ಅನಿವಾಸಿ ಭಾರತೀಯರು ಪಿಪಿಎಫ್ ಖಾತೆಗಳನ್ನು ತೆರೆಯಬಹುದೇ ಎಂಬ ಗೊಂದಲಗಳು ಇರುತ್ತವೆ. ಹೀಗಾಗಿ ಇಲ್ಲಿ ಕೆಲವೊಂದು ನಿಯಮಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಖಾತೆ ತೆರೆಯಬಹುದು. ನಿವಾಸಿ ಭಾರತೀಯರು ಅನಿವಾಸಿ ಭಾರತೀಯರಾದಾಗ ಅವರ ನಿವಾಸದ ಸ್ಥಿತಿ ಬದಲಾಗುತ್ತದೆ. ಆಗ ಎನ್‌ಪಿಎಸ್‌ ಖಾತೆಯನ್ನು ಮುಚ್ಚಬೇಕಾಗುತ್ತದೆ. ಎನ್‌ಆರ್‌ಐಗಳಾದ ಬಳಿಕ ಮತ್ತೊಂದು ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು. ಆಗ ಪಿಪಿಎಫ್‌ ಖಾತೆಗಳನ್ನು ತೆರೆಯಬಹುದು. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಮನೆಯ ಈ ನಿಖರವಾದ ಈ ಸ್ಥಳದಲ್ಲಿ ಫ್ರಿಜ್ ಇರಿಸಿ : ಇಲ್ಲದಿದ್ದರೆ ಶನಿ ಕಾಟ ತಪ್ಪಿದಲ್ಲ!


ಎನ್‌ಪಿಎಸ್‌ ಎಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ ಎಂದರ್ಥ. 18 ರಿಂದ 60 ವರ್ಷ ವಯಸ್ಸಿನ ಎಲ್ಲಾ ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್‌ ಖಾತೆಯನ್ನು ತೆರೆಯಬಹುದು. 


ಪಿಪಿಎಫ್ ಖಾತೆಯ ಸಂದರ್ಭದಲ್ಲಿ, ಎನ್‌ಆರ್‌ಐ ಹೊಸ ಪಿಪಿಎಫ್ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ. ಆದರೆ ಅವರು ಭಾರತೀಯ ನಿವಾಸಿಯಾಗಿದ್ದಾಗ ಪಿಪಿಎಫ್ ಖಾತೆಯನ್ನು ತೆರೆದಿದ್ದರೆ, ಅವರು ತಮ್ಮ ಸ್ಥಿತಿಯ ಬದಲಾವಣೆಯ ಬಗ್ಗೆ ಬ್ಯಾಂಕ್‌ಗೆ ತಿಳಿಸಬೇಕಾಗುತ್ತದೆ. ಆ ಖಾತೆಯನ್ನು ಅದರ ಮುಕ್ತಾಯದವರೆಗೆ ಹಿಡಿದಿಟ್ಟುಕೊಳ್ಳಬಹುದು. ಸ್ಥಿತಿ ಬದಲಾವಣೆಯ ನಂತರ ಕೊಡುಗೆಯನ್ನು ಮುಂದುವರಿಸಬಹುದು. 


ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದು:
ಭಾರತದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಅನಿವಾಸಿ ಭಾರತೀಯರ ಹೂಡಿಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಾಂಕ್ರಾಮಿಕದಂತಹ ತೊಂದರೆಗಳಿಂದ ವಿದೇಶದಲ್ಲಿರುವ ಭಾರತೀಯರಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ತಾಯ್ನಾಡಿನಲ್ಲಿ ಭೂಮಿ ಅಥವಾ ಸ್ವಂತ ಮನೆ ಹೊಂದಿದ್ದರೆ ಭವಿಷ್ಯದಲ್ಲಿ ಇಲ್ಲೇ ಬಂದು ನೆಲೆಸಬಹುದು ಎನ್ನುವ ಆಲೋಚನೆಯಿಂದ ದೇಶದಲ್ಲಿ ಸ್ವಂತ ಮನೆ ಅಥವಾ ಅಪಾರ್ಟ್‌ಮೆಂಟ್‌ ಅಥವಾ ನಿವೇಶನ ಖರೀದಿಸುವವರು ಹೆಚ್ಚಾಗುತ್ತಿದ್ದಾರೆ. ಆದರೆ ಅನಿವಾಸಿಗಳಾದರೆ ಯಾವ ರೀತಿಯಲ್ಲಿ ಪತ್ರಗಳನ್ನು ತಯಾರಿಸಬೇಕು ಎಂಬುದು ಸ್ವಲ್ವ ಗೊಂದಲವನ್ನು ಉಂಟು ಮಾಡುತ್ತದೆ. 


ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದವರು ದೇಶದಲ್ಲಿ ಯಾವುದೇ ವಸತಿ ಅಥವಾ ವಾಣಿಜ್ಯ ಪ್ರಾಪರ್ಟಿ ಖರೀದಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ಅನುಮತಿ ನೀಡಿದೆ. ಇದಕ್ಕಾಗಿ ಕೇಂದ್ರ ಬ್ಯಾಂಕ್‌ನಿಂದ ನಿರ್ದಿಷ್ಟ ಅನುಮತಿ ಪಡೆಯಬೇಕಾಗಿಲ್ಲ.ಈಗಿರುವ ಆರ್‌ಬಿಐ ಕಾನೂನಿನಡಿ ಎನ್‌ಆರ್‌ಐ ಅಥವಾ ಪಿಐಒಗಳು ಎಷ್ಟು ಬೇಕಾದರೂ ವಾಣಿಜ್ಯ ಅಥವಾ ರೆಸಿಡೆನ್ಶಿಯಲ್‌ ಪ್ರಾಪರ್ಟಿಗಳನ್ನು ಖರೀದಿಸಬಹುದು. 


ಇದನ್ನು ಓದಿ: ವರುಣನ ನರ್ತನಕ್ಕೆ ನಲುಗಿದ ಬೆಂಗಳೂರು: ಇನ್ನೂ ಐದು ದಿನ ಭಾರಿ ಮಳೆ‌ ಮುನ್ಸೂಚನೆ


ಭಾರತದ ಆದಾಯ ತೆರಿಗೆ ಕಾನೂನು ಕೂಡ ಹಲವು ರೆಸಿಡೆನ್ಶಿಯಲ್‌ ಅಥವಾ ವಾಣಿಜ್ಯ ಪ್ರಾಪರ್ಟಿ ಹೊಂದಲು ಅವಕಾಶ ನೀಡುತ್ತದೆ. ಎಲ್ಲಾದರೂ ಎನ್‌ಆರ್‌ಐಗಳಿಗೆ ಭಾರತಕ್ಕೆ ಬರಲು ಸಾಧ್ಯವಾಗದೆ ಇದ್ದರೆ ಅಟಾರ್ನಿ ಪವರ್‌ ಇರುವ ಬೇರೆ ವ್ಯಕ್ತಿಗಳ ಮೂಲಕ ದಾಖಲೆ ಪತ್ರಗಳನ್ನು ಸಲ್ಲಿಸಿಯೂ ಖರೀದಿಸಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.