಧಿಸಲು ವೈಶಾಖ ಹುಣ್ಣಿಮೆಯ ದಿನ ಯಮರಾಜನನ್ನು ಈ ರೀತಿ ಪ್ರಸನ್ನಗೊಳಿಸಿ

ರಾಹು ಮಂತ್ರ
ರಾಹುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು, ಮೇಲೆ ಸೂಚಿಸಲಾಗಿರುವ ಉಪಾಯಗಳ ಜೊತೆಗೆ, ಮಂತ್ರಗಳನ್ನು ಪಠಿಸಲು ಸಹ ಸಲಹೆ ನೀಡಲಾಗುತ್ತದೆ. ಶನಿವಾರದಂದು ರಾಹುವಿನ ಶುಭ ಫಲಿತಾಂಶಗಳನ್ನು ಪಡೆಯಲು, ಓಂ ರಣ ರಾಹವೇ ನಮಃ ಎಂಬ ಮಂತ್ರವನ್ನು ಕನಿಷ್ಠ ಒಂದು ಜಪಮಾಲೆ ಪೂರ್ಣವಾಗುವಂತೆ ಪಠಿಸಬೇಕು.

ಇದನ್ನೂ ಓದಿ-Vastu Tips: ಮನೆಯ ಈ ದಿಕ್ಕಿನ ಗೋಡೆಯ ಮೇಲೆ ಅಪ್ಪಿತಪ್ಪಿಯೂ ಕೂಡ ಗಡಿಯಾರ ಹಾಕಬೇಡಿ, ಇಲ್ದಿದ್ರೆ ಪ್ರಗತಿ ನಿಂತುಹೋಗುತ್ತದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News