ಭಾರತದಲ್ಲಿ ಪ್ರವಾಸಿ ವೀಸಾ ಇಂಟರ್‌ವ್ಯೂ ಪುನಾರಂಭ: ಯುಎಸ್ ರಾಯಭಾರ ಕಛೇರಿ ಸ್ಪಷ್ಟನೆ
`ಭಾರತದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ವೈಯಕ್ತಿಕ ಪ್ರವಾಸಿ ವೀಸಾ ನೇಮಕಾತಿಗಳ ಸಂದರ್ಶನವನ್ನು ಪುನರಾರಂಭಿಸುತ್ತಿದ್ದೇವೆ` ಎಂದು ಯುಎಸ್ ರಾಯಭಾರ ಕಚೇರಿಯ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಅಧಿಕೃತವಾಗಿ ಹೇಳಿಕೊಂಡಿದೆ.
ವಿದ್ಯಾರ್ಥಿ ವೀಸಾಗಳ ಇಂಟ್‌ರ್ವ್ಯೂ ಕೊನೆಗೊಂಡ ಬೆನ್ನಲ್ಲೇ ಸೆಪ್ಟೆಂಬರ್‌ನಿಂದ ಭಾರತದಲ್ಲಿ ಪ್ರವಾಸಿ ಮತ್ತು ಸಂದರ್ಶಕರ B1-B2 ವೀಸಾ ನೇಮಕಾತಿಗಳನ್ನು ಪುನರಾರಂಭಿಸುವುದಾಗಿ ಯುಎಸ್ ರಾಯಭಾರ ಕಚೇರಿ ಮಾಹಿತಿ ನೀಡಿದೆ.
"ಭಾರತದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ವೈಯಕ್ತಿಕ ಪ್ರವಾಸಿ ವೀಸಾ ನೇಮಕಾತಿಗಳ ಸಂದರ್ಶನವನ್ನು ಪುನರಾರಂಭಿಸುತ್ತಿದ್ದೇವೆ" ಎಂದು ಯುಎಸ್ ರಾಯಭಾರ ಕಚೇರಿಯ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಅಧಿಕೃತವಾಗಿ ಹೇಳಿಕೊಂಡಿದೆ.
ಇದನ್ನು ಓದಿ: ಚಿನ್ನ ಖರೀದಿ ಮತ್ತು ಮಾರಾಟ ಮಾಡುವವರಿಗೊಂದು ಮಹತ್ವದ ಮಾಹಿತಿ! ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ
“ಈ ಹಿಂದೆ ಇದ್ದ ನಿಗದಿತ ಪ್ಲೇಸ್‌ಹೋಲ್ಡರ್‌ಗಳನ್ನು ಈಗ ರದ್ದುಗೊಳಿಸಲಾಗಿದೆ. ಪ್ಲೇಸ್‌ಹೋಲ್ಡರ್ ಅಪಾಯಿಂಟ್‌ಮೆಂಟ್‌ಗಳನ್ನು ರದ್ದುಗೊಳಿಸಿರುವ ಅರ್ಜಿದಾರರು ನಿಯಮಿತ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಲು ವೇಳಾಪಟ್ಟಿ ವ್ಯವಸ್ಥೆಯನ್ನು ಮರು-ನಮೂದಿಸಬೇಕು”ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿದಾರರು ಯುನೈಟೆಡ್ ಸ್ಟೇಟ್ಸ್ ಪೌರತ್ವ ಮತ್ತು ವಲಸೆ ಸೇವೆಗಳ (USCIS) ವೇಳಾಪಟ್ಟಿ ವ್ಯವಸ್ಥೆಯ ಮೂಲಕ ನಿಯಮಿತ ಸ್ಲಾಟ್‌ಗಳನ್ನು ಕಾಯ್ದಿರಿಸಬೇಕು.
ಇದನ್ನು ಓದಿ: ಮೂರು ಅತ್ಯದ್ಭುತ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಏರ್ಟೆಲ್
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿನ ಯುಎಸ್ ಮಿಷನ್ ವೀಸಾ ಇಂಟರ್‌ವ್ಯೂ 2020ರ ಮಾರ್ಚ್ ತಿಂಗಳಿನಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಯುಎಸ್ ರಾಯಭಾರ ಕಛೇರಿಯಿಂದ ಮತ್ತೆ ವೀಸಾ ಸಂದರ್ಶನ ನಡೆಸುವುದಾಗಿ ಸ್ಪಷ್ಟನೆ ದೊರೆತಿದ್ದು, ಎನ್‌ಆರ್‌ಐ ಕುಟುಂಬಗಳು ಹಾಗೂ ಅಮೇರಿಕಾ ಪ್ರವಾಸ ಕೈಗೊಳ್ಳಬೇಕು ಎಂಬ ಬೇಡಿಕೆ ಹೊಂದಿದ್ದ ಭಾರತೀಯರಿಗೆ ಸಂತೋಷ ನೀಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.