US Visa: ಭಾರತದಲ್ಲಿನ US ರಾಯಭಾರ ಕಚೇರಿಯು ಮುಂದಿನ 12 ತಿಂಗಳುಗಳಲ್ಲಿ ಸುಮಾರು 8 ಲಕ್ಷ ವೀಸಾಗಳನ್ನು ಪ್ರಕ್ರಿಯೆಗೊಳಿಸುವ ಸಾಧ್ಯತೆಯಿದೆ ಎಂದು ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಮಂಗಳವಾರ ಚೆನ್ನೈನಲ್ಲಿ ಮಾಹಿತಿ ನೀಡಿದ್ದಾರೆ.
US Consulate: ಈ ಕುರಿತು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿರುವ ಯುಎಸ್ ರಾಯಭಾರ ಕಚೇರಿಯ ರಾಜತಾಂತ್ರಿಕ ವ್ಯವಹಾರಗಳ ಸಚಿವ ಡೊನಾಲ್ಡ್ ಎಲ್ ಹೆಫ್ಲಿನ್, "ಮುಂದಿನ 12 ತಿಂಗಳಲ್ಲಿ 8,00,000 ವೀಸಾಗಳನ್ನು ನೀಡುವ ಯೋಜನೆ ಹೊಂದಲಾಗಿದೆ. ವೀಸಾಗಳನ್ನು ಪ್ರಕ್ರಿಯೆಗೊಳಿಸಲು ಸಾಕಷ್ಟು ಸ್ಲಾಟ್‌ಗಳನ್ನು ತೆರೆಯಲಾಗಿದೆ ಮತ್ತು H ಮತ್ತು L ವೀಸಾಗಳ ಬೇಡಿಕೆಯನ್ನು ಈಡೇರಿಸುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದ್ದಾರೆ.

COMMERCIAL BREAK
SCROLL TO CONTINUE READING

ಕೋವಿಡ್ -19 ಮಹಾಮಾರಿಯ ಮೊದಲು ನೀಡಲಾಗಿರುವ  ಒಟ್ಟು ವೀಸಾಗಳ ಕುರಿತು ವಿಚಾರಿಸಿದಾಗ, ಒಟ್ಟು 1.2 ಮಿಲಿಯನ್ ವೀಸಾಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಈ ಬಾರಿಯ ವೀಸಾ ಪ್ರಕ್ರಿಯೆಯು ಪೂರ್ವ ಕೋವಿಡ್ -19 ಮಟ್ಟವನ್ನು ಶೀಘ್ರದಲ್ಲಿಯೇ ತಲುಪಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

"ಕೊವಿಡ್-19 ಮಹಾಮಾರಿಗೂ ಮುನ್ನ 191.1 ಮಿಲಿಯನ್ ವಿಸಾಗಳನ್ನು ನೀಡಲಾಗಿತ್ತು. 2023-24 ರ ವೇಳೆಗೆ ಅದನ್ನು ಪುನಃ ಸಾಧಿಸಲಾಗುವುದು" ಎಂದು ಹೆಫ್ಲಿನ್ ಹೇಳಿದ್ದಾರೆ.

"ಭಾರತಾದ್ಯಂತ ಇರುವ ದೂತಾವಾಸ ಕಚೇರಿಗಳು  ತಮ್ಮ ತಮ್ಮ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ ಮತ್ತು ತಲೆಎಣಿಕೆ ಆಧಾರದ ಮೇಲೆ ಈ ಕಛೇರಿಗಳು ವಿಸಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿವೆ" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದೇ...? ಇಲ್ಲಿದೆ ಉತ್ತರ

"ಈಗಾಗಲೇ ಇರುವ ವೀಸಾ ಪ್ರಕ್ರಿಯೆಗಳ ಶೇಕಡಾ 50 ರಷ್ಟು ಪ್ರಕ್ರಿಯೇಗಳನ್ನು (ಕೋವಿಡ್ -19 ಕಾರಣ) ಪೂರ್ಣಗೊಳಿಸಲಾಗಿದೆ ಮತ್ತು ನಾವು ನಮ್ಮ ಕಚೇರಿಗಳಿಗೆ ಹೆಚ್ಚಿನ ಉದ್ಯೋಗಿಗಳನ್ನು ಶೀಘ್ರದಲ್ಲಿಯೇ ಸೇರಿಸಲಿದ್ದೇವೆ. ನಾವು ಹೈದರಾಬಾದ್‌ನಲ್ಲಿ ಹೊಸ ಕಚೇರಿಯನ್ನು ಆರಂಬಿಸುತ್ತಿದ್ದು, ದೆಹಲಿ ಹಾಗೂ ಮುಂಬೈನ ನಮ್ಮ ಕಚೇರಿಗಳಿಗೆ ನಾವು ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳುತ್ತಿದ್ದೇವೆ. ಕೋಲ್ಕತ್ತಾದಲ್ಲಿ ನಾವು ಈಗಾಗಲೇ ಶೇ.100ರಷ್ಟು ಸಿಬ್ಬಂದಿಗಳನ್ನು ನಾವು ಹೊಂದಿದ್ದೇವೆ” ಎಂದು ಹೆಫ್ಲಿನ್ ಹೇಳಿದ್ದಾರೆ. 
ವಿಸಾ ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸಹಾಯವಾಣಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನಮ್ಮ ಎಲ್ಲಾ ದೂತಾವಾಸ ಕಚೇರಿಗಳು ಡೆಡಿಕೇಟೆಡ್ ದೂರವಾಣಿ ಸಂಪರ್ಕ ಹಾಗೂ ಇ-ಮೇಲ್ ವಿಳಾಸಗಳನ್ನು ಹೊಂದಿದ್ದು, ವೀಸಾ ಅರ್ಜಿದಾರರು ತಮ್ಮವಿಸಾ ಕುರಿತು ವಿಚಾರಣೆಯನ್ನು ನಡೆಸಬಹುದು ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ- ಅನಿವಾಸಿ ಭಾರತೀಯರು ಪಿಪಿಎಫ್ ಖಾತೆ ತೆರೆಯಬೇಕೇ? ಈ ನಿಯಮ ಅನುಸರಿಸಿ

'ಕೊವಿಡ್-19 ಮಹಾಮಾರಿಯ ಕಾರಣ 'ಭಾರತೀಯ ವೀಸಾಗಳನ್ನು ತಡೆಯಲಾಗಿದೆಯೇ?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ದೊಡ್ಡ ಪ್ರಮಾಣದಲ್ಲಿ ಅಲ್ಲ. ಆದರೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿಸಾ ನೀಡುವ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅದರ ಮೇಲೆ ಕಣ್ಣಿಟ್ಟಿದ್ದೇವೆ' ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ- 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.