Kiss day 2023 : ಚುಂಬನಕ್ಕೂ ಇದೆ ನಾನಾ ಅರ್ಥ ! ಕಿಸ್ ಡೇಗೆ ತಿಳಿದುಕೊಳ್ಳಿ ಒಂದು ಮುತ್ತಿನ ಕತೆ

Kiss day 2023 : ಹಣೆಯಿಂದ ಕುತ್ತಿಗೆಯವರೆಗೆ ನೀಡುವ ಪ್ರತಿಯೊಂದು ಮುತ್ತಿಗೂ ಇದೆ ನಾನಾ ಅರ್ಥ.  ಕಿಸ್ ಡೇ ಯ  ದಿನದಂದು ಈ ಮಾಹಿತಿಯನ್ನು ನೀವೂ ತಿಳಿದುಕೊಳ್ಳಿ. 

Written by - Ranjitha R K | Last Updated : Feb 13, 2023, 11:05 AM IST
  • ವರ್ಷದ ಬಹುನಿರೀಕ್ಷಿತ ವಾರಗಳಲ್ಲಿ ಒಂದು ಪ್ರೇಮಿಗಳ ವಾರ.
  • ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಪ್ರೇಮಿಗಳ ವಾರ
  • ಪ್ರೇಮಿಗಳ ದಿನದ ಮುನ್ನಾ ದಿನ ಕಿಸ್ ಡೇ
Kiss day 2023 : ಚುಂಬನಕ್ಕೂ ಇದೆ ನಾನಾ ಅರ್ಥ ! ಕಿಸ್ ಡೇಗೆ ತಿಳಿದುಕೊಳ್ಳಿ ಒಂದು ಮುತ್ತಿನ  ಕತೆ  title=

Kiss day 2023 : ವರ್ಷದ ಬಹುನಿರೀಕ್ಷಿತ ವಾರಗಳಲ್ಲಿ ಒಂದು ಪ್ರೇಮಿಗಳ ವಾರ. ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಪ್ರೇಮಿಗಳ ವಾರವನ್ನು ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ವೀಕ್ ರೋಸ್ ಡೇಯೊಂದಿಗೆ  ಪ್ರಾರಂಭವಾಗಿ ಪ್ರೇಮಿಗಳ ದಿನದಂದು ಕೊನೆಯಾಗುತ್ತದೆ. ತಾವು ಮೆಚ್ಚುವ ವ್ಯಕ್ತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವರ್ಷದ ಸಮಯ ಇದು. ಈ  ವಾರದಲ್ಲಿ ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ , ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ, ಕಿಸ್ ಡೇ ಮತ್ತು ವ್ಯಾಲೆಂಟೈನ್ಸ್ ಡೇ ಸೇರಿವೆ.

ಕಿಸ್ ಡೇ ಅನ್ನು ಪ್ರೇಮಿಗಳ ದಿನದ ಮೊದಲ ದಿನದಂದು ಫೆಬ್ರವರಿ 13 ರಂದು  ಆಚರಿಸಲಾಗುತ್ತದೆ. ಈ ದಿನ, ಪರಸ್ಪರ ಚುಂಬಿಸಿ ದಂಪತಿಗಳು ಅಥವಾ ಜೋಡಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಕಿಸ್ ಅನ್ನುವುದು ಪ್ರೇ ಮಿಸುವವರಿಗೆ ಮಾತ್ರ ಸಂಬಂಧಪಟ್ಟದ್ದಲ್ಲ. ತಮ್ಮ ಕುಟುಂಬ ಸದಸ್ಯರ ಮೇಲೆ ಇರುವ ಪ್ರೀತಿಯನ್ನು ಕೂಡಾ ಕಿಸ್ ನೀಡುವ ಮೂಲಕ ವ್ಯಕ್ತಪಡಿಸಬೇಕು. ಮುತ್ತು ಅನ್ನುವುದು  ಪ್ರೀತಿ, ಕಾಳಜಿ, ವಾತ್ಸಲ್ಯ ಮತ್ತು ಮೆಚ್ಚುಗೆಯ  ಪ್ರತೀಕವೂ ಹೌದು. ಮಾತಿನಲ್ಲಿ ಏನನ್ನೂ ಹೇಳದಿದ್ದರೂ ನೀವು ನೀಡುವ ಮುತ್ತು ಸಾವಿರ ಪದಗಳನ್ನು ಹೇಳುತ್ತದೆ. ನಾವು ನೀಡುವ ಮುತ್ತಿಗೂ ಒಂದೊಂದು ಅರ್ಥವಿದೆ.   

ಇದನ್ನೂ ಓದಿ : Valentine's Day 2023: ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ನೀಡಿ ಈ ವಿಶಿಷ್ಟ ಉಡುಗೊರೆ

ಕೆನ್ನೆಯ ಮೇಲೆ : ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕೆನ್ನೆಯ ಮೇಲಿನ ಚುಂಬನದಿಂದ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ನಾವು ತುಂಬಾ ಆತ್ಮೀಯರಾಗಿರುವವರನ್ನು ಭೇಟಿಯಾದಾಗ  ಅಥವಾ ಅವರನ್ನು ಸ್ವಾಗತಿಸುವಾಗ, ನಾವು ಕೆನ್ನೆಯ ಮೇಲೆ ಮುತ್ತಿಟ್ಟು ಸ್ವಾಗತಿಸುತ್ತೇವೆ.

ಹಣೆಯ ಮುತ್ತು : ಇದು ಭದ್ರತೆ ಮತ್ತು ಮೆಚ್ಚುಗೆಯ ಭಾವವನ್ನು  ವ್ಯಕ್ತಪಡಿಸುತ್ತದೆ. ಹಣೆಯ ಮೇಲೆ ನೀಡುವ ಮುತ್ತು ಭದ್ರತೆಯನ್ನು ಸೂಚಿಸುವ  ಮೌನ ಮಾರ್ಗವಾಗಿದೆ.

ಕೈ ಮೇಲಿನ ಮುತ್ತು : ಇದು ಸಂಬಂಧವನ್ನು ಪ್ರಾರಂಭಿಸುವ ಆಸಕ್ತಿಯ ಸಂಕೇತವಾಗಿದೆ. ಇದನ್ನು ಅನೇಕ ಸಂಸ್ಕೃತಿಗಳಲ್ಲಿ ಗೌರವ ಮತ್ತು ಮೆಚ್ಚುಗೆ ನು ತೋರಿಸುವ ಸಂಕೇತವೆಂದು ಕರೆಯಲಾಗುತ್ತದೆ. 

ಇದನ್ನೂ ಓದಿ : Happy Hug day 2023 : 'ಲಗ್ ಜಾ ಗಲೇ ..' ಈ ರೀತಿ ಅಪ್ಪಿಕೊಂಡು ಸಂಗಾತಿಗೆ ನಿಮ್ಮ ಪ್ರೀತಿ ತಿಳಿಸಿ

ಫ್ರೆಂಚ್ ಕಿಸ್ : ಇದು ತೀವ್ರವಾದ ಮತ್ತು ಭಾವೋದ್ರಿಕ್ತ ಚುಂಬನದ ಒಂದು ರೂಪವಾಗಿದೆ. ಇದನ್ನು ಸಾಮಾನ್ಯವಾಗಿ ಆಳವಾಗಿ ಆಕರ್ಷಿತರಾದ ಅಥವಾ ಪರಸ್ಪರ ಆಳವಾಗಿ ಪ್ರೀತಿಸುವವರು ಹಂಚಿಕೊಳ್ಳುತ್ತಾರೆ.

ಇಯರ್ ಲೋಬ್ ಕಿಸ್ : ಇದು  ಎದುರಿಗಿರುವ ವ್ಯಕ್ತಿಯನ್ನು ಪ್ರಚೋದಿಸಲು ಬಳಸುವ ಚುಂಬನದ ಒಂದು ರೂಪವಾಗಿದೆ.

ನೆಕ್ ಕಿಸ್ : ಈ ರೀತಿಯ ಕಿಸ್ ಸಾಮಾನ್ಯವಾಗಿ ಲೈಂಗಿಕ ಉದ್ದೇಶಗಳನ್ನು ಸಂವಹಿಸುತ್ತದೆ. ಪರಸ್ಪರರ ಬಗ್ಗೆ ಗಾಢವಾದ ಭಾವೋದ್ರಿಕ್ತ ಜನರು ಈ ಮುತ್ತನ್ನು ಹಂಚಿಕೊಳ್ಳುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News