ನವದೆಹಲಿ : ಮಧುಮೇಹ ರೋಗಿಗಳು (Diabetes) ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಆಹಾರ ಸೇವನೆ ವೇಳೆ ತೋರುವ ನಿರ್ಲಕ್ಷ್ಯವು ಕೂಡಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ಹೆಚ್ಚಿಸುತ್ತದೆ. ಇನ್ನು ಕೆಲವೊಂದು ಆಹಾರ ಸೇವನೆ ಮೂಲಕ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ತಜ್ಞರ ಪ್ರಕಾರ, ಆಹಾರದಲ್ಲಿ ಹಣ್ಣುಗಳು, ಹಸಿರು ತರಕಾರಿಗಳು, ಧಾನ್ಯಗಳು, ಹೆಲ್ದಿ ಫಾಟ್ ಮತ್ತು ಪ್ರೋಟೀನ್ ಗಳನ್ನು ಸೇರಿಸಬೇಕು.
ಮಧುಮೇಹಿಗಳು ಮಧ್ಯಾಹ್ನದ ಊಟದಲ್ಲಿ ಈ ಪದಾರ್ಥಗಳನ್ನು ಸೇವಿಸಬೇಕು :
1. ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು :
ಮಧುಮೇಹ ರೋಗಿಗಳು (Diabetes) ತಮ್ಮ ಊಟದಲ್ಲಿ ಬೇಳೆಕಾಳುಗಳನ್ನು ಸೇರಿಸಬೇಕು. ಇದು ಪ್ರೋಟೀನ್, ಪೊಟ್ಯಾಸಿಯಮ್, ಫೈಬರ್ ಮತ್ತು ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತದೆ. ಇದಲ್ಲದೆ, ಬಹುಧಾನ್ಯದ ಚಪಾತಿ (Multi grain roti), ಬ್ರೌನ್ ರೈಸ್, ಬಾರ್ಲಿ ಮತ್ತು ಕ್ವಿನೋವಾವನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ಕಾರಣದಿಂದಾಗಿ, ದೇಹವು ಆರೋಗ್ಯಕರ ಕಾರ್ಬೋಹೈಡ್ರೇಟ್ ಗಳು, ಫೈಬರ್, ಪ್ರೋಟೀನ್, ವಿಟಮಿನ್ ಗಳನ್ನೂ ಪಡೆಯುತ್ತದೆ.
ಇದನ್ನೂ ಓದಿ : ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಜಿರಳೆ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು
2. ಮೊಟ್ಟೆ :
ಮೊಟ್ಟೆಯಲ್ಲಿ (Egg) ಬಹಳಷ್ಟು ಪ್ರಮಾಣದಲ್ಲಿ ಪ್ರೋಟೀನ್ ಮತ್ತು ಎಲ್ಲಾ ಅಮೈನೋ ಆಮ್ಲಗಳು ಇರುತ್ತವೆ. ಇದು ಆರೋಗ್ಯವನ್ನು ಕಾಪಾಡುತ್ತವೆ. ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ (Egg Benefits). ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಮೊಟ್ಟೆಗಳನ್ನು ತಿನ್ನುವ ಮೂಲಕ, ಟೈಪ್ 2 ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಅಪಾಯವನ್ನು ತಪ್ಪಿಸಬಹುದು.
3. ಹಸಿರು ಎಲೆಗಳ ತರಕಾರಿಗಳು :
ಮಧ್ಯಾಹ್ನದ ಊಟದಲ್ಲಿ ಹಸಿರು ಸೊಪ್ಪಿನ ತರಕಾರಿಗಳನ್ನು (Green vegetables) ಸೇವಿಸಿ. ಪಾಲಕ್, ಮೆಂತ್ಯ, ಬಸಳೆ, ಬ್ರೊಕೊಲಿ, ಸೋರೆಕಾಯಿ, ಹಾಗಲಕಾಯಿ ಮುಂತಾದ ತರಕಾರಿಗಳನ್ನು ತಿನ್ನಬಹುದು. ಈ ತರಕಾರಿಗಳು ಕಡಿಮೆ ಕ್ಯಾಲೋರಿಗಳನ್ನು ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ. ಅದೇ ಸಮಯದಲ್ಲಿ, ಹಸಿರು ತರಕಾರಿಗಳು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿವೆ, ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಹಸಿರು ತರಕಾರಿಗಳು ಹೃದಯ ಮತ್ತು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಇವುಗಳಲ್ಲಿ ವಿಟಮಿನ್ ಸಿ ಕೂಡ ಕಂಡುಬರುತ್ತದೆ. ಇದು ಟೈಪ್ 2 ಡಯಾಬಿಟಿಸ್ (Type 2 diabetes) ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ರಕ್ತದೊತ್ತಡವನ್ನು (Blood pressure) ನಿಯಂತ್ರಣದಲ್ಲಿರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ರಾತ್ರಿ ಹೊತ್ತು ನೀರು ಕುಡಿಯುವ ಅಭ್ಯಾಸ ನಿಮಗೂ ಇದ್ದರೆ, ಈ ವಿಚಾರ ತಿಳಿದಿರಲಿ
5. ಮೊಸರು :
ಮೊಸರು (Curd) ತಿನ್ನುವುದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಜೊತೆಗೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಅದೇ ಸಮಯದಲ್ಲಿ, ಮೊಸರಿನಲ್ಲಿ ಕಂಡುಬರುವ CLA ಅಂತಹ ಕೊಬ್ಬು, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವೂ ನಿಯಂತ್ರಣದಲ್ಲಿರುತ್ತದೆ (Curd Benefits).
5. ಫ್ಯಾಟಿ ಫಿಶ್ :
ಇನ್ನು ಮಾಂಸಾಹಾರಿಗಳು ಫ್ಯಾಟಿ ಫಿಶ್ ಗಳನ್ನು (Fatty Fish)ಊಟದಲ್ಲಿ ಸೇರಿಸಿ. ನೀವು ಊಟದಲ್ಲಿ ಸಾರ್ಡೀನ್ , ಹೆರಿಂಗ್, ಸಾಲ್ಮನ್ ಮೀನುಗಳನ್ನು ಸೇವಿಸಬಹುದು. ಒಮೆಗಾ-3 ಕೊಬ್ಬಿನಾಮ್ಲಗಳು, DHA ಮತ್ತು EPA ಗಳು ಮೀನುಗಳಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ಹೃದಯವನ್ನು ಸಹ ಆರೋಗ್ಯಕರವಾಗಿರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.