ನವದೆಹಲಿ : 2021 ವರ್ಷದ ಕೊನೆಯ ಹಂತ ಆರಂಭವಾಗಿದೆ. ಈ ಸಮಯದಲ್ಲಿ, ಗ್ರಹ ಮತ್ತು ನಕ್ಷತ್ರಗಳ ಸ್ಥಾನದಲ್ಲಿ ಪರಿವರ್ತನೆಯಾಗುತ್ತಿದೆ. ಇದು ಎಲ್ಲಾ 12 ರಾಶಿಚಕ್ರದ (Zodiac Sign) ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಈ ವರ್ಷ ಮುಕ್ತಾಯವಾಗುತ್ತಿದ್ದಂತೆಯೇ ನಮ್ಮ ಬದುಕು ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಉತ್ಸಾಹ ಎಲ್ಲರಿಗೂ ಇದ್ದೇ ಇರುತ್ತದೆ. ಹೌದು ವರ್ಷದ ಕೊನೆಯ 4 ತಿಂಗಳುಗಳು, ಯಾವ ರಾಶಿಯವರ ಜೀವನ  ಹೇಗಿರುತ್ತದೆ ನೋಡಿ..  


COMMERCIAL BREAK
SCROLL TO CONTINUE READING

ಈ 5 ರಾಶಿಯವರ ಜೀವನವೇ ಬದಲಾಗಲಿದೆ :  
ಮೇಷ (Aries): ಈ ರಾಶಿಚಕ್ರದ (Zodiac Sign) ಜನರಿಗೆ ಈ ಸಮಯದಲ್ಲಿ ಹಣದ ಸುರಿ ಮಳೆಯಾಗಲಿದೆ. ಈ ಸಮಯದಲ್ಲಿ ಅವರು ಹೊಸ ಮನೆ-ಕಾರನ್ನು ಖರೀದಿಸಬಹುದು. ಭವಿಷ್ಯಕ್ಕಾಗಿ ದೊಡ್ಡ ಹೂಡಿಕೆಯನ್ನು (investment) ಮಾಡಬಹುದು. ಈ ಸಮಯದಲ್ಲಿ ಅವರ ಜೀವನವು ತುಂಬಾ ಅದ್ಭುತವಾಗಿರುತ್ತದೆ. ಮಾನಸಿಕವಾಗಿ ಸಾಕಷ್ಟು ತೃಪ್ತಿ ಸಿಗಲಿದೆ. 


ಇದನ್ನೂ ಓದಿ : Ganesh Chaturthi 2021: ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು, ಇಲ್ಲಿದೆ ಕಾರಣ


ಸಿಂಹ (Leo): ಈ ರಾಶಿಚಕ್ರದ ಜನರಿಗೆ 2021 ವರ್ಷದ ಕೊನೆಯ ತಿಂಗಳು ಅತ್ಯುತ್ತಮವಾಗಿರುತ್ತದೆ. ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು (Financial benefit) ಇವರು ಹೊಂದುತ್ತಾರೆ. ದೀರ್ಘಕಾಲದಿಂದ  ಮನೆ ಖರೀದಿ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ಅವಧಿಯಲ್ಲಿ ಆ ಕಾರ್ಯವನ್ನು ಪೂರ್ಣಗೊಳಿಸಬಹುದು. 


ಕನ್ಯಾ (Virgo) : ತಮ್ಮ ಆರ್ಥಿಕ ಸ್ಥಿತಿಯ ಸುಧಾರಣೆಗಾಗಿ ಬಹಳ ಸಮಯದಿಂದ ಕಾಯುತ್ತಿದ್ದ ಜನರಿಗೆ ಈಗ ಪರಿಹಾರ ಸಿಗಲಿದೆ. ಈ 4 ತಿಂಗಳುಗಳು ಅವರಿಗೆ ಆರ್ಥಿಕ ವಿಚಾರ ಮತ್ತು ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಇನ್ನೂ, ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಉತ್ತಮ. 


ತುಲಾ (Libra): ದೀರ್ಘಕಾಲ ತೊಂದರೆಗಳನ್ನು ಎದುರಿಸುತ್ತಿರುವ ಜನರಿಗೆ ಈ ಸಮಯವು ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಈಗ ಅವರ ಜೀವನವು ಬದಲಾಗಲಿದೆ ಮತ್ತು ಬಹಳಷ್ಟು ಸಂತೋಷ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಕೂಡಾ ಸಾಧ್ಯವಾಗುತ್ತದೆ. 


ಇದನ್ನೂ ಓದಿ : Tuesday Astro Tips: ಜೀವನವು ದುಃಖಗಳಿಂದ ತುಂಬಿದೆಯೇ? ಹನುಮನನ್ನು ಈ ರೀತಿ ಪೂಜಿಸಿ ನಿಮ್ಮ ಸಂಕಷ್ಟಗಳಿಂದ ಮುಕ್ತಿ ಪಡೆಯಿರಿ


ಕುಂಭ: ಈ ರಾಶಿಯವರಿಗೆ ವರ್ಷದ ಕೊನೆಯ 4 ತಿಂಗಳುಗಳು ಸಮೃದ್ಧವಾಗಿರಲಿವೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ.  ಕೌಟುಂಬಿಕ ಜೀವನವೂ ಉತ್ತಮವಾಗಿರುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.