Salt and Mustard Oil Benefits: ಸಾಸಿವೆ ಎಣ್ಣೆ ಮತ್ತು ಉಪ್ಪು ನಮ್ಮ ಅಡುಗೆಮನೆಯಲ್ಲಿ ಸಿಗುವ ಎರಡು ಪ್ರಮುಖ ಪದಾರ್ಥಗಳಾಗಿವೆ. ಈ ಎರಡೂ ಪದಾರ್ಥಗಳ ಮಿಶ್ರಣಗಳನ್ನು ಪ್ರತಿಯೊಂದು ರೀತಿಯ ತರಕಾರಿಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎರಡೂ ಪದಾರ್ಥಗಳಿಂದ ನಮ್ಮ ದೇಹಕ್ಕಾಗುವ ಲಾಭ ನಿಮಗೆ ತಿಳಿದಿದೆಯೇ? ಹೌದು, ಸಾಸಿವೆ ಎಣ್ಣೆ ಮತ್ತು ಉಪ್ಪು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುತ್ತದವೆ. ವಿಶೇಷವಾಗಿ ಇದು ಹಲ್ಲು ನೋವು, ಹಲ್ಲುಗಳ ಹಳದಿ ಮತ್ತು ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಇಂದು ಈ ಲೇಖನದಲ್ಲಿ ಸಾಸಿವೆ ಎಣ್ಣೆ ಮತ್ತು ಉಪ್ಪಿನಿಂದ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.


COMMERCIAL BREAK
SCROLL TO CONTINUE READING

ಸಾಸಿವೆ ಎಣ್ಣೆ ಮತ್ತು ಉಪ್ಪಿನ ಪ್ರಯೋಜನಗಳು
ವಸಡುನೋವನ್ನು ನಿವಾರಿಸುತ್ತದೆ

ವಸಡು ನೋವನ್ನು ನಿವಾರಿಸಲು ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ನೀವು ಬಳಸಬಹುದು. ಉಪ್ಪಿನಲ್ಲಿರುವ ಫ್ಲೋರೈಡ್ ವಸಡುಗಳ ಬಲವನ್ನು ಉತ್ತೇಜಿಸುತ್ತದೆ, ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಇದನ್ನು ಬಳಸಲು, 1 ಪಿಂಚ್ ಉಪ್ಪಿನಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ಈಗ ಅದರಿಂದ ವಸಡುಗಳ ಮೇಲೆ ಮೆಲ್ಲನೆ ಮಸಾಜ್ ಮಾಡಿ. ಇದರಿಂದ ವಸಡು ನೋವು ಕಡಿಮೆಯಾಗುತ್ತದೆ.


ಹಲ್ಲುಗಳ ಹಳದಿ ಬಣ್ಣವನ್ನು ತೊಡೆದುಹಾಕಲು ಉಪಯೋಗಿಸಬಹುದು
ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಬಳಸಬಹುದು. ಇದು ಹಲ್ಲುಗಳಿಗೆ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಇದು ಹಲ್ಲುಗಳನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ನಿಮ್ಮ ಹಲ್ಲುಗಳ ಮೇಲೆ ಕೊಳಕು ಸಂಗ್ರಹವಾಗಿದ್ದರೆ ಅದನ್ನು ತೆಗೆದುಹಾಕುತ್ತದೆ, ಇದಕ್ಕಾಗಿ 1 ಟೀ ಚಮಚ ಉಪ್ಪನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬೆರೆಸಿ ಮತ್ತು ನಿಮ್ಮ ಬೆರಳುಗಳಿಂದ ನಿಮ್ಮ ಹಲ್ಲುಗಳನ್ನು ಉಜ್ಜಿಕೊಳ್ಳಿ. ಇದು ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕುತ್ತದೆ.


ತೂಕ ಇಳಿಕೆಗೆ ತುಂಬಾ ಲಾಭಕಾರಿ
ಬಾಯಿಯ ಆರೋಗ್ಯದ ಹೊರತಾಗಿ, ಸಾಸಿವೆ ಎಣ್ಣೆ ಮತ್ತು ಉಪ್ಪು ನಿಮ್ಮ ತೂಕವನ್ನು ಸಹ ಕಡಿಮೆ ಮಾಡಲು ಸಹಕಾರಿಯಾಗಿದವೆ. ಇದರಲ್ಲಿರುವ ಗುಣಲಕ್ಷಣಗಳು ನಿಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇದು ನಿಮ್ಮ ದೇಹದ ತೂಕವನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಇದನ್ನು ಮಾಡಲು, ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಸಾಸಿವೆ ಎಣ್ಣೆಯನ್ನು ನಿಯಮಿತವಾಗಿ ಶಾಮೀಲುಗೊಳಿಸಿ.


ಇದನ್ನೂ ಓದಿ-Health Tips: ನೀವೂ ಕೂಡ ಒಮ್ಮೆ ತಯಾರಿಸಿದ ಟೀ ಪದೇ ಪದೇ ಬಿಸಿ ಮಾಡಿ ಕುಡಿಯುತ್ತೀರಾ? ಈಗಲೇ ಎಚ್ಚೆತ್ತುಕೊಳ್ಳಿ !


ಮೇಲಿನ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಸಾಸಿವೆ ಎಣ್ಣೆ ಮತ್ತು ಉಪ್ಪು ನಿಮ್ಮ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಒಂದು ವೇಳೆ  ನಿಮ್ಮ ಸಮಸ್ಯೆಯು ಬಹಳಷ್ಟು ಹೆಚ್ಚಾಗುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ನೀವು ಖಂಡಿತವಾಗಿಯೂ ತಜ್ಞರನ್ನು ಸಂಪರ್ಕಿಸುವುದು ಒಳಿತು.


ಇದನ್ನೂ ಓದಿ-Diabetes: ಕೇವಲ ಒಂದೇ ವಾರದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಸಾಮಾನ್ಯ ಸ್ಥಿತಿಗೆ ತಂದಿಡುತ್ತದೆ ಈ ಗಿಡಮೂಲಿಕೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ