Gold Purchase And Selling New Rule: ಚಿನ್ನ ಖರೀದಿ ಮತ್ತು ಮಾರಾಟ ಮಾಡುವವರಿಗೊಂದು ಮಹತ್ವದ ಮಾಹಿತಿ! ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ

Gold Hallmarking: ಬರುವ ಜೂನ್ 1 ರಿಂದ ಸರ್ಕಾರ ಚಿನ್ನದ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಿದೆ. ಇದರ ಅಡಿ ಇದೀಗ ಗೋಲ್ಡ್ ಹಾಲ್ಮಾರ್ಕಿಂಗ್ ನಿಯಮಗಳಲ್ಲಿ ತಿದ್ದುಪಡಿ ಕೂಡ ಮಾಡಲಾಗಿದೆ. ಬನ್ನಿ ಹೊಸ ನಿಯಮ ಏನು ಹೇಳುತ್ತದೆ ತಿಳಿದುಕೊಳ್ಳೋಣ.  

Written by - Nitin Tabib | Last Updated : May 30, 2022, 10:16 PM IST
  • ಚಿನ್ನ ಮಾರಾಟ, ಖರೀದಿ ಮಾಡುವವರಿಗೊಂದು ಮಹತ್ವದ ಮಾಹಿತಿ
  • ನಾಳೆಯಿಂದ ಈ ನಿಯಮ ಜಾರಿಯಾಗುತ್ತಿದೆ
  • ಚಿನ್ನ ಖರೀದಿಸುವ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ
Gold Purchase And Selling New Rule: ಚಿನ್ನ ಖರೀದಿ ಮತ್ತು ಮಾರಾಟ ಮಾಡುವವರಿಗೊಂದು ಮಹತ್ವದ ಮಾಹಿತಿ! ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ title=
Gold Hallmarking

Gold Hallmarking: ನೀವೂ ಒಂದು ವೇಳೆ ಚಿನ್ನವನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಜೂನ್ 1 ರಿಂದ ನಿಮಗೆ ದೇಶದಲ್ಲಿ ಶುದ್ಧ ಚಿನ್ನ ಮಾತ್ರ ಸಿಗಲಿದೆ. ಇದಕ್ಕೆ ಕಾರಣ ಎಂದರೆ, ಆಭರಣ ಮಾರಾಟಕ್ಕೆ ದೇಶದಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ನಿಯಮ ಒಂದೊಮ್ಮೆ ಜಾರಿಗೆ ಬಂದರೆ ಆಭರಣಕಾರರು ದೇಶದಲ್ಲಿ ಹಾಲ್‌ಮಾರ್ಕ್ ಇಲ್ಲದೆ ಚಿನ್ನವನ್ನು ಮಾರಾಟ ಮಾಡಲು ಸಾಧ್ಯವಿಲ್ಲ.

ಶುದ್ಧ ಚಿನ್ನವನ್ನು ಮಾತ್ರ ಪಡೆಯುವಿರಿ
ಚಿನ್ನದ ಮಾರಾಟದಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವುದರಿಂದ ದೇಶದ ಜನರು ನಕಲಿ ಮತ್ತು ಕಲಬೆರಕೆ ಚಿನ್ನದಿಂದ ಮುಕ್ತಿ ಪಡೆಯಲಿದ್ದಾರೆ. ಇದಕ್ಕೂ ಮೊದಲು ಒಟ್ಟು ಮೂರು ದರ್ಜೆಯ ಚಿನ್ನಗಳಿಗೆ ಹಾಲ್ಮಾರ್ಕಿಂಗ್ ನಿಯಮದಿಂದ ವಿಯಾಯ್ತಿ ನೀಡಲಾಗಿತ್ತು, ಆದರೆ ಇದೀಗ ಎಲ್ಲಾ ದರ್ಜೆಯ ಚಿನ್ನವನ್ನು ಹಾಲ್‌ಮಾರ್ಕಿಂಗ್‌ ನಿಯಮದ ಅಡಿಗೆ ತರಲಾಗಿದೆ ಎಂಬುದು ಇಲ್ಲಿ ಗಮಹಿಸಬೇಕಾದ ಮಹತ್ವದ ಸಂಗತಿಯಾಗಿದೆ. 

BIS ಹಾಲ್‌ಮಾರ್ಕಿಂಗ್ ಯಾವುದೇ ಚಿನ್ನದ ಶುದ್ಧತೆಯ ಗುರುತಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇದಕ್ಕೂ ಮೊದಲು ಜೂನ್ 16, 2021 ರವರೆಗೆ, ಚಿನ್ನದ ಹಾಲ್‌ಮಾರ್ಕಿಂಗ್ ಸ್ವಇಚ್ಚೆಯ ಮೇಲೆ ಆಧಾರವಾಗಿರಲಿದೆ ಎನ್ನಲಾಗಿತ್ತು. ಆದರೆ ಇದೀಗ ಜೂನ್ 1 ರಿಂದ ಅದನ್ನು ಕಡ್ಡಾಯಗೊಳಿಸಲಾಗಿದೆ. ಹಲವು ಬಾರಿ ನಕಲಿ ಅಥವಾ ಕಡಿಮೆ ದರ್ಜೆಯ ಚಿನ್ನವನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಆದರೆ ಹಾಲ್‌ಮಾರ್ಕ್ ಚಿನ್ನವು 100% ಪ್ರಮಾಣೀಕೃತ ಚಿನ್ನವಾಗಿರಲಿದೆ.

ಇದನ್ನೂ ಓದಿ-LIC Dividend: ಎಲ್ಐಸಿ ಷೇರು ಹೊಂದಿರುವವರಿಗೊಂದು ಸಂತಸದ ಸುದ್ದಿ, ಡಿವಿಡೆಂಡ್ ಘೋಷಣೆ

ಈ ಶ್ರೇಣಿಗಳನ್ನು ಕೂಡ ಶಾಮೀಲುಗೊಳಿಸಲಾಗಿದೆ 
ಜೂನ್ 1 ರಿಂದ ಸರ್ಕಾರ ಎರಡನೇ ಹಂತದ ಹಾಲ್‌ಮಾರ್ಕಿಂಗ್ ಜಾರಿಗೊಳಿಸುತ್ತಿದ್ದು, ಇದರಲ್ಲಿ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಿ, ಅದರಲ್ಲಿ ಮತ್ತೆ  ಮೂರೂ ಗ್ರೇಡ್‌ಗಳನ್ನು ಶಾಮೀಳುಗೊಲಿಸಿದೆ. ಅಂದರೆ, ಈ ಬಾರಿ 20 ಕ್ಯಾರೆಟ್, 23 ಕ್ಯಾರೆಟ್ ಮತ್ತು 24 ಕ್ಯಾರೆಟ್ಗಳನ್ನು ಹಾಲ್ಮಾರ್ಕಿಂಗ್ ನಿಯಮಗಳಲ್ಲಿ ಸೇರಿಸಲಾಗಿದೆ. ಇದಕ್ಕೂ ಮೊದಲು, ಕಳೆದ ವರ್ಷ ಸರ್ಕಾರವು ದೇಶಾದ್ಯಂತ ಚಿನ್ನದ ಕಡ್ಡಾಯ ಹಾಲ್‌ಮಾರ್ಕ್ ಅನ್ನು ಜಾರಿಗೆ ತರಲು ನಿರ್ಧರಿಸಿತ್ತು. ಆದರೆ ಇದು ಹಂತ ಹಂತವಾಗಿ ಜಾರಿಯಾಗುತ್ತಿದೆ. ಮೊದಲ ಹಂತದಲ್ಲಿ, 23 ಜೂನ್ 2021 ರಂದು ದೇಶದ 256 ಜಿಲ್ಲೆಗಳಲ್ಲಿ ಇದನ್ನು ಜಾರಿಗೆ ತರಲಾಗಿತ್ತು.

ಇದನ್ನೂ ಓದಿ-Post Office ಜಬರ್ದಸ್ತ್ ಯೋಜನೆ, ಒಂದೇ ವರ್ಷದಲ್ಲಿ ಬ್ಯಾಂಕ್ ಗಳಿಗಿಂತ ಹೆಚ್ಚು ಲಾಭ, ಇಲ್ಲಿದೆ ಡೀಟೇಲ್ಸ್

ಈಗ 35 ರೂಪಾಯಿ ಶುಲ್ಕದ ರೂಪದಲ್ಲಿ ಪಾವತಿಸಬೇಕು
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ 4 ಏಪ್ರಿಲ್ 2022 ರಂದು ಅಧಿಸೂಚನೆಯನ್ನು ಹೊರಡಿಸುವ ಮೂಲಕ ಎರಡನೇ ಹಂತದ ಹಾಲ್‌ಮಾರ್ಕಿಂಗ್ ಅನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಇಲ್ಲಿಯವರೆಗೆ 14 ಕ್ಯಾರೆಟ್, 18 ಕ್ಯಾರೆಟ್, 20 ಕ್ಯಾರೆಟ್, 22 ಕ್ಯಾರೆಟ್, 23 ಕ್ಯಾರೆಟ್ ಮತ್ತು 24 ಕ್ಯಾರೆಟ್ ಎಂಬ 6 ಶುದ್ಧತೆಯ ವರ್ಗಗಳಿಗೆ ಚಿನ್ನದ ಹಾಲ್‌ಮಾರ್ಕ್ ಕಡ್ಡಾಯವಾಗಿತ್ತು. ಇದರೊಂದಿಗೆ, ಹಾಲ್‌ಮಾರ್ಕಿಂಗ್‌ನಲ್ಲಿ ಬಿಐಎಸ್ ಲೋಗೋ, ನಿಖರತೆ ಗ್ರೇಡ್ ಮತ್ತು ಆರು ಅಂಕೆಗಳ ಆಲ್ಫಾನ್ಯೂಮರಿಕಲ್ ಕೋಡ್ ಅನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೂನ್ 1 ರಿಂದ, ಗ್ರಾಹಕರು ಪ್ರತಿ ಚಿನ್ನದ ಆಭರಣದ ಮೇಲೆ 35 ರೂಪಾಯಿಗಳನ್ನು ಹಾಲ್‌ಮಾರ್ಕಿಂಗ್ ಶುಲ್ಕವಾಗಿ ಪಾವತಿಸಬೇಕಾಗಲಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News