ಯೋಗಿ ಬಾಬು-ಬಾಬಿ ಸಿಂಹ ಸಿನಿಮಾಗೆ ಶಿವಣ್ಣ ಬೆಂಬಲ.. 'ನಾನ್ ವೈಲೆನ್ಸ್' ಫಸ್ಟ್ ಲುಕ್ ರಿಲೀಸ್

non violence movie first look: ತಮಿಳಿನ ಮೆಟ್ರೋ ಖ್ಯಾತಿಯ ನಿರ್ದೇಶಕ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳುತ್ತಿರುವ ನಾನ್ ವೈಲೆನ್ಸ್ ಸಿನಿಮಾಗೆ  ಸ್ಯಾಂಡಲ್ ವುಡ್ ಮಾಸ್ ಲೀಡರ್ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. 

Written by - YASHODHA POOJARI | Last Updated : May 30, 2024, 01:04 PM IST
  • ತಮಿಳಿನ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್
  • ಯೋಗಿ ಬಾಬು-ಬಾಬಿ ಸಿಂಹ ಚಿತ್ರದ ಫಸ್ಟ್ ಲುಕ್ ರಿಲೀಸ್
  • 'ನಾನ್ ವೈಲೆನ್ಸ್' ಫಸ್ಟ್ ಲುಕ್ ಗೆ ಫ್ಯಾನ್ಸ್‌ ಫಿದಾ
ಯೋಗಿ ಬಾಬು-ಬಾಬಿ ಸಿಂಹ ಸಿನಿಮಾಗೆ ಶಿವಣ್ಣ ಬೆಂಬಲ.. 'ನಾನ್ ವೈಲೆನ್ಸ್' ಫಸ್ಟ್ ಲುಕ್ ರಿಲೀಸ್ title=

non violence movie first look: ತಮಿಳಿನ ಮೆಟ್ರೋ ಖ್ಯಾತಿಯ ನಿರ್ದೇಶಕ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳುತ್ತಿರುವ ನಾನ್ ವೈಲೆನ್ಸ್ ಸಿನಿಮಾಗೆ  ಸ್ಯಾಂಡಲ್ ವುಡ್ ಮಾಸ್ ಲೀಡರ್ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶಿವಣ್ಣ ಇಡೀ ತಂಡಕ್ಕೆ ಶುಭಾಷಯ ತಿಳಿಸಿದ್ದಾರೆ. ಮೆಟ್ರೋ ಶಿರೀಶ್, ಬಾಬಿ ಸಿಂಹ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತಿದ್ದು, ಅದಿತಿ ಬಾಲನ್, ಗರುಡ ರಾಮ್, ಆದಿತ್ಯ ಕಥಿರ್ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ:  Ravichandran Birthday: ಅಪ್ಪನಿಗಾಗಿ ಪ್ರೀತಿಸಿದ ಆ ನಟಿಯನ್ನೇ ಬಿಟ್ಟ ನಟ ರವಿಚಂದ್ರನ್.. ಆ ಚೆಲುವೆ ಯಾರು ಗೊತ್ತಾ? 

90ರ ದಶಕದಲ್ಲಿ ಮಧುರೈ ಜೈಲಿನೊಳಗೆ ಸಂಭವಿಸುವ ಘಟನೆಗಳ ಸುತ್ತ ಪ್ರಧಾನವಾಗಿ ಸುತ್ತುವ ಒಂದು ಆಕರ್ಷಕ ಚಿತ್ರಕಥೆಯನ್ನು ಆನಂದ್ ರಚಿಸಿದ್ದಾರೆ. 'ಮೆಟ್ರೋ' ಮತ್ತು 'ಕೊಡಿಯಲ್ಲಿ ಒರುವನ್' ಚಿತ್ರಗಳ ಸತತ ಗೆಲುವಿನ ನಂತರ ನಿರ್ದೇಶಕ ಆನಂದ ಕೃಷ್ಣನ್ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಯಶಸ್ಸನ್ನು ತಮ್ಮದಾಗಿಸಿಕೊಳ್ಳವ ನಿರೀಕ್ಷೆಯಲ್ಲಿದ್ದಾರೆ. 

 

 

ನಾನ್ ವೈಲೆನ್ಸ್ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಮತ್ತು ಟ್ರೇಲರ್ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಎಕೆ ಪಿಕ್ಚರ್ಸ್ ನಡಿ ಲೇಖಾ ನಾನ್ ವೈಲೆನ್ಸ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, 90ರ ದಶಕವನ್ನು ಮರುಸೃಷ್ಟಿಸಲು ಚಿತ್ರತಂಡ ಭಾರೀ ಶ್ರಮವಹಿಸುತ್ತಿದೆ.  ಯುವನ್ ಶಂಕರ್ ರಾಜ್ ಸಂಗೀತ, ಎನ್ ಎಸ್ ಉದಯ್ ಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಎನ್ ಬಿ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ:  Raja Rani Season 3: ಮತ್ತೆ ಕಿರುತೆರೆಗೆ ಮರಳಿದ ನಟಿ ಅದಿತಿ ಪ್ರಭುದೇವ.. ರಿಯಾಲಿಟಿ ಶೋ ಮೂಲಕ ರಿ-ಎಂಟ್ರಿ ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News