Valentine’s Day 2023 Wishes: ಪ್ರೇಮಿಗಳ ದಿನವನ್ನು ಫೆಬ್ರವರಿ 14 ರಂದು ಆಚರಣೆ ಮಾಡಲಾಗುತ್ತದೆ. ಜನರು ಈ ಸಂದರ್ಭವನ್ನು ತಮ್ಮ ಸಂಗಾತಿ ಅಥವಾ ಕ್ರಶ್‌ಗಳೊಂದಿಗೆ ವಿಶೇಷ ಪ್ರೀತಿಯ ಕ್ಷಣಗಳನ್ನು ಕಳೆಯಲು ಇಚ್ಛಿಸುತ್ತಾರೆ. ಅಷ್ಟೇ ಅಲ್ಲ ಮನಮುಟ್ಟುವಂತೆ ಪ್ರೀತಿಯ ನಿವೇದನೆ ಮಾಡುತ್ತಾರೆ. ಸರ್ಪೈಸ್ ಗಳು, ಉಡುಗೊರೆಗಳನ್ನು ನೀಡುವ ಮೂಲಕ ಈ ದಿನವನ್ನು ಪ್ರೇಮಿಗಳು ಆಚರಣೆ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಪ್ರೇಮಿಗಳ ದಿನವು ಪ್ರೀತಿಯ ಆಚರಣೆಗೆ ಮೀಸಲಿಟ್ಟ ಅರ್ಥಪೂರ್ಣ ಕ್ಷಣ. ಆ ವಿಶೇಷ ದಿನದಂದು ನಿಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ಅರ್ಥಪೂರ್ಣ ಪದಗಳ ಮೂಲಕ ತಿಳಿಸಲು ನಾವಿಂದು ಸಹಾಯ ಮಾಡುತ್ತೇವೆ. ಇಲ್ಲಿ ನೀಡಲಾದ ಸಂದೇಶಗಳನ್ನು ನಿಮ್ಮ ಸಂಗಾತಿ ಕಳುಹಿಸಿ. ಮನದಲ್ಲಿರುವ ಪ್ರೀತಿಗೆ ಅರ್ಥ ನೀಡಿ.


ಇದನ್ನೂ ಓದಿ: Valentine's Day 2023: ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ನೀಡಿ ಈ ವಿಶಿಷ್ಟ ಉಡುಗೊರೆ


ವ್ಯಾಲೆಂಟೈನ್ಸ್ ಡೇ ಸಂದೇಶದಲ್ಲಿ ನಿಮ್ಮ ಸಂಗಾತಿಗೆ ಏನು ಹೇಳಬೇಕೆಂದು ತಿಳಿದಿಲ್ಲದಿದ್ದರೆ ಈ ವರದಿ ಓದಿ.


ಮುಖ್ಯವಾಗಿ ಸಂದೇಶದಲ್ಲಿ ‘ಆ ವ್ಯಕ್ತಿ ನಿಮಗೆ ಏಕೆ ಇಷ್ಟ? ನಿಮ್ಮ ಜೀವನದಲ್ಲಿ ಅವರ ಪಾತ್ರವೇನು? ನೀವು ಕಳೆದ ದಿನ, ನೆನಪುಗಳ ಬಗ್ಗೆ ಬರೆಯಿರಿ, ಆಗ ನಿಮ್ಮ ಪ್ರೀತಿಯ ಜೊತೆ ಸಂದೇಶಕ್ಕೂ ತೂಕ ಬರುತ್ತದೆ. ಇಲ್ಲಿ ಕೆಲವೊಂದು ಸಂದೇಶಗಳನ್ನು ನೀಡಲಾಗಿದ್ದು, ಅವುಗಳನ್ನೂ ಸಹ ನಿಮ್ಮ ಪ್ರೀತಿಯ ಜನರಿಗೆ ಕಳುಹಿಸಿಕೊಡಬಹುದು.


“ನನ್ನ ಸಂತೋಷವು ನಿಮ್ಮಿಂದಲೇ ಪ್ರಾರಂಭವಾಗುವುದು. ಇಂದು, ಎಂದೆಂದೂ ನಾನು ನಿನ್ನನ್ನು ಮನದಾಳದಿಂದ ಪ್ರೀತಿಸುತ್ತೇನೆ. ಪ್ರೇಮಿಗಳ ದಿನದ ಶುಭಾಶಯಗಳು, ನನ್ನ ಪ್ರೀತಿಯೇ”


“ನಾನಿಂದು ಈ ಸ್ಥಾನಕ್ಕೆ ಬರಲು ಕಾರಣ ನೀನು. ನನಗಾಗಿ ನೀನು ಮಾಡಿದ ತ್ಯಾಗ ಎಲ್ಲವನ್ನೂ ಮೀರಿಸಿದ್ದು. ನಿನ್ನ ಪ್ರೀತಿಗೆ ನಾನೆಂದು ಋಣಿ. ಪ್ರೇಮಿಗಳ ದಿನದ ಶುಭಾಶಯಗಳು, ನನ್ನ ಪ್ರೀತಿ”


“ನಾನು ನನ್ನ ಹೃದಯವನ್ನು ಅನುಸರಿಸಿದೆ. ಅದು ನನ್ನನ್ನು ನಿನ್ನ ಬಳಿಗೆ ಕರೆತಂದಿತು. ನಿಸ್ಸಂದೇಹವಾಗಿ ಯಾವುದೇ ಪರಿಸ್ಥಿತಿ ಎದುರಾದರೂ ನಿನ್ನನ್ನೇ ನಾನು ಪ್ರೀತಿಸುವೆ, ಆಯ್ಕೆ ಮಾಡುವೆ. ಐ ಲವ್ ಯೂ…ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು”


“ನಿನ್ನ ಪರಿಪೂರ್ಣತೆಗೆ ಮರುಳಾದೆ ನಾನು, ನೀನಿಲ್ಲದಿದ್ದರೆ ನಾನೂ ಶೂನ್ಯ. ಪ್ರತೀ ಹೆಜ್ಜೆಯಲ್ಲೂ ಬೆಂಬಲವಾಗಿರುವೆ ನಿನಗೆ, ಎಂದೆಂದಿಗೂ ಪ್ರೀತಿಸುವೆ ಪ್ರೀತಿಯೇ…ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು”


“ನನ್ನ ಜಗತ್ತಿನ ಆಕಾಶದಲ್ಲಿ ಸೂರ್ಯನೂ ನೀವೇ, ಚುಕ್ಕಿ ತಾರೆಗಳೂ ನೀವೆ. ನೀವಿರುವ ತನಕ ಯಾವುದಕ್ಕೂ ಭಯಪಡೆನು ನಾನು, ನಿಮ್ಮ ಪ್ರೀತಿ ಮುಂದೆ ಎಲ್ಲವೂ ಶೂನ್ಯ. ಐ ಲವ್ ಯೂ…ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು”


“ನಾವು ಭೇಟಿಯಾದ ದಿನದಿಂದ ಪ್ರತಿದಿನ ನನ್ನನ್ನು ನಗಿಸಲು ಮತ್ತು ನಗುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು ಪ್ರೀತಿಯೇ.


“ಒಳ್ಳೆಯ ಮತ್ತು ಕೆಟ್ಟ ಸಮಯ. ಇವೆರಡರ ನಡುವೆ ನಾವಿದ್ದೇವೆ. ನನಗೆ ಬೇರೇನು ಬೇಡ ನಿನ್ನಹೊರತು. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು”


ಇದನ್ನೂ ಓದಿ: Kiss day 2023 : ಚುಂಬನಕ್ಕೂ ಇದೆ ನಾನಾ ಅರ್ಥ ! ಕಿಸ್ ಡೇಗೆ ತಿಳಿದುಕೊಳ್ಳಿ ಒಂದು ಮುತ್ತಿನ ಕತೆ


“ನಾನು ನಿಮ್ಮೊಂದಿಗೆ ಪ್ರತೀ ಪ್ರೇಮಿಗಳ ದಿನವನ್ನು ಕಳೆಯಲು ಬಯಸುತ್ತೇನೆ. ಎಂದೆಂದೂ ಜೀವಕ್ಕೆ ಜೀವವಾಗಿರುವೆ ನನ್ನೊಲವೇ, ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.