Scotland: ಸ್ಕಾಟ್ಲೆಂಡ್‌ನಲ್ಲಿ 48 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದ ವೈದ್ಯರೊಬ್ಬರು ಶಿಕ್ಷೆಗೆ ಗುರಿಯಾಗಿದ್ದಾರೆ. ವೈದ್ಯರು ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ, ಅಶ್ಲೀಲ ಕೆಲಸಗಳನ್ನು ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದರು. 74 ವರ್ಷದ ಜನರಲ್ ಫಿಜಿಸಿಯನ್ ಡಾ. ಕೃಷ್ಣ ಸಿಂಗ್ ವಿರುದ್ಧ ಕಳೆದ 35 ವರ್ಷಗಳಿಂದ 48 ಮಹಿಳಾ ರೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ದಾಖಲಿಸಲಾಗಿದೆ. ಮಹಿಳಾ ರೋಗಿಗಳನ್ನು ಚುಂಬಿಸುವುದು, ಅನುಚಿತವಾಗಿ ಸ್ಪರ್ಶಿಸುವುದು, ಅಸಭ್ಯ ವರ್ತನೆ  ಇತ್ಯಾದಿಗಳನ್ನು ನ್ಯಾಯಾಲಯ ಪರಿಗಣಿಸಿದ್ದು, ವೈದ್ಯರನ್ನು ತಪ್ಪಿತಸ್ತ ಎಂದು ತೀರ್ಪು ನೀಡಿದೆ.

COMMERCIAL BREAK
SCROLL TO CONTINUE READING

ಒಟ್ಟು 54 ಪ್ರಕರಣಗಳಲ್ಲಿ ಶಿಕ್ಷೆ
'ಡೈಲಿ ಮೇಲ್'ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಗ್ಲಾಸ್ಗೋ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಭಾರತೀಯ ಮೂಲದ ಕೃಷ್ಣ ಸಿಂಗ್ ಅವರು 54 ಲೈಂಗಿಕ ಅಪರಾಧಗಳ ಪ್ರಕರಣಗಳಲ್ಲಿ ದೋಷಿಯಾಗಿದ್ದಾರೆ ಎಂದು ಹೇಳಲಾಗಿದೆ. ಸಿಂಗ್ ಅವರಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮುಂದಿನ ತಿಂಗಳು ಪ್ರಕಟಿಸಲಿದೆ. ಸಿಂಗ್ ಅವರು ಮಹಿಳೆಯರ ವಿರುದ್ಧ ಅಪರಾಧ ಎಸಗುತ್ತಿದ್ದರು ಎಂದು ಪ್ರಾಸಿಕ್ಯೂಟರ್ ಏಂಜೆಲಾ ಗ್ರೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಹಿಳಾ ರೋಗಿಗಳನ್ನು ಅನುಚಿತವಾಗಿ ಅವರು ಸ್ಪರ್ಶಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Shanghai Lockdown: ಕೊರೊನಾ ಲಾಕ್ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾದ ಜನರ ಕಿರುಚಾಟ, Viral Video

ಎಲ್ಲಿ ಈ ಅಪರಾಧ ಕೃತ್ಯಗಳನ್ನು ನಡೆಸಲಾಗಿದೆ?
ಎಲ್ಲಾ ಘಟನೆಗಳು 1983 ಮತ್ತು 2018 ರ ನಡುವೆ ನಡೆದಿವೆ. ಆ ಸಮಯದಲ್ಲಿ, ಡಾ. ಕೃಷ್ಣ ಸಿಂಗ್ ಉತ್ತರ ಲನಾರ್ಕ್‌ಷೈರ್‌ನಲ್ಲಿರುವ ಅವರ ಕ್ಲಿನಿಕ್, ಆಸ್ಪತ್ರೆ ಮತ್ತು ರೋಗಿಗಳ ಮನೆಯಲ್ಲಿ ಇಂತಹ ಚೇಷ್ಟೆಗಳನ್ನು ನಡೆಸಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ಡಾ.ಸಿಂಗ್ ವಾದಿಸಿದ್ದಾರೆ. ಡಾ. ಸಿಂಗ್ ಅವರು ವೈದ್ಯಕೀಯ ಸೇವೆಗೆ ನೀಡಿದ ಕೊಡುಗೆಗಾಗಿ ರಾಯಲ್ ಮೆಂಬರ್ ಆಫ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (MBE) ಎಂಬ ಬಿರುದನ್ನು ಕೂಡ ಪಡೆದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.


ಇದನ್ನೂ ಓದಿ -Horn On Women Chest: ಮಹಿಳೆಯ ಶರೀರದ ಮೇಲೆ ಬೆಳೆದ ಕೊಂಬುಗಳು, ಕಂಡು ಬೆಚ್ಚಿಬಿದ್ದ ವೈದ್ಯರು

ಬಹಿರಂಗವಾಗಿದ್ದು ಹೇಗೆ?
2018 ರಲ್ಲಿ ಮಹಿಳೆಯೊಬ್ಬರು ಡಾ. ಸಿಂಗ್ ವಿರುದ್ಧ ದೂರು ದಾಖಲಿಸಿದಾಗ ಈ ಸಂಪೂರ್ಣ ವಿಷಯ ಬೆಳಕಿಗೆ ಬಂದಿದೆ. ಇದಾದ ನಂತರ ಪ್ರಕರಣದ ತನಿಖೆ ಆರಂಭವಾಗಿದ್ದು, ಒಂದರ ಹಿಂದೆ ಒಂದು ಪ್ರಕರಣಗಳು ಮುನ್ನಲೆಗೆ ಬರುತ್ತಲೇ ಇದ್ದವು. ಒಟ್ಟು 54 ಪ್ರಕರಣಗಳಲ್ಲಿ ಡಾ.ಕೃಷ್ಣ ಸಿಂಗ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ, ಮುಂದಿನ ತಿಂಗಳು ಶಿಕ್ಷೆ ಪ್ರಕಟವಾಗಲಿದೆ. ಪ್ರಸ್ತುತ, ಸಿಂಗ್ ತನ್ನ ಪಾಸ್‌ಪೋರ್ಟ್ ಸಲ್ಲಿಸುವ ಷರತ್ತಿನ ಮೇರೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.