Weight Loss: ಸುಲಭವಾಗಿ ತೂಕ ಇಳಿಸಲು ತುಂಬಾ ಪ್ರಯೋಜನಕಾರಿ ಈ ಜ್ಯೂಸ್
Weight Loss: ತೂಕ ಇಳಿಕೆ ಪ್ರಸ್ತುತ ಜನರನ್ನು ಬಾಧಿಸುತ್ತಿರುವ ಅತಿ ದೊಡ್ಡ ಸಮಸ್ಯೆ. ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರೂ ಕೂಡ ನಿರೀಕ್ಷಿತ ಫಲ ಸಿಗದೇ ನಿರಾಶೆಗೊಳ್ಳುವವರೇ ಹೆಚ್ಚು. ಆದರೆ, ಈ ಬಗ್ಗೆ ಚಿಂತೆಬಿಡಿ. ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಒಂದೇ ಒಂದು ತರಕಾರಿಯ ಸಹಾಯದಿಂದ ನೀವು ನಿಮ್ಮ ಹೊಟ್ಟೆಯ ಕೊಬ್ಬನ್ನು ಬಹಳ ಸುಲಭವಾಗಿ ಕರಗಿಸಬಹುದು. ಮಾತ್ರವಲ್ಲ, ಇದು ನಿಮ್ಮ ಆರೋಗ್ಯಕ್ಕೂ ಕೂಡ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
Weight Loss Juice: ತೂಕ ನಷ್ಟ, ಅದರಲ್ಲೂ ಹೊಟ್ಟೆ ಮತ್ತು ಸೊಂಟದ ಸುತ್ತ ಶೇಖರವಾಗಿರುವ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭದ ಮಾತಲ್ಲ. ಜೋತು ಬಿದ್ದ ಹೊಟ್ಟೆ, ಸೊಂಟದ ಸುತ್ತಲಿನ ಕೊಬ್ಬು ದೇಹದ ಅಂದವನ್ನೇ ವಿರೂಪಗೊಳಿಸುತ್ತದೆ. ಮಾತ್ರವಲ್ಲ, ಬೇಕೆಂದ ಬಟ್ಟೆವನ್ನು ಧರಿಸಲು ಕೂಡ ಸಾಧ್ಯವಾಗುವುದಿಲ್ಲ. ನಮ್ಮಲ್ಲಿ ಕೆಲವರು ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರೂ ಕೂಡ ನಿರೀಕ್ಷಿತ ಫಲ ಸಿಗದೇ ನಿರಾಶೆಗೊಳ್ಳುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ನಿರಾಶೆಗೊಳ್ಳಬೇಡಿ. ಬದಲಿಗೆ, ನಿಮ್ಮ ಡಯಟ್ನಲ್ಲಿ ಈ ಒಂದು ತರಕಾರಿ ಅನ್ನು ಸೇರಿಸಿ ಆರೋಗ್ಯಕರವಾಗಿ ನೈಸರ್ಗಿಕವಾಗಿ ನಿಮ್ಮ ತೂಕ ಇಳಿಸಿಕೊಳ್ಳಿ. ಯಾವುದೀ ತರಕಾರಿ? ಅದನ್ನು ಯಾವ ರೀತಿ ಸೇವಿಸಿದರೆ ಒಳ್ಳೆಯದು ಎಂದು ತಿಳಿಯೋಣ...
ದೈನಂದಿನ ಆಹಾರದಲ್ಲಿ ಹಣ್ಣು ತರಕಾರಿಗಳ ಸೇವನೆಯೂ ಬಹಳ ಮುಖ್ಯ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಬೇರೆ ತರಕಾರಿಗಳ ಜೊತೆಗೆ ಕ್ಯಾರೆಟ್ ಅನ್ನು ನಿಮ್ಮ ಡಯಟ್ನಲ್ಲಿ ತಪ್ಪದೇ ಸೇರಿಸಿ. ಕ್ಯಾರೆಟ್ ನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್, ಆಂಟಿ-ಆಕ್ಸಿಡೆಂಟ್ಗಳು, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಬಿ 8 ಮತ್ತು ವಿಟಮಿನ್ ಕೆ, ಕಬ್ಬಿಣದಂತಹ ಖನಿಜಗಳು ಅನೇಕ ರೋಗಗಳಿಂದ ನಮ್ಮನ್ನು ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ, ಉತ್ತಮ ಆರೋಗ್ಯಕ್ಕಾಗಿ ನಿತ್ಯ ಕ್ಯಾರೆಟ್ ಜ್ಯೂಸ್ ಸೇವಿಸುವುದು ಉತ್ತಮ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಹಾಗಿದ್ದರೆ, ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯೋಣ...
ಇದನ್ನೂ ಓದಿ- Superfoods For Children: ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು 5 ಸೂಪರ್‌ಫುಡ್‌ಗಳಿವು
ನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳಿವು:
* ಆರೋಗ್ಯಕರ ತೂಕ ನಷ್ಟ:
ತೂಕ ನಷ್ಟಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಕ್ಯಾರೆಟ್ ಜ್ಯೂಸ್ ಅತ್ಯುತ್ತಮ ಆಹಾರವಾಗಿದೆ. ಕ್ಯಾರೆಟ್ ನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ, ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ದೀರ್ಘಕಾಲ ಹಸಿವಾಗುವುದಿಲ್ಲ. ಇದರಿಂದಾಗಿ, ಆಹಾರ ಸೇವನೆಯೂ ಕಡಿಮೆ ಆಗುತ್ತದೆ. ಮಾತ್ರವಲ್ಲ, ಆಗಾಗ್ಗೆ, ಏನಾದರೂ ತಿನ್ನುವ ಕೆಟ್ಟ ಅಭ್ಯಾಸವನ್ನೂ ತಪ್ಪಿಸಬಹುದು. ನಿಯಮಿತವಾಗಿ, ಇದನ್ನು ರೂಢಿಸಿಕೊಳ್ಳುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತ ಶೇಖರಣೆ ಆಗಿರುವ ಕೊಬ್ಬು ನಿಧಾನವಾಗಿ ಕರಗುತ್ತದೆ.
* ರೋಗನಿರೋಧಕ ಶಕ್ತಿ ಹೆಚ್ಚಳ:
ಯಾವುದೇ ಋತುಮಾನವಿರಲಿ ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಬಹಳ ಮುಖ್ಯ. ಅದರಲ್ಲೂ, ಮಳೆಗಾಲ, ಚಳಿಗಾಲದಲ್ಲಿ ನೆಗಡಿ, ಶೀತ, ಕೆಮ್ಮಿನಂತಹ ಸಾಮಾನ್ಯ ಸೋಂಕುಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಚೆನ್ನಾಗಿರಬೇಕು. ನೀವು ನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ- ಎಮ್ಮೆ ಹಾಲು ಈ ರೋಗಗಳಿಗೆ ಉತ್ತಮ ಔಷಧಿಯಾಗಿದೆ..!
* ಚರ್ಮದ ಆರೋಗ್ಯ:
ನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಚರಮದ ಆರೋಗ್ಯಕ್ಕೂ ಇದನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕ್ಯಾರೆಟ್ ಜ್ಯೂಸ್ ನಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ನೀಡಲಿದೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ನೀವು ಆರೋಗ್ಯಕರ ಸುಂದರ ತ್ವಚೆಯನ್ನು ಬಯಸಿದರೆ ನಿಮ್ಮ ಡಯಟ್ನಲ್ಲಿ ಕ್ಯಾರೆಟ್ ಜ್ಯೂಸ್ ಅನ್ನು ತಪ್ಪದೇ ಸೇರಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.