Shukra Gochar 2022: ಮುಂದಿನ 20 ದಿನಗಳವರೆಗೆ ಈ ರಾಶಿಯವರ ಮೇಲೆ ಹಣದ ಹೊಳೆ ಹರಿಸಲಿದ್ದಾನೆ ಶುಕ್ರ

Venus Transit May 2022: ಶುಕ್ರ ಗ್ರಹವು ಸಂಪತ್ತನ್ನು ನೀಡುವವನು. ಐಷಾರಾಮಿ ಜೀವನವು ಶುಕ್ರ ಗ್ರಹದ ಅನುಗ್ರಹದಿಂದ ಮಾತ್ರ ಲಭಿಸುತ್ತದೆ. ಹಾಗೆಯೇ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ನೀಡುವ ಗ್ರಹ ಕೂಡ ಶುಕ್ರ. ಶುಕ್ರನ ಸಂಕ್ರಮಣವು 3 ರಾಶಿಯವರಿಗೆ ಬಹಳಷ್ಟು ಹಣವನ್ನು ನೀಡುತ್ತದೆ.   

Written by - Ranjitha R K | Last Updated : May 4, 2022, 08:39 AM IST
  • ಶುಕ್ರ ಗ್ರಹದ ಅನುಗ್ರಹವು ಜೀವನದಲ್ಲಿ ಎಲ್ಲಾ ಸೌಕರ್ಯಗಳನ್ನು ನೀಡುತ್ತದೆ.
  • ಕೆಲವರು ಹುಟ್ಟಿನಿಂದಲೇ ಶುಕ್ರ ಗ್ರಹದ ಅನುಗ್ರಹವನ್ನು ಪಡೆದಿರುತ್ತಾರೆ.
  • ಶುಕ್ರನ ಈ ಸಂಕ್ರಮಣವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿದೆ.
Shukra Gochar 2022: ಮುಂದಿನ 20 ದಿನಗಳವರೆಗೆ ಈ ರಾಶಿಯವರ ಮೇಲೆ  ಹಣದ ಹೊಳೆ ಹರಿಸಲಿದ್ದಾನೆ ಶುಕ್ರ  title=
Venus Transit May 2022 (file photo)

ಬೆಂಗಳೂರು : Venus Transit May 2022 : ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹದ ಅನುಗ್ರಹವು ಜೀವನದಲ್ಲಿ ಎಲ್ಲಾ ಸೌಕರ್ಯಗಳನ್ನು ನೀಡುತ್ತದೆ. ಆದ್ದರಿಂದ ಶುಕ್ರ ಗ್ರಹವನ್ನು ಸಂತೋಷವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಕೆಲವರು ಹುಟ್ಟಿನಿಂದಲೇ ಶುಕ್ರ ಗ್ರಹದ ಅನುಗ್ರಹವನ್ನು ಪಡೆದಿರುತ್ತಾರೆ. ಕೆಲವು ದಿನಗಳ ಹಿಂದೆ ಶುಕ್ರ ಗ್ರಹವು ಮೀನ ರಾಶಿಯನ್ನು ಪ್ರವೇಶಿಸಿದೆ. ಶುಕ್ರನ ಈ ಸಂಕ್ರಮಣವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿದೆ. ಮೇ 23 ರವರೆಗೆ ಶುಕ್ರನು ಮೀನ ರಾಶಿಯಲ್ಲಿಯೇ ಇರುತ್ತಾನೆ. ಈ ಅವಧಿಯಲ್ಲಿ 3 ರಾಶಿಯವರ ಮೇಲೆ ಶುಕ್ರನ ಕೃಪಾ ದೃಷ್ಟಿ ಇರುತ್ತದೆ. ಶುಕ್ರನ ಕೃಪೆಯಿಂದ ಈ ರಾಶಿಯ ಜನರ ಮೇಲೆ ಹಣದ ಹೊಳೆಯೇ ಹರಿಯಲಿದೆ.  

ವೃಷಭ : ವೃಷಭ ರಾಶಿಯ ಅಧಿಪತಿ ಶುಕ್ರ. ಮೀನ ರಾಶಿಗೆ ಶುಕ್ರನ ಪ್ರವೇಶದಿಂದ ವೃಷಭ ರಾಶಿಯವರಿಗೆ ಬಹಳಷ್ಟು ಲಾಭವಾಗಲಿದೆ. ಈ ರಾಶಿಯವರ ಆದಾಯ ಹೆಚ್ಚಾಗುವ ಸಂಭವ  ಹೆಚ್ಚಿದೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಉದ್ಯೋಗ ಸಿಗಬಹುದು. ವ್ಯಾಪಾರಿಗಳಿಗೂ ಲಾಭವಾಗಲಿದೆ. ವ್ಯಾಪಾರಿಗಳ ವ್ಯಾಪಾರ ಹೆಚ್ಚಾಗುತ್ತದೆ. ವಿಶೇಷವಾಗಿ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ತಮ್ಮ ಕೆಲಸದಿಂದ ಹೆಚ್ಚಿನ ಪ್ರಯೋಜನವಾಗಲಿದೆ.  

ಇದನ್ನೂ ಓದಿ : ಮೇ 10ರ ನಂತರ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ: ಈ ರಾಶಿಯವರಿಗೆ ಅದೃಷ್ಟ

ಮಿಥುನ : ಶುಕ್ರನ ಸಂಕ್ರಮಣವು ಮಿಥುನ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಬಲವಾದ ಲಾಭವನ್ನು ನೀಡುತ್ತದೆ. ಹೊಸ ಉದ್ಯೋಗ ದೊರೆಯಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು. ಇದು ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸುಧಾರಣೆಯನ್ನು ತರುತ್ತದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಒಟ್ಟಿನಲ್ಲಿ ಈ ಸಮಯ ಸಾಕಷ್ಟು ಲಾಭವನ್ನು ನೀಡಲಿದೆ. 

ಕರ್ಕಾಟಕ : ಕರ್ಕಾಟಕ ರಾಶಿಯವರ ಕೆಲಸಗಳು ಸುಲಭವಾಗಿ ನೆರವೇರುತ್ತವೆ. ಅದೃಷ್ಟವು  ನಿಮ್ಮೊಂದಿಗೆ ಇರಲಿದೆ. ಇದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಯೋಜನವನ್ನು ನೀಡುತ್ತದೆ. ಬಹಳ ಸಮಯದ ನಂತರ ಜೀವನದಲ್ಲಿ ಸಂತೋಷದ ಸುದ್ದಿ ಕೇಳಿ ಬರಲಿದೆ. ಪ್ರಯಾಣದಿಂದ  ಲಾಭವಾಗಲಿದೆ. ಸಂಬಂಧಗಳು ಉತ್ತಮವಾಗಿರುತ್ತವೆ. ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಇದು ಉತ್ತಮ ಸಮಯ. ಆರ್ಥಿಕ ಲಾಭ ಉಂಟಾಗಲಿದೆ. 

ಇದನ್ನೂ ಓದಿ : Palmistry : ಅದೃಷ್ಟವಂತರ ಅಂಗೈಯಲ್ಲಿ ಈ ಶನಿ ರೇಖೆ : ಶನಿ ದೇವನ ಕೃಪೆಯಿಂದ ಹಣದ ಹೊಳೆ!

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News