Health Tips: ಬೊಜ್ಜಿನ ಸಮಸ್ಯೆ ನಿಯಂತ್ರಣ ಹೇಗೆ? ಇಲ್ಲಿದೆ ನೋಡಿ ಸುಲಭ ಪರಿಹಾರ
ಬೊಜ್ಜು ಮಧುಮೇಹ ಮತ್ತು ಹೃದಯಾಘಾತದಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಮೂಲವಾಗುತ್ತದೆ. ಆದ್ದರಿಂದ ನಾವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಬಹುಮುಖ್ಯ. ಬೊಜ್ಜಿನ ಸಮಸ್ಯೆ ನಿಯಂತ್ರಣಕ್ಕೆ ಇಲ್ಲಿವೆ ನೋಡಿ ಸುಲಭ ಪರಿಹಾರಗಳು.
ನವದೆಹಲಿ: ಬೊಜ್ಜಿನ ಸಮಸ್ಯೆ(Belly Fat) ಇಂದು ಪ್ರತಿಯೊಬ್ಬರಿಗೂ ತಲೆನೋವಾಗಿ ಪರಿಣಮಿಸಿದೆ. ಜೀವನಶೈಲಿಯ ಮತ್ತು ಆಹಾರ ಪದ್ಧತಿಯಿಂದಾಗಿ ಇಂದು ಅನೇಕರು ಈ ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಾರೆ. ಒಂದು ಸರಿ ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾದರೆ ಅನೇಕ ರೀತಿಯ ತೊಂದರೆಗಳು ಎದುರಾಗುತ್ತವೆ. ಬೊಜ್ಜನ್ನು ನಿರ್ಲಕ್ಷ್ಯ ಮಾಡಿದರೆ ನಿಮ್ಮ ಜೀವಕ್ಕೆ ಅಪಾಯವುಂಟಾಗುತ್ತದೆ.
ಸತತ ಪ್ರಯತ್ನದ ನಂತರವೂ ಕೊಬ್ಬನ್ನು ಕಡಿಮೆ(Weight loss) ಮಾಡಲು ಸಾಧ್ಯವಾಗದಿದ್ದರೆ ಕೆಲವು ಪರಿಹಾರಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ಸಿಂಪಲ್ ಸಲಹೆಗಳನ್ನು ಪಾಲಿಸಿದರೆ ಸಾಕು ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ಈ ಪರಿಹಾರಗಳನ್ನು ಪಾಲಿಸುವ ಮುನ್ನ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳುವುದನ್ನು ಎಂದಿಗೂ ಮರೆಯಬೇಡಿ. ನೀವು ಕೇವಲ ಎರಡೇ ದಿನಗಳಲ್ಲಿ ಫಲಿತಾಂಶ ಕಾಣಬಹುದು. ನೀವು ಪ್ರತಿದಿನ ಇದನ್ನೂ ರೂಢಿಸಿಕೊಂಡರೆ ತುಂಬಾ ಪ್ರಯೋಜನಕಾರಿಯಾಗಲಿದೆ. ನಿಮ್ಮ ಬೆಳೆಯುತ್ತಿರುವ ಹೊಟ್ಟೆ ಸಮಸ್ಯೆ ನಿಯಂತ್ರಿಸಲು ಉಪಯುಕ್ತ ಸಲಹೆಗಳು ಇಲ್ಲಿವೆ ನೋಡಿ.
ಇದನ್ನೂ ಓದಿ: ಬೆಳಿಗ್ಗೆ ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗಿ ಬಿಡುತ್ತದೆ
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?
1. ಬಿಸಿ ನೀರು ಕುಡಿಯಿರಿ
ಚಳಿಗಾಲದಲ್ಲಿ ಬಿಸಿ ನೀರು(Hot Water) ಕುಡಿಯುವುದನ್ನು ರೂಢಿಸಿಕೊಳ್ಳಿ. ಇದು ಶೀತದಂತಹ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರ ಜೊತೆಗೆ ನಿಮ್ಮ ಕೊಬ್ಬನ್ನು ಕಡಿಮೆ ಮಾಡುತ್ತದೆ. ಬೆಳಿಗ್ಗೆ ಹಾಲಿನ ಚಹಾದ ಬದಲಿಗೆ ಬಿಸಿ ಕುದಿಸಿದ ನೀರನ್ನು ಕುಡಿಯಿರಿ. ಇದರೊಂದಿಗೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯೂ ಉತ್ತಮವಾಗಿರುತ್ತದೆ. ಕೇವಲ 2 ವಾರಗಳಲ್ಲಿ ಬಿಸಿನೀರು ನಿಮ್ಮ ದೇಹದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
2. ಉಪ್ಪು-ಸಕ್ಕರೆ ಸೇವನೆ ಕಡಿಮೆ ಮಾಡಿ
ಸಕ್ಕರೆ(Suger)ಯಿಂದ ತಯಾರಿಸಿದ ವಸ್ತುಗಳನ್ನು ತಿನ್ನುವುದರಿಂದ ಬೊಜ್ಜು ಹೆಚ್ಚಾಗುತ್ತದೆ ಮತ್ತು ಉಪ್ಪಿನಲ್ಲಿ(Salt) ಸೋಡಿಯಂ ಕೂಡ ಇರುತ್ತದೆ. ಇದು ಬೊಜ್ಜಿಗೆ ಕಾರಣವಾಗಬಹುದು. ಅನೇಕ ಅಧ್ಯಯನ ವರದಿಗಳಲ್ಲಿ ಸಕ್ಕರೆ ಭರಿತ ಆಹಾರಗಳ ಜೊತೆಗೆ ಅತಿಯಾದ ಉಪ್ಪು ಸೇವನೆಯು ಸ್ಥೂಲಕಾಯತೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
3. ಮತ್ತೆ ಮತ್ತೆ ಆಹಾರ ಸೇವಿಸಬೇಡಿ
ಚಳಿಗಾಲದಲ್ಲಿ ಮತ್ತೆ ಮತ್ತೆ ಏನಾದರೂ ತಿನ್ನುವ ಆಸೆ ಇರುತ್ತದೆ. ಆದರೆ ಪದೇ ಪದೇ ಆಹಾರ(Food) ಸೇವಿಸುವುದು ನಿಮಗೆ ತೊಂದರೆಯನ್ನುಂಟು ಮಾಡುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಕೆಲವೊಮ್ಮೆ ದೇಹದಲ್ಲಿ ನೀರಿನ ಕೊರತೆಯಾದಾಗ ಹಸಿವಿನ ಭಾವನೆ ಉಂಟಾಗುತ್ತದೆ. ಆದ್ದರಿಂದ ನಿಮಗೆ ಏನಾದರೂ ತಿನ್ನಲು ಅನಿಸಿದಾಗಲೆಲ್ಲಾ ನೀರು ಕುಡಿಯಿರಿ. ನೀರು ಕುಡಿದ ನಂತರವೂ ನಿಮಗೆ ಹಸಿವಾಗುತ್ತಿದ್ದರೆ ನಂತರ ಆಹಾರ ಸೇವಿಸಿರಿ.
ಇದನ್ನೂ ಓದಿ: ಡಯಾಬಿಟೀಸ್ ರೋಗಿಗಳು ಮಧ್ಯಾಹ್ನದ ಊಟಕ್ಕೆ ಈ ವಸ್ತುಗಳನ್ನು ತಿನ್ನಬೇಕು
4. ಫೈಬರ್ ಸಮೃದ್ಧವಾಗಿರುವ ಆಹಾರ ಸೇವಿಸಿ
ಆಹಾರದಲ್ಲಿರುವ ನಾರಿನಂಶವು ನಿಮ್ಮ ಜೀರ್ಣಕ್ರಿಯೆಯನ್ನು ಸರಿಯಾಗಿಡುತ್ತದೆ. ಇದರಿಂದಾಗಿ ಬೊಜ್ಜು ಹೆಚ್ಚಾಗುವುದಿಲ್ಲ ಮತ್ತು ಅಸಿಡಿಟಿ ಕೂಡ ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ಫೈಬರ್ ಸಮೃದ್ಧವಾಗಿರುವ ಆಹಾರ ಸೇವಿಸಿರಿ. ಬಿಸ್ಕತ್ತುಗಳು ಮತ್ತು ಹಿಟ್ಟಿನಿಂದ ಮಾಡಿದ ವಸ್ತುಗಳಿಂದ ದೂರವಿರಿ. ಏಕೆಂದರೆ ಇದು ಬೊಜ್ಜನ್ನೂ ಹೆಚ್ಚಿಸುತ್ತದೆ.
5. ವ್ಯಾಯಾಮ
ಕೊನೆಯದಾಗಿ ನೀವು ನಿಯಮಿತವಾಗಿ ವ್ಯಾಯಾಮ(Exercise) ಮಾಡುವುದು ಮುಖ್ಯ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಅತ್ಯಗತ್ಯ. ನಿಮ್ಮ ಸೊಂಟ ಮತ್ತು ಹೊಟ್ಟೆಯ ಮೇಲೆ ಕೇಂದ್ರೀಕರಿಸುವ ವ್ಯಾಯಾಮಗಳನ್ನು ಮಾಡಬೇಕು. ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ಆರೋಗ್ಯದ ಜೊತೆಗೆ ಬೊಜ್ಜು ಕೂಡ ಕಡಿಮೆಯಾಗುತ್ತದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.