ಫ್ಯಾಷನ್ ಅಂತಾ ಹೈ ಹೀಲ್ಸ್ ಚಪ್ಪಲಿ ಧರಿಸುವ ಮಹಿಳೆಯರೇ ಈ ಸುದ್ದಿಯನ್ನೊಮ್ಮೆ ಓದಿ!
High Heels Shoes Side Effects: ಹೈ ಹೀಲ್ಸ್’ಗಳನ್ನು ಧರಿಸುವುದರಿಂದ ಪಾದಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುತ್ತವೆ. ಇವಿಷ್ಟೇ ಅಲ್ಲ… ಹತ್ತಾರು ಸಮಸ್ಯೆಗಳು ಉಂಟಾಗಬಹುದು.
High Heels Shoes Side Effects: ಹೈ ಹೀಲ್ಸ್ ಮಹಿಳೆಯರ ಫ್ಯಾಷನ್’ನ ಒಂದು ಭಾಗ ಎಂದೇ ಹೇಳಬಹುದು. ಎತ್ತರದ ಹಿಮ್ಮಡಿಯ ಅಥವಾ ಹೈ ಹೀಲ್ಸ್’ಗಳನ್ನು ಧರಿಸುವುದರಿಂದ ಮಹಿಳೆಯರು ಹೆಚ್ಚು ಆಕರ್ಷಕ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಾರೆ ಎಂದು ಕೆಲವೊಂದು ವರದಿಗಳು ಹೇಳಿವೆ. ಆದರೆ ಈ ಫ್ಯಾಷನ್, ದೇಹಕ್ಕೆ ಸಾಕಷ್ಟು ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ?
ಹೈ ಹೀಲ್ಸ್’ಗಳನ್ನು ಧರಿಸುವುದರಿಂದ ಪಾದಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುತ್ತವೆ. ಇವಿಷ್ಟೇ ಅಲ್ಲ… ಹತ್ತಾರು ಸಮಸ್ಯೆಗಳು ಉಂಟಾಗಬಹುದು.
ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್
2-3 ನಿಮಿಷಗಳ ಕಾಲ ಹೈ ಹೀಲ್ಸ್’ಗಳನ್ನು ಧರಿಸುವುದು ಮೂಳೆಗಳಿಗೆ ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಕಣಕಾಲುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದಾಗಿ ಕಾಲು ಟ್ವಿಸ್ಟ್ ಆಗಿ ಬೀಳುವ ಸಂಭವವಿರುತ್ತದೆ.
ಹೈ ಹೀಲ್ಸ್ ಪಾದರಕ್ಷೆಗಳನ್ನು ಧರಿಸುವುದರಿಂದ ಕೀಲುಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ಕಾರ್ಟಿಲೆಜ್ ಊದಿಕೊಳ್ಳಬಹುದು. ಕ್ರಮೇಣ ಈ ಸಮಸ್ಯೆ ಸಂಧಿವಾತವಾಗಿ ಬೆಳೆಯಬಹುದು. ಈ ರೋಗವು ವೃದ್ಧಾಪ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ.
ಇಡೀ ದೇಹದ ಭಂಗಿಯು ನಿಮ್ಮ ಪಾದಗಳನ್ನು ಅವಲಂಬಿಸಿರುತ್ತದೆ. ಹೈ ಹೀಲ್ಸ್;ನಿಂದಾಗಿ ಹಿಮ್ಮಡಿಗಳು ಎತ್ತರವಾಗುತ್ತವೆ ಮತ್ತು ಬೆನ್ನಿನ ಮೂಳೆಗಳಿಗೆ ಅಪಾಯ ತಂದೊಡ್ಡುತ್ತವೆ. ಅಂದರೆ ಬೆನ್ನುಮೂಳೆಯ ಸಮತೋಲನವು ಏರುಪೇರಾಗಬಹುದು. ಅಂತಹ ಸಂದರ್ಭದಲ್ಲಿ ಕುತ್ತಿಗೆಯಿಂದ ಬೆನ್ನಿನವರೆಗೆ ನೋವು ಉಂಟಾಗಬಹುದು.
ಹೈ ಹೀಲ್ಸ್ ಪಾದರಕ್ಷೆಗಳು ತುಂಬಾ ತೆಳ್ಳಗಿರುತ್ತವೆ. ಈ ಅಸ್ವಾಭಾವಿಕ ಆಕಾರದಿಂದಾಗಿ ಕಾಲುಗಳ ರಕ್ತನಾಳಗಳು ಸಹ ಒತ್ತುವುದಕ್ಕೆ ಪ್ರಾರಂಭಿಸುತ್ತವೆ. ಇದರಿಂದಾಗಿ ರಕ್ತದ ಹರಿವು ನಿಂತು, ರಕ್ತನಾಳಗಳು ಸಿಡಿಯುವ ಅಪಾಯವಿರುತ್ತದೆ.
ಇದನ್ನೂ ಓದಿ: ಯೋಗಿ ಬಾಬು-ಬಾಬಿ ಸಿಂಹ ಸಿನಿಮಾಗೆ ಶಿವಣ್ಣ ಬೆಂಬಲ.. 'ನಾನ್ ವೈಲೆನ್ಸ್' ಫಸ್ಟ್ ಲುಕ್ ರಿಲೀಸ್
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲಿ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.