Shocking Viral Video: ಎದೆ ಝಲ್ಲೆನಿಸುವ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ತಮಿಳುನಾಡಿನಲ್ಲಿ ನಡೆದ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ರಾತ್ರಿವೇಳೆ ಚಾಲಕ ಅತಿವೇಗದಲ್ಲಿ ಬಸ್ ಚಲಾಯಿಸಿದ್ದು, ಮುಂಭಾಗದಿಂದ ಬಂದ ಮತ್ತೊಂದು ಬಸ್ ಆತನಿಗೆ ಕಾಣಿಸಿಯೇ ಇಲ್ಲ.

Written by - Puttaraj K Alur | Last Updated : May 18, 2022, 04:59 PM IST
  • ಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿ
  • ಬಸ್‍ಗಳ ನಡುವಿನ ಭೀಕರ ಅಪಘಾತದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಎದೆ ಝಲ್ಲೆನಿಸುವ ವಿಡಿಯೋ
Shocking Viral Video: ಎದೆ ಝಲ್ಲೆನಿಸುವ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ title=
ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿ

ನವದೆಹಲಿ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ 30 ಮಂದಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ ಮೇ 17ರ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಎಡಪ್ಪಾಡಿಯಿಂದ 30 ಪ್ರಯಾಣಿಕರನ್ನು ಹೊತ್ತ ಖಾಸಗಿ ಬಸ್ಸು 55 ವಿದ್ಯಾರ್ಥಿಗಳೊಂದಿಗೆ ತಿರುಚೆಂಗೋಡಿನಿಂದ ಪ್ರಯಾಣಿಸುತ್ತಿದ್ದ ಮತ್ತೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಎಡಪ್ಪಾಡಿ-ಶಂಕರಿ ಹೆದ್ದಾರಿಯ ಕೊಝಿಪನೈ ಬಸ್ ನಿಲ್ದಾಣದ ಬಳಿ ಬಸ್‌ಗಳು ಆಗಮಿಸಿದಾಗ ಡಿಕ್ಕಿ ಹೊಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ

ಎರಡು ಬಸ್‍ಗಳ ನಡುವೆ ಡಿಕ್ಕಿಯಾಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ಅಪಘಾತದ ದೃಶ್ಯವನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ಭೀಕರ ಅಪಘಾತವು ನೋಡುಗರಿಗೆ ಭಯಾನಕ ಅನುಭವ ನೀಡುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಅಪಘಾತವಾದ ಒಂದೇ ಸೆಕೆಂಡ್‍ನಲ್ಲಿ ಬಸ್ ಚಾಲಕ ತನ್ನ ಸೀಟಿನಿಂದ ಇನ್ನೊಂದು ಬದಿಗೆ ಎಸೆಯಲ್ಪಟ್ಟಿದ್ದು, ಬಸ್‌ನ ಮುಂಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿರುವುದು ಕಂಡುಬಂದಿದೆ.  

ಇದನ್ನೂ ಓದಿ: Viral Video: ಜೀವನದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ನೀವು ಈ ವಿಡಿಯೋ ನೋಡಲೇಬೇಕು!

ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ

ತಮಿಳುನಾಡಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ಆರಂಭದಲ್ಲಿ ಚಾಲಕ ರಾತ್ರಿಯಲ್ಲಿ ಅತಿವೇಗದಲ್ಲಿ ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಮುಂಭಾಗದಿಂದ ಮತ್ತೊಂದು ಬಸ್‍ ಬರುವ ಬಗ್ಗೆ ಆತನಿಗೆ ಯಾವುದೇ ಕಲ್ಪನೆ ಇರಲಿಲ್ಲ. ವೇಗವಾಗಿ ವಾಹನ ಓಡಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಭೀಕರ ಅಪಘಾತದ ಬಳಿಕ ಚಾಲಕನ ಸ್ಥಿತಿ ಹದಗೆಟ್ಟಿದೆ. ಆದರೆ, ಬಳಿಕ ಆತನಿಗೆ ಪ್ರಜ್ಞೆ ಬಂದಿದ್ದು, ಹಿಂದೆ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಿದ್ದರು. ಕೆಲವು ಸೆಕೆಂಡ್‌ಗಳ ಈ ವಿಡಿಯೋ ನೋಡಿದ್ರೆ ಮೈಜುಂ ಅನ್ನುತ್ತದೆ.

ಇದನ್ನೂ ಓದಿ: Viral Video Today: ಹಾವಿನ ಜೊತೆ ಸುಂದರಿಯ ಚೆಲ್ಲಾಟ, ನಂತರ ನಡೆದಿದ್ದು ಯುವತಿ ಲೈಫಲ್ಲಿ ಮರೆಯಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News