Happy Hug day 2023 : ಹಗ್ ಡೇ ಅನ್ನು ಪ್ರೇಮಿಗಳ ವಾರದ ಆರನೇ ದಿನದಂದು ಅಂದರೆ ಫೆಬ್ರವರಿ 12 ರಂದು ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಸಂಗಾತಿಗಳನ್ನು ತಬ್ಬಿಕೊಳ್ಳುತ್ತಾರೆ. ನಿಮ್ಮ ಸಂಗಾತಿ ಅಥವಾ ಸ್ನೇಹಿರೊಂದಿಗೆ ತಬ್ಬಿಕೊಳ್ಳುವುದು ವಿಶ್ವದ ಅತ್ಯುತ್ತಮ ಭಾವನೆಗಳಲ್ಲಿ ಒಂದಾಗಿದೆ. ಅಪ್ಪುಗೆಯು ದಿನವಿಡೀ ನಿಮ್ಮ ಎಲ್ಲಾ ಆಯಾಸವನ್ನು ಹೋಗಲಾಡಿಸುತ್ತದೆ. ಈ ಪ್ರೀತಿಯ ಅಭಿವ್ಯಕ್ತಿಯನ್ನು ಆಚರಿಸಲು ಪ್ರತಿ ವರ್ಷ ಫೆಬ್ರವರಿ 12 ರಂದು ಹಗ್ ಡೇ ಆಚರಿಸಲಾಗುತ್ತದೆ. ಇದಲ್ಲದೆ, ಈ ವಿಶೇಷ ದಿನದಂದು ನಿಮ್ಮ ಸ್ನೇಹಿತ ಅಥವಾ ಪಾಲುದಾರರಿಗೆ ನೀವು ವಿಶೇಷ ಸಂದೇಶಗಳು, ಶುಭಾಶಯಗಳು ಅಥವಾ ಕವಿತೆಗಳನ್ನು ಸಹ ಕಳುಹಿಸಬಹುದು. ಹ್ಯಾಪಿ ಹಗ್ ಡೇ ಎಂದು ಹೇಳಲು ನಿಮ್ಮ ಪ್ರೇಮಿ ಅಥವಾ ಸ್ನೇಹಿತರಿಗೆ ನೀವು ಕಳುಹಿಸಬಹುದಾದ ಕೆಲವು ಸುಂದರವಾದ ಶಾಯರಿಗಳನ್ನು ಕೆಳಗೆ ನೀಡಲಾಗಿದೆ.
ಕೆಲವು ರಿಸರ್ಚ್ಗಳ ಪ್ರಕಾರ, ಅಪ್ಪುಗೆಗೆ ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಇದೆ. ನಿಮಗೆ ತುಂಬಾ ಸ್ಟ್ರೆಸ್ ಫೀಲ್ ಆದಾಗ ನಿಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಂಡರೆ ನಿಮ್ಮ ಮನಸ್ಸು ಹಗುರವಾಗುತ್ತದೆ. ಅಪ್ಪಿಕೊಳ್ಳುವುದರಿಂದ ಆಕ್ಸಿಟೋಸಿನ್ ಮಟ್ಟ ಹೆಚ್ಚಾಗುತ್ತದೆ. ನಮ್ಮ ದೇಹದಲ್ಲಿ ಸ್ಟ್ರೆಸ್ ಫೀಲ್ ಮಾಡುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ.
ಇದನ್ನೂ ಓದಿ : Valentine's Day 2023: ಸಂಗಾತಿಗೆ ಮರೆತೂ ಕೂಡ ಈ 5 ಉಡುಗೊರೆಗಳನ್ನು ಕೊಡಬೇಡಿ, ಇಲ್ದಿದ್ರೆ ಸಂಬಂಧದಲ್ಲಿ ಬಿರುಕು ತಪ್ಪಿದ್ದಲ್ಲ!
ಅಪ್ಪುಗೆ ಪ್ರೀತಿಯನ್ನು ವ್ಯಕ್ತಪಡಿಸುವ ಮತ್ತೊಂದು ರೀತಿಯಾಗಿದೆ. ನಾವು ಪ್ರೀತಿಸುವವರೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳಲು ಮಾತ್ರವಲ್ಲ ನಮಗೆ ತೀವ್ರ ದುಃಖವಾದಾಗಲೂ ಅಪ್ಪಿಕೊಳ್ಳುತ್ತೇವೆ. ದೈಹಿಕ ಸ್ಪರ್ಶದ ಭಾಷೆ ಅದ್ಭುತಗಳನ್ನು ಮಾಡುತ್ತದೆ. ಅಪ್ಪುಗೆಯು ನಿಮ್ಮ ಪ್ರೀತಿಪಾತ್ರರಿಗೆ ನೀವು ಅವರಿಗಾಗಿ ಇದ್ದೀರಿ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ, ಯಾವುದೇ ಸಮಸ್ಯೆಯನ್ನು ಪರಿಹರಿಸಲು ಮತ್ತು ಭಾವನಾತ್ಮಕ ಬಿರುಕುಗಳು, ಅನುಮಾನಗಳು ಅಥವಾ ಭವಿಷ್ಯದ ಬಗ್ಗೆ ಆತಂಕವನ್ನು ಸರಿಪಡಿಸಲು ಅಪ್ಪುಗೆ ಉತ್ತರವಾಗಬಲ್ಲದು.
ಅಪ್ಪುಗೆಯ ವಿವಿಧ ವಿಧಗಳು ಮತ್ತು ಅವುಗಳ ಅರ್ಥಗಳು :
ಬಿಗಿಯಾದ ಅಪ್ಪುಗೆ : ಬಿಗಿಯಾದ ಅಪ್ಪುಗೆಯು ಸಾಕಷ್ಟು ನಿಕಟವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಪ್ರೀತಿ ಮತ್ತು ಭಾವನೆಗಳಿಂದ ತುಂಬಿರುತ್ತದೆ. ಇದು ಆತ್ಮೀಯರಿಗೆ ಮೀಸಲಾಗಿದೆ ಮತ್ತು ನೀವು ಬಹಳ ಸಮಯದ ನಂತರ ಯಾರನ್ನಾದರೂ ನೋಡಿದಾಗ ಸಂತೋಷವನ್ನು ಸೂಚಿಸಲು ಈ ಅಪ್ಪುಗೆ ಸೂಕ್ತ. ನೀವು ಯಾರಿಗಾದರೂ ವಿದಾಯ ಹೇಳಬೇಕಾದಾಗ ದುಃಖವನ್ನು ವ್ಯಕ್ತಪಡಿಸಲು ಸಹ ಇದು ಒಂದು ಮಾರ್ಗವಾಗಿದೆ.
ಸೈಡ್ ಹಗ್ : ಬಿಗಿಯಾದ ಮತ್ತು ಪೂರ್ಣ-ದೇಹದ ಅಪ್ಪುಗೆಗಳಿಗಿಂತ ಸೈಡ್ ಹಗ್ ಕಡಿಮೆ ನಿಕಟವಾಗಿರುತ್ತವೆ. ಸಹೋದ್ಯೋಗಿಗಳು ಅಥವಾ ಸ್ನೇಹಿತರ ಮಧ್ಯೆ ಇದು ಹೆಚ್ಚು ಸಾಮಾನ್ಯವಾಗಿದೆ.
ಇದನ್ನೂ ಓದಿ : Surya Gochar 2023: ಕುಂಭ ರಾಶಿಯಲ್ಲಿ ಅಪರೂಪದ ಸಂಯೋಗ, ಸೂರ್ಯನ ಕೃಪೆಯಿಂದ ಈ ರಾಶಿಯವರ ಸುವರ್ಣಕಾಲ ಆರಂಭ!
ಹಿಂಬದಿಯ ಅಪ್ಪುಗೆ : ನಿಮ್ಮ ಸಂಗಾತಿ ನಿಮ್ಮನ್ನು ಹಿಂದಿನಿಂದ ಅಪ್ಪಿಕೊಂಡರೆ ಇದು ಉತ್ತಮ ಅನುಭವ. ಇದು ಅತ್ಯಂತ ನಿಕಟವಾಗಿರುತ್ತವೆ ಮತ್ತು ಇಬ್ಬರ ನಡುವೆ ಆಳವಾದ ಸಂಪರ್ಕವನ್ನು ತೋರಿಸುತ್ತದೆ. ಇದು ವಿಶ್ವಾಸಾರ್ಹ ಸಂಬಂಧವನ್ನು ಸಂಕೇತಿಸುತ್ತದೆ, ಅಲ್ಲಿ ಇಬ್ಬರು ಪರಸ್ಪರರ ಬಗ್ಗೆ ಸಾಕಷ್ಟು ಪ್ರೀತಿಯನ್ನು ಹೊಂದಿದ್ದಾರೆ ಎಂದರ್ಥ.
ಸಂಬಂಧದಲ್ಲಿ ತಬ್ಬಿಕೊಳ್ಳುವುದು ಏಕೆ ಮುಖ್ಯ?
ಕೆಲವೊಮ್ಮೆ, ಕ್ರಿಯೆಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ ಮತ್ತು ಅಪ್ಪಿಕೊಳ್ಳುವುದು ಅಂತಹ ಒಂದು ಗೆಸ್ಚರ್ ಆಗಿದೆ. ನಿಮ್ಮ ಸಂಗಾತಿಗೆ ನೀವು ಇದ್ದೀರಿ ಎಂದು ತೋರಿಸುತ್ತದೆ. ಇದು ಭರವಸೆಯ ಭಾವನೆಯನ್ನು ನೀಡುತ್ತದೆ ಮತ್ತು ಒಬ್ಬರಿಗೆ ವಿಶೇಷ ಭಾವನೆಯನ್ನು ನೀಡುತ್ತದೆ. ಈ ಹಗ್ ಡೇ, ನಿಮ್ಮ 'ವಿಶೇಷ ವ್ಯಕ್ತಿ'ಯನ್ನು ತಬ್ಬಿಕೊಳ್ಳುವ ಮೂಲಕ ಆಚರಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.