Health Care Tips: ಭಾರತೀಯರಿಗೆ ಚಹಾ ಅತ್ಯಂತ ಪ್ರಿಯವಾದ ಪಾನೀಯವಾಗಿದೆ. ಹೌದು. ನಮ್ಮ ಪ್ರತಿ ಮುಂಜಾನೆ ಚಹಾದೊಂದಿಗೆ ಆರಂಭಗೊಳ್ಳುತ್ತದೆ ಮತ್ತು ನಾವು ಸಂಜೆಯಲ್ಲೂ ಚಹಾವನ್ನು ಸೇವಿಸುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಚಹಾ ಇಲ್ಲದಿದ್ದರೆ ಬೋರ್ ಫೀಲ್ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹೇಗೋ ಚಹಾ ಸಿಕ್ಕರೆ ಸಾಕು ಎಂದುಕೊಳ್ಳುತ್ತಾರೆ. ಆದರೆ ಚಹಾ ಕುಡಿಯುವ ಹವ್ಯಾಸದಲ್ಲಿ, ನೀವು ಮೊದಲೇ ತಯಾರಿಸಿ ಇಟ್ಟ ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯುತಿಲ್ಲವಲ್ಲ? ಏಕೆಂದರೆ ಚಹಾವನ್ನು ತಯಾರಿಸಿದ ನಂತರ ಅದನ್ನು ಹಾಗೆಯೇ ಇರಿಸಲಾಗುತ್ತದೆ ಮತ್ತು ಸಮಯ ಕಳೆದಂತೆ ತಣ್ಣಗಾಗುತ್ತದೆ, ನಂತರ ಅದನ್ನು ಮತ್ತೆ ಬಿಸಿ ಮಾಡಿ ಕುಡಿಯಲಾಗುತ್ತದೆ. ನೀವು ಈ ರೀತಿ ಮಾಡುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಇದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಯಾಗಬಹುದು. ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ನೀವು ಯಾವ ಸಮಸ್ಯೆಗಳನ್ನು ಎದುರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಪದೇ ಪದೇ ಬಿಸಿ ಮಾಡಿ ಚಹಾವನ್ನು ಕುಡಿಯುವುದರಿಂದಾಗುವ ಅನಾನುಕೂಲಗಳು
>> ನೀವು ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತಿದ್ದರೆ, ಅದರಲ್ಲಿ ಬ್ಯಾಕ್ಟೀರಿಯಾಗಳು ದಾಳಿ ಇಡುತ್ತವೆ. ನಿಜವಾಗಿ ಟೀ ಮಾಡಿದಾಗ ಚೆನ್ನಾಗಿರುತ್ತೆ ಆದರೆ ಅದು ತಣ್ಣಗಾಗುತ್ತಿದ್ದಂತೆ ಬ್ಯಾಕ್ಟೀರಿಯಾಗಳು ಒಳಸೇರುತ್ತಲೇ ಇರುತ್ತವೆ ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಯದ ನಂತರ ಮತ್ತೆ ಬಿಸಿ ಮಾಡಿದಾಗ ಈ ಬ್ಯಾಕ್ಟೀರಿಯಾಗಳು ಕ್ರಿಯಾಶೀಲವಾಗಿ ಟೀಯಲ್ಲಿ ಕರಗುತ್ತವೆ.ಮತ್ತು ಟೀ ಮೂಲಕ ನಮ್ಮ ಹೊಟ್ಟೆಯ ಮೇಲೆ ದಾಳಿ ಮಾಡಬಹುದು.
>> ತಣ್ಣನೆಯ ಚಹಾವನ್ನು ಮತ್ತೆ ಬಿಸಿಮಾಡಿದಾಗ, ಚಹಾದ ಎಲ್ಲಾ ಉತ್ತಮ ಕಿಣ್ವಗಳು ನಾಶವಾಗುತ್ತವೆ ಮತ್ತು ಚಹಾದ ಕೆಟ್ಟ ಕಿಣ್ವಗಳು ಹೊಟ್ಟೆಯ ಮೇಲೆ ದಾಳಿ ಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಅಸಿಡಿಟಿ ಸಮಸ್ಯೆ, ಹೊಟ್ಟೆಯಲ್ಲಿ ಉರಿ, ಅಜೀರ್ಣ, ವಾಂತಿ ಅಥವಾ ಭೇದಿ ಉಂಟಾಗುತ್ತದೆ.
>> ಟ್ಯಾನಿನ್ ಚಹಾದಲ್ಲಿನ ಒಂದು ಸಂಯುಕ್ತವಾಗಿದ್ದು ಅದು ಚಹಾಕ್ಕೆ ಚಹಾದ ರುಚಿಯನ್ನು ನೀಡುತ್ತದೆ. ಪುನಃ ಬಿಸಿಮಾಡಿದಾಗ, ಚಹಾದಿಂದ ಈ ಟ್ಯಾನಿನ್ ನಾಶವಾಗುತ್ತದೆ ಮತ್ತು ಚಹಾದ ರುಚಿ ಬದಲಾಗುತ್ತದೆ, ಅಂದರೆ ಅದು ಕಹಿಯಾಗುತ್ತದೆ. ಇಂತಹ ಚಹಾವು ಹೊಟ್ಟೆಯನ್ನು ಹಾಳುಮಾಡುವುದು ಮಾತ್ರವಲ್ಲದೆ ದೇಹದ ಉಳಿದ ಭಾಗಗಳಿಗೆ ಪ್ರಯೋಜನವನ್ನು ನೀಡುವುದಿಲ್ಲ.
ಇದನ್ನೂ ಓದಿ-Diabetes ರೋಗಿಗಳಿಗೆ ಒಂದು ಪರಿಣಾಮಕಾರಿ ಮನೆಮದ್ದು ಈ ಚಿರೋಂಜಿ ಮಿಲ್ಕ್!
ಎಷ್ಟು ಹಳೆ ತಯಾರಿಸಿಟ್ಟ ಚಹಾ ಕುಡಿಯಬಾರದು?
15 ನಿಮಿಷಗಳ ಕಾಲ ಚಹಾವನ್ನು ಇಟ್ಟುಕೊಂಡು ನಂತರ ಚಹಾವನ್ನು ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಅದರಲ್ಲಿ ಹೊಟ್ಟೆಗೆ ಹಾನಿ ಮಾಡುವ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗುತ್ತವೆ.
ಇದನ್ನೂ ಓದಿ-Cancer ಕಾಯಿಲೆಯಿಂದ ಹಿಡಿದು ಮಧುಮೇಹದವರೆಗೆ ಹಲವು ಕಾಯಿಲೆ ನಿವಾರಣೆಗೆ ವರದಾನ 'ಸಿಹಿ ತುಳಸಿ'!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ