ನವದೆಹಲಿ: ಕಳೆದ ಎರಡೂವರೆ ವರ್ಷಗಳಿಂದ ಕೊರೊನಾ (Coronavirus) ವಿಶ್ವದೆಲ್ಲೆಡೆ ಸಾಕಷ್ಟು ವಿನಾಶವನ್ನುಂಟು ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ, ಚೀನಾದ ಶಾಂಘೈ ನಗರದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್ ವಿಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಏತನ್ಮಧ್ಯೆ, ಒಂದು ವಾರದ ಲಾಕ್‌ಡೌನ್ (Shanghai Lockdown) ಹಿನ್ನೆಲೆ, ಜನರು ತಮ್ಮ ಮನೆಯಲ್ಲಿಯೇ ಬಂಧಿಯಾಗಿದ್ದು, ಅವರ ಕಿರುಚಾಟವನ್ನು ತೋರಿಸುವ ಆಘಾತಕಾರಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Covid-19 In China) ಆಗುತ್ತಿದೆ. ಕರೋನಾ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಚೀನಾದ ಪರಿಸ್ಥಿತಿಯನ್ನು ಈ ವೀಡಿಯೊ ಬಹಿರಂಗಪಡಿಸುತ್ತಿದೆ.
What the?? This video taken yesterday in Shanghai, China, by the father of a close friend of mine. She verified its authenticity: People screaming out of their windows after a week of total lockdown, no leaving your apartment for any reason. pic.twitter.com/iHGOO8D8Cz
— Patrick Madrid ✌🏼 (@patrickmadrid) April 9, 2022
ವಿಡಿಯೋ (Viral Video) ಸತ್ಯಾಸತ್ಯತೆ ದೃಢಪಡಿಸಿದ ವ್ಯಕ್ತಿ
ಟ್ವಿಟರ್ ಬಳಕೆದಾರ ಪ್ಯಾಟ್ರಿಕ್ ಮ್ಯಾಡ್ರಿಡ್ ಶನಿವಾರ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಶಾಂಘೈನಲ್ಲಿ (Shanghai) ಒಂದು ವಾರದ ಲಾಕ್‌ಡೌನ್‌ನ ನಂತರ ಜನರು ತಮ್ಮ ಕಿಟಕಿಗಳಿಂದ ಕೂಗುತ್ತಿರುವುದನ್ನು ಕಾಣಬಹುದು, ಏಕೆಂದರೆ ಅಲ್ಲಿ ಯಾವುದೇ ಕಾರಣಕ್ಕೆ ಯಾವುದೇ ವ್ಯಕ್ತಿಗೆ ತನ್ನ ಅಪಾರ್ಟ್‌ಮೆಂಟ್ ನಿಂದ ಹೊರಬರಲು ಅವಕಾಶ ನೀಡಲಾಗಿಲ್ಲ. ತನ್ನ ಟ್ವೀಟ್ ನಲ್ಲಿ ಮ್ಯಾಡ್ರಿಡ್, 'ಈ ವೀಡಿಯೊವನ್ನು ನಿನ್ನೆ ಚೀನಾದ ಶಾಂಘೈನಲ್ಲಿ ನನ್ನ ಆತ್ಮೀಯ ಸ್ನೇಹಿತನ ತಂದೆ ಚಿತ್ರೀಸಿದ್ದಾರೆ' ಎಂದು ಹೇಳಿ ವಿಡಿಯೋ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ.
Residents in #Shanghai screaming from high rise apartments after 7 straight days of the city lockdown. The narrator worries that there will be major problems. (in Shanghainese dialect—he predicts people can’t hold out much longer—he implies tragedy).pic.twitter.com/jsQt6IdQNh
— Eric Feigl-Ding (@DrEricDing) April 10, 2022
ಇದನ್ನೂ ಓದಿ-Viral Video: ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಬಾಯ್ ಫ್ರೆಂಡ್ ಗೆ ಕಿಸ್ ಮಾಡಲು ಮುಂದಾದ ಯುವತಿ
ಆಕ್ರೋಶಗೊಂಡ ಜನರು
ಈ ಕುರಿತಾದ ಮತ್ತೊಂದು ವಿಡಿಯೋ ಹಂಚಿಕೊಂಡ ಡಾ. ಎರಿಗ್ ಅವರು ಚೀನಾದ ಶಾಂಘೈನಲ್ಲಿ ಅಪಾರ್ಟ್ಮೆಂಟ್ನಿಂದ ಸ್ಥಳೀಯ ಉಪಭಾಷೆಯಲ್ಲಿ ಜನರು ಕೂಗುತ್ತಿದ್ದಾರೆ ಎಂದು ಬರೆದಿದ್ದಾರೆ. 'ಲಾಕ್‌ಡೌನ್‌ನ ಏಳನೇ ದಿನದಂದು, ಶಾಂಘೈ ನಿವಾಸಿಗಳು ತಮ್ಮ ಎತ್ತರದ ಅಪಾರ್ಟ್‌ಮೆಂಟ್‌ಗಳಿಂದ ಕೂಗುತ್ತಿದ್ದಾರೆ. ಹಲವಾರು ಸಮಸ್ಯೆಗಳು ಎದುರಾಗಲಿವೆ ಎಂದು ವ್ಯಕ್ತಿಯೊಬ್ಬರು ಕಿರುಚಾಡಿ ಹೇಳುತ್ತಿದ್ದಾರೆ. ಜನರನ್ನು ಹೆಚ್ಚು ಕಾಲ ಬಂಧಿಸಿಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಭಾರಿ ದುರಂತ ಸಂಭವಿಸುತ್ತದೆ ಎನ್ನುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.
6) More remarkable in this telephone conversation is how philosophical of a chat the resident and police officer got toward the end. Censors blocked the subtitles—but in Shanghainese the caller gets the cop to think about repercussions for violent rebellion if hunger continues.👇 https://t.co/kh96kqMYS1
— Eric Feigl-Ding (@DrEricDing) April 10, 2022
ಇದನ್ನೂ ಓದಿ-Girl Kiss To Snake Video: ಹಿಸ್..ಹಿಸ್ ಎನ್ನುತ್ತಿದ್ದ ನಾಗರಾಜನಿಗೆ ಕಿಸ್ ಕೊಟ್ಟ ಯುವತಿ, ಮುಂದೇನಾಯ್ತು?
ಚೀನಾದಲ್ಲಿ 'ಶೂನ್ಯ ಕೋವಿಡ್ ನೀತಿ' ಜಾರಿಯಲ್ಲಿದೆ
ಚೀನಾದಲ್ಲಿ 'ಶೂನ್ಯ ಕೋವಿಡ್ ನೀತಿ' ಮುಂದುವರೆದಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಆದ್ದರಿಂದ, ಚೀನಾದ ಅತ್ಯಂತ ಪ್ರಸಿದ್ಧ ಮತ್ತು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಶಾಂಘೈನಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆ, ಚೀನಾದ ಕಮ್ಯುನಿಸ್ಟ್ ಪಕ್ಷದ ಸರ್ಕಾರವು ಇಡೀ ನಗರದಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಅನ್ನು ವಿಧಿಸಿದೆ. ಏಪ್ರಿಲ್ 5 ರಿಂದ ಶಾಂಘೈ ಅನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ನಗರದ 26 ಕೋಟಿ ಜನರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಭಾನುವಾರ, ಶಾಂಘೈನಲ್ಲಿ 25 ಸಾವಿರ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.