NRIಗಳಿಗಾಗಿ ಕರ್ನಾಟಕದಲ್ಲಿ ಜಾರಿಯಾಗಿದೆ ನೀತಿಗಳು: ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಇನ್ನು ಎನ್‌ಆರ್‌ಐಗಳಿಗಾಗಿಯೇ ಕರ್ನಾಟಕದಲ್ಲಿ ಕೆಲವೊಂದು ನೀತಿಗಳನ್ನು ಜಾರಿಗೊಳಿಸಲಾಗಿದೆ. ಈ ನೀತಿಗಳಿಂದ ಅನಿವಾಸಿ ಕನ್ನಡಿಗರು ಮತ್ತು ರಾಜ್ಯದ ನಡುವಿನ ಬಾಂಧವ್ಯ ಗಟ್ಟಿಗೊಳ್ಳಲಿದೆ.
1915ರ ಜನವರಿ 9 ರಂದು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಲು ದಕ್ಷಿಣ ಆಫ್ರಿಕಾದಿಂದ ಮಹಾತ್ಮ ಗಾಂಧೀಜಿಯವರು ಭಾರತಕ್ಕೆ ಹಿಂತಿರುಗಿ ಬಂದಿದ್ದರು. ಈ ದಿನದ ನೆನಪಿಗಾಗಿ, ದೇಶದ ಬೆಳವಣಿಗೆಯಲ್ಲಿ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸುವ ಸಲುವಾಗಿ ದೇಶದಲ್ಲಿ ಪ್ರತೀ ವರ್ಷ ಜನವರಿ 9ರಂದು ಅನಿವಾಸಿ ಭಾರತೀಯರ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನು ಓದಿ: ‘777 ಚಾರ್ಲಿ’ ಡಿಜಿಟಲ್ ರೈಟ್ ಪಡೆದ ಕಲರ್ಸ್ ಕನ್ನಡ
ಇನ್ನು ಎನ್‌ಆರ್‌ಐಗಳಿಗಾಗಿಯೇ ಕರ್ನಾಟಕದಲ್ಲಿ ಕೆಲವೊಂದು ನೀತಿಗಳನ್ನು ಜಾರಿಗೊಳಿಸಲಾಗಿದೆ. ಈ ನೀತಿಗಳಿಂದ ಅನಿವಾಸಿ ಕನ್ನಡಿಗರು ಮತ್ತು ರಾಜ್ಯದ ನಡುವಿನ ಬಾಂಧವ್ಯ ಗಟ್ಟಿಗೊಳ್ಳಲಿದೆ. ಇನ್ನು ಕರ್ನಾಟಕದಲ್ಲಿ ಜಾರಿಗೊಳಿಸಲಾದ ಎನ್‌ಆರ್‌ಐ ನೀತಿಗಳು ಈ ಕೆಳಗಿನಂತಿದೆ.
ಜಾಗತಿಕವಾಗಿ ಕನ್ನಡಿಗರು ಪರಸ್ಪರ ಸಂಪರ್ಕ ಸಾಧಿಸಲು, ಸಮಸ್ಯೆಗಳು, ಅನಿಸಿಕೆಗಳನ್ನು ಹಂಚಿಕೊಳ್ಳಲು ಅನಿವಾಸಿ ಭಾರತೀಯರು ಮತ್ತು ಕನ್ನಡಿಗರ ಡೇಟಾಬೇಸ್‌ನ್ನು ಸ್ಥಾಪಿಸಲಾಗಿದೆ.
ವೇಗವಾದ ಸೇವೆಗಾಗಿ ಅನಿವಾಸಿ ಕನ್ನಡಿಗರಿಗಾಗಿ ಗುರುತಿನ ಚೀಟಿಯನ್ನು ನೀಡಲಾಗುವುದು. ಅದನ್ನು ಅನಿವಾಸಿ ಕನ್ನಡಿಗರ ಕಾರ್ಡ್ ಎನ್ನಲಾಗುತ್ತದೆ.
ಅನಿವಾಸಿ ಕನ್ನಡಿಗರು ಮತ್ತು ಅನಿವಾಸಿ ಭಾರತೀಯರು ದಾನಧರ್ಮದಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಮತ್ತು ತಮ್ಮ ಮೂಲ ಊರು ಜನರೊಂದಿಗೆ ಬೆರೆಯಲು ʼನಮ್ಮ ಊರು ನಮ್ಮ ನಾಡುʼ ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಸಾಧಕರೊಬ್ಬರಿಗೆ 'ವರ್ಷದ ಅನಿವಾಸಿ ಕನ್ನಡಿಗ' ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ವತಿಯಿಂದ ನೀಡಲಾಗುತ್ತದೆ. ಈ ಮೂಲಕ ಪ್ರವಾಸಿ ಭಾರತೀಯ ದಿವಸಗಳಲ್ಲಿ ಭಾಗವಹಿಸುವಂತೆ ಮಾಡುವುದು.
ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕದ ಜನತೆ ಮತ್ತು ಅನಿವಾಸಿ ಕನ್ನಡಿಗರ ನಡುವೆ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು
ಕನ್ನಡ ಭಾಷೆ, ಸಂಸ್ಕೃತಿಗೆ ಉತ್ತೇಜನ ನೀಡಲು ಮತ್ತು ವಿಶ್ವಕನ್ನಡಿಗರೊಂದಿಗೆ ಸಂಪರ್ಕ ಸಾಧಿಸಲು ಹೊಸ ಯೋಜನೆಗಳನ್ನು ಜಾರಿಗೊಳಿಸುವುದು
ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅನುಕೂಲವಾಗುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅನಿವಾಸಿ ಕನ್ನಡಿಗರಿಗೆ ಅನುವು ಮಾಡಿಕೊಟ್ಟಿದೆ. ಹೀಗಾಗಿ ಕರ್ನಾಟಕ ಎನ್ಆರ್‌ಐ ನೀತಿ 2017 ಅನ್ನು ಜಾರಿಗೆ ತರಲಾಗಿದೆ. ಇನ್ನು ಎನ್‌ಆರ್‌ಐಗಳಿಗಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.