ವರುಣನ ನರ್ತನಕ್ಕೆ ನಲುಗಿದ ಬೆಂಗಳೂರು: ಇನ್ನೂ ಐದು ದಿನ ಭಾರಿ ಮಳೆ‌ ಮುನ್ಸೂಚನೆ

ಇದರ ನಡುವೆ ಹವಾಮಾನ ಇಲಾಖೆ ಮತ್ತೊಮ್ಮೆ ಮುನ್ಸೂಚನೆ ನೀಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ರಾತ್ರಿ ಇನ್ನಷ್ಟು ವರುಣನ ನರ್ತನ ಇರಲಿದೆ ಎಂದು ಮಾಹಿತಿ ನೀಡಲಾಗಿದೆ. ನಿನ್ನೆ ರಾತ್ರಿ 12ಸೆ.ಮೀ ಮಳೆಯಾಗಿತ್ತು.‌ ಇಂದು ಸಂಜೆ ಬಳಿಕ ಶುರುವಾಗಲಿರುವ ಮಳೆ ಸರಿ ಸುಮಾರು 14ಸೆ.ಮೀ ತನಕ‌ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರಾದ ಪ್ರಸಾದ್ ಮಾಹಿತಿ ನೀಡಿದ್ದಾರೆ.

Written by - Manjunath Hosahalli | Edited by - Bhavishya Shetty | Last Updated : May 18, 2022, 05:09 PM IST
  • ಬೆಂಗಳೂರಿನಲ್ಲಿ ಮಳೆಯ ಅಬ್ಬರ
  • ಮುಂದಿನ ದಿನಗಳಲ್ಲಿ 14ಸೆ.ಮೀ ಮಳೆಯಾಗುವ ಸಾಧ್ಯತೆ
  • ಹವಾಮಾನ ಇಲಾಖೆ ತಜ್ಞ ಪ್ರಸಾದ್ ಮಾಹಿತಿ
ವರುಣನ ನರ್ತನಕ್ಕೆ ನಲುಗಿದ ಬೆಂಗಳೂರು: ಇನ್ನೂ ಐದು ದಿನ ಭಾರಿ ಮಳೆ‌ ಮುನ್ಸೂಚನೆ title=
Bengaluru Rain

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಮಾನ್ಸೂನ್ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಬಹುತೇಕ ಭಾಗದಲ್ಲಿ ಸುರಿದ ಮಳೆಯಿಂದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿದೆ. ಮಳೆ ನೀರಿನ ಸಮಸ್ಯೆಯಿಂದ ಮನೆಗಳಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿವೆ. ಇದರಿಂದಾಗಿ ಇಡೀ ರಾತ್ರಿ ಜಾಗರಣೆ ಮಾಡುವಂತಹ ಸ್ಥಿತಿ ಬೆಂಗಳೂರಿನ ಜನತೆಗೆ ಎದುರಾಗಿದೆ. 

ಇದನ್ನು ಓದಿ: Gujarat Tragedy: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯ ಗೋಡೆ ಕುಸಿತ: 12 ಮಂದಿ ದುರ್ಮರಣ

ಇದರ ನಡುವೆ ಹವಾಮಾನ ಇಲಾಖೆ ಮತ್ತೊಮ್ಮೆ ಮುನ್ಸೂಚನೆ ನೀಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ರಾತ್ರಿ ಇನ್ನಷ್ಟು ವರುಣನ ನರ್ತನ ಇರಲಿದೆ ಎಂದು ಮಾಹಿತಿ ನೀಡಲಾಗಿದೆ. ನಿನ್ನೆ ರಾತ್ರಿ 12ಸೆ.ಮೀ ಮಳೆಯಾಗಿತ್ತು.‌ ಇಂದು ಸಂಜೆ ಬಳಿಕ ಶುರುವಾಗಲಿರುವ ಮಳೆ ಸರಿ ಸುಮಾರು 14ಸೆ.ಮೀ ತನಕ‌ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರಾದ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಸಮುದ್ರಮಟ್ಟದಿಂದ 900ಮೀ. ಎತ್ತರದಲ್ಲಿ ಸುಳಿಗಾಳಿ: 
ಬೆಂಗಳೂರು, ಬೆಂ,ಗ್ರಾ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಭಾರಿ ಮಳೆಯಾಗಲಿದ್ದು, ಇದಕ್ಕೆಲ್ಲಾ ಮೇಲ್ಮೈ ಸುಳಿಗಾಳಿಯ ಪ್ರಭಾವ ಎನ್ನಲಾಗ್ತಿದೆ. ಮಧ್ಯಪ್ರದೇಶದ ಮಧ್ಯಭಾಗದಿಂದ ತಮಿಳುನಾಡಿನ ಒಳನಾಡಿನವರೆಗೆ ಸಮುದ್ರಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದು ರಾಜ್ಯದಲ್ಲಿ ಇನ್ನೂ ಐದು ದಿನಗಳ‌ ಕಾಲ ಧಾರಾಕಾರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ‌.

ಇದನ್ನು ಓದಿ: ವರ್ಲ್ಡ್ ವೈಡ್ KGF 2 ಬಾಕ್ಸ್ ಆಫೀಸ್ ಕಲೆಕ್ಷನ್‌ ₹1200 ಕೋಟಿಗೂ ಹೆಚ್ಚು!

ಬೆಂಗಳೂರಿಗೆ ಎಲ್ಲೋ ಅಲರ್ಟ್ ಘೋಷಣೆ:
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 12ಸೆ.ಮೀ ಮಳೆ ಸುರಿದಿದ್ದು ದಾಖಲೆ‌ ಬರೆದಿದೆ.‌ ಇದಿಷ್ಟೇ ಅಲ್ಲದೆ ಇಂದು ರಾತ್ರಿ ಬರೊಬ್ಬರಿ 14 ಸೆ.ಮೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದು, ಜನ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News