Future Prediction Through Structure Of Hand: ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ನಮ್ಮ ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳನ್ನು ನಮ್ಮ ಅಂಗೈಯಲ್ಲಿರುವ ರೇಖೆಗಳು, ಚಿಹ್ನೆಗಳು ಹಾಗೂ ನಿರ್ಮಾಣಗೊಂಡ ಆಕೃತಿಗಳಿಂದ ತಿಳಿಯಬಹುದು. ಒಬ್ಬ ವ್ಯಕ್ತಿಯು ಎಷ್ಟು ಅದೃಷ್ಟಶಾಲಿ ಎಂಬುದನ್ನು ಸಹ ಇದು ತೋರಿಸುತ್ತದೆ. ಸಂಪತ್ತು, ಗೌರವ, ಯಶಸ್ಸು, ಸಂಬಂಧಗಳು, ಆರೋಗ್ಯದ ವಿಷಯದಲ್ಲಿ ವ್ಯಕ್ತಿಯ ಜೀವನ ಹೇಗೆ ಇರಲಿದೆ ಎಂಬುದನ್ನು ಇವು ಹೇಳುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರ ಮತ್ತು ಸಮುದ್ರಶಾಸ್ತ್ರದಲ್ಲಿ, ವಿಧಿಯ ಬಗ್ಗೆ ತಿಳಿದುಕೊಳ್ಳಲು ಸುಲಭವಾದ ಮಾರ್ಗಗಳನ್ನು ಸೂಚಿಸಲಾಗಿದ್ದು, ಅವುಗಳಲ್ಲಿ ಅಂಗೈ ಆಕಾರವೂ ಕೂಡ ಶಾಮೀಲಾಗಿದೆ.
 
ಅಂಗೈ ಆಕಾರವೂ ಭವಿಷ್ಯವನ್ನು ಹೇಳುತ್ತದೆ
- ಅಂಗೈ ವಿನ್ಯಾಸವು ಅನಿಯಮಿತವಾಗಿದ್ದರೆ, ಅಂದರೆ ತುಂಬಾ ಚಿಕ್ಕದಾಗಿದ್ದರೆ ಅಥವಾ ತುಂಬಾ ದಪ್ಪವಾಗಿದ್ದರೆ ಅಥವಾ ತುಂಬಾ ತೆಳುವಾಗಿದ್ದರೆ, ಬೆರಳುಗಳು ತುಂಬಾ ಚಿಕ್ಕದಾಗಿದ್ದರೆ ಅಥವಾ ಸಾಮಾನ್ಯಕ್ಕಿಂತ ದೊಡ್ಡದಾಗಿದ್ದರೆ, ಅಂತಹ ವ್ಯಕ್ತಿಯು ನಿಗೂಢವಾಗಿರುತ್ತಾರೆ. ಅವರು ಲೌಕಿಕತೆಯಿಂದ ದೂರವಾಗಿ ಸೆಲ್ಫ್ ಸೆಂಟ್ರಿಕ್ ಆಗಿರುತ್ತಾರೆ. ಅಷ್ಟೇ ಅಲ್ಲ ಅವರ ಜೀವನವೂ ಕೂಡ ಎವರೇಜ್ ಜೀವನವಾಗಿರುತ್ತದೆ.


COMMERCIAL BREAK
SCROLL TO CONTINUE READING

- ಅಂಗೈ ಚೌಕಾಕಾರದ್ದಾಗಿರುತ್ತದೆಯೋ, ಅಂತಹ ಜನರನ್ನು ನೀವು ಅದೃಷ್ಟವಂತರು ಎಂದು ಕರೆಯಬಹುದು. ಈ ಜನರು ಪ್ರಾಮಾಣಿಕ, ದಯೆ, ಶಿಸ್ತು ಮತ್ತು ನಿಷ್ಠಾವಂತರಾಗಿರುತ್ತಾರೆ. ಅವರು ತಮ್ಮ ಜೀವನದ ಎರಡನೇ ಹಂತದಲ್ಲಿ ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸುತ್ತಾರೆ.


- ಮಣಿಕಟ್ಟಿನ ಬಳಿ ಭಾಗವು ಅಂಗೈಯಲ್ಲಿ ಅಗಲವಾಗಿದ್ದರೆ, ಅಂತಹ ಜನರು ಆದರ್ಶಪ್ರಾಯರು ಮತ್ತು ತಮ್ಮ ಕಠಿಣ ಪರಿಶ್ರಮದಿಂದ ಹಣವನ್ನು ಗಳಿಸುತ್ತಾರೆ. ಆದರೆ ಅವರು ಯಾವಾಗಲೂ ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ. ಅವರಲ್ಲಿ ಇತರರಿಗೆ ಒಳ್ಳೆಯದನ್ನು ಮಾಡುವ ಭಾವನೆ ಸಂಪೂರ್ಣವಾಗಿ ಇರುವುದಿಲ್ಲ.


- ಅಂಗೈ ಪ್ರಬಲವಾಗಿದ್ದು, ಬೆರಳುಗಳ ಕೀಲುಗಳು ಮೇಲ್ಭಾಗಕ್ಕೆ ಉಬ್ಬಿಕೊಂಡಿದ್ದರೆ ಮತ್ತು ಉಗುರುಗಳು ಉದ್ದವಾಗಿದ್ದರೆ, ಅಂತಹ ಜನರು ತತ್ವಜ್ಞಾನಿಗಳಾಗಿರುತ್ತಾರೆ. ಈ ಜನರಲ್ಲಿ ತರ್ಕ, ಜ್ಞಾನ, ಬುದ್ಧಿವಂತಿಕೆ ತುಂಬಾ ಹೆಚ್ಚಾಗಿರುತ್ತದೆ. ಈ ಜನರ ಮನಸ್ಸನ್ನು ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ.


- ಅಂಗೈಯ ಉದ್ದ ಮತ್ತು ಅಗಲವು ಸಾಮಾನ್ಯವಾಗಿದ್ದರೂ ಬೆರಳುಗಳು ಕೆಳಗಿನಿಂದ ದಪ್ಪಗಾಗಿದ್ದರೆ ಮತ್ತು ತೆಳ್ಳಗೆ ಅಥವಾ ಮೇಲಿನಿಂದ ಮೊನಚಾದಾಗಿದ್ದರೆ, ಅಂತಹ ಜನರು ಇತರರ ಮಾತಿನಲ್ಲಿ ಸುಲಭವಾಗಿ ಸಿಲುಕಿಕೊಳ್ಳುತ್ತಾರೆ. ಆದ್ದರಿಂದಲೇ ಅವರಿಗೆ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಕಷ್ಟವಾಗುತ್ತದೆ. ಬೆರಳುಗಳು ಗಟ್ಟಿಯಾಗಿದ್ದರೆ ವ್ಯಕ್ತಿ ದೊಡ್ಡ ಉದ್ಯಮಿ, ಗಾಯಕ, ಚಿತ್ರಕಾರ, ಶಿಲ್ಪಿ, ಕಲಾವಿದ ಇತ್ಯಾದಿ ಆಗಬಹುದು.


ಇದನ್ನೂ ಓದಿ-Chanakya Niti: ಈ ಕಾರಣದಿಂದ ಮಹಿಳೆಯರನ್ನು ಶಕ್ತಿ ಸ್ವರೂಪಿ ಎನ್ನಲಾಗುತ್ತದೆ, ಇದನ್ನು ಬಹುತೇಕ ಪುರುಷರು ಒಪ್ಕೊಳ್ತಾರೆ


 - ಮೃದುವಾದ ನಯವಾದ ಅಂಗೈ ಮತ್ತು ತೆಳುವಾದ ಉದ್ದನೆಯ ಬೆರಳುಗಳನ್ನು ಹೊಂದಿರುವ ಕೈಯನ್ನು ಉತ್ತಮ ಕೈ ಎಂದು ಕರೆಯಲಾಗುತ್ತದೆ. ಇಂತಹ ಜನರು ತಮ್ಮ ಕನಸಿನ ಲೋಕದಲ್ಲಿಯೇ ಮುಳುಗಿರುತ್ತಾರೆ, ದೊಡ್ಡ ಯೋಜನೆಗಳನ್ನು ಮಾಡುತ್ತಾರೆ. ಅವುಗಳನ್ನು ಕಾರ್ಯಗತಗೊಳಿಸುತ್ತಾರೆ. ಈ ಜನರಿಗೆ ಉತ್ತಮ ತಿಳುವಳಿಕೆ ಇರುತ್ತದೆ ಮತ್ತು  ಈ ಜನರು ಸಂತೋಷದ ಜೀವನವನ್ನು ನಡೆಸುತ್ತಾರೆ.


ಇದನ್ನೂ ಓದಿ-Itchy Palm Meaning: ಕೈಯಲ್ಲಿ ತುರಿಕೆಯಾದರೆ ನಿಜವಾಗಲೂ ಹಣ ಸಿಗುತ್ತಾ? ಏನ್ ಹೇಳುತ್ತೆ ಶಾಸ್ತ್ರ?


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.