ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದೇ...? ಇಲ್ಲಿದೆ ಉತ್ತರ

ಭಾರತೀಯರಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ತಾಯ್ನಾಡಿನಲ್ಲಿ ಭೂಮಿ ಅಥವಾ ಸ್ವಂತ ಮನೆ ಹೊಂದಿದ್ದರೆ ಭವಿಷ್ಯದಲ್ಲಿ ಇಲ್ಲೇ ಬಂದು ನೆಲೆಸಬಹುದು ಎನ್ನುವ ಆಲೋಚನೆಯಿಂದ ದೇಶದಲ್ಲಿ ಸ್ವಂತ ಮನೆ ಅಥವಾ ಅಪಾರ್ಟ್‌ಮೆಂಟ್‌ ಅಥವಾ ನಿವೇಶನ ಖರೀದಿಸುವವರು ಹೆಚ್ಚಾಗುತ್ತಿದ್ದಾರೆ. 

Written by - Bhavishya Shetty | Last Updated : Apr 20, 2022, 01:35 PM IST
  • ಅನಿವಾಸಿ ಭಾರತೀಯರು ದೇಶದಲ್ಲಿ ಪ್ರಾಪರ್ಟಿ ಖರೀದಿಸಬಹುದು
  • ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎನ್‌ಆರ್‌ಐ ಪಾಲಿಸಿಗಳು
  • ಇಲ್ಲಿದೆ ಅನಿವಾಸಿ ಭಾರತೀಯರಿಗೆ ಸಂಬಂಧಿಸಿದ ಕೆಲ ಮಾಹಿತಿ
ಭಾರತದಲ್ಲಿ ಎನ್‌ಆರ್‌ಐಗಳು ಪ್ರಾಪರ್ಟಿ ಖರೀದಿಸಬಹುದೇ...? ಇಲ್ಲಿದೆ ಉತ್ತರ title=
NRI

ವಿದೇಶದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರಿಗೆ ತಾಯ್ನಾಡಿನಲ್ಲಿ ಸ್ವಂತ ಮನೆಮಾಡಬೇಕೆಂಬ ಕನಸಿರುತ್ತದೆ. ಕೆಲವೊಮ್ಮೆ ಊರಲ್ಲಿರುವ ಅಪ್ಪ-ಅಮ್ಮನ ಪ್ರಾಪರ್ಟಿಯನ್ನು ಅನಿವಾಸಿಯಾಗಿರುವ ಮಗ ಅಥವಾ ಮಗಳಿಗೆ ವರ್ಗಾವಣೆ ಮಾಡಬೇಕಿರುತ್ತದೆ. ಆದರೆ, ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದವರು (ಪಿಐಒ) ದೇಶದಲ್ಲಿ ಪ್ರಾಪರ್ಟಿ ಖರೀದಿಸಬೇಕಾದರೆ ಅದಕ್ಕೆ ಸಂಬಂಧಪಟ್ಟಂತೆ ಏನೆಲ್ಲ ನಿಯಮಗಳಿವೆ ಎಂಬುದರ ಬಗ್ಗೆ ತಿಳಿದಿರುವುದಿಲ್ಲ. ಅದಕ್ಕೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಅನುಮತಿ ಪಡೆಯಬೇಕೆ? ಫಾರಿನ್‌ ಎಕ್ಸ್‌ಚೇಂಜ್‌ ಮ್ಯಾನೇಜ್‌ಮೆಂಟ್‌ ಆ್ಯಕ್ಟ್‌ನ ಅನ್ವಯವೇ ಹೂಡಿಕೆ ಮಾಡಬೇಕೆ? ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗುತ್ತದೆ. 

ಇದನ್ನು ಓದಿ: ʼಸರ್ ಅಹ್ಮದ್ ಸಲ್ಮಾನ್ ರಶ್ದಿʼ: ಭಾರತ ಮೂಲದ ಕಾದಂಬರಿಕಾರನ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಅನಿವಾಸಿ ಭಾರತೀಯರ ಹೂಡಿಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಾಂಕ್ರಾಮಿಕದಂತಹ ತೊಂದರೆಗಳಿಂದ ವಿದೇಶದಲ್ಲಿರುವ ಭಾರತೀಯರಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ತಾಯ್ನಾಡಿನಲ್ಲಿ ಭೂಮಿ ಅಥವಾ ಸ್ವಂತ ಮನೆ ಹೊಂದಿದ್ದರೆ ಭವಿಷ್ಯದಲ್ಲಿ ಇಲ್ಲೇ ಬಂದು ನೆಲೆಸಬಹುದು ಎನ್ನುವ ಆಲೋಚನೆಯಿಂದ ದೇಶದಲ್ಲಿ ಸ್ವಂತ ಮನೆ ಅಥವಾ ಅಪಾರ್ಟ್‌ಮೆಂಟ್‌ ಅಥವಾ ನಿವೇಶನ ಖರೀದಿಸುವವರು ಹೆಚ್ಚಾಗುತ್ತಿದ್ದಾರೆ. ಆದರೆ ಅನಿವಾಸಿಗಳಾದರೆ ಯಾವರೀತಿಯಲ್ಲಿ ಪತ್ರಗಳನ್ನು ತಯಾರಿಸಬೇಕು ಎಂಬುದು ಸ್ವಲ್ವ ಗೊಂದಲವನ್ನು ಉಂಟು ಮಾಡುತ್ತದೆ. 

ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದವರು ದೇಶದಲ್ಲಿ ಯಾವುದೇ ವಸತಿ ಅಥವಾ ವಾಣಿಜ್ಯ ಪ್ರಾಪರ್ಟಿ ಖರೀದಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ಅನುಮತಿ ನೀಡಿದೆ. ಇದಕ್ಕಾಗಿ ಕೇಂದ್ರ ಬ್ಯಾಂಕ್‌ನಿಂದ ನಿರ್ದಿಷ್ಟ ಅನುಮತಿ ಪಡೆಯಬೇಕಾಗಿಲ್ಲ.ಈಗಿರುವ ಆರ್‌ಬಿಐ ಕಾನೂನಿನಡಿ ಎನ್‌ಆರ್‌ಐ ಅಥವಾ ಪಿಐಒಗಳು ಎಷ್ಟು ಬೇಕಾದರೂ ವಾಣಿಜ್ಯ ಅಥವಾ ರೆಸಿಡೆನ್ಶಿಯಲ್‌ ಪ್ರಾಪರ್ಟಿಗಳನ್ನು ಖರೀದಿಸಬಹುದು. 

ಭಾರತದ ಆದಾಯ ತೆರಿಗೆ ಕಾನೂನು ಕೂಡ ಹಲವು ರೆಸಿಡೆನ್ಶಿಯಲ್‌ ಅಥವಾ ವಾಣಿಜ್ಯ ಪ್ರಾಪರ್ಟಿ ಹೊಂದಲು ಅವಕಾಶ ನೀಡುತ್ತದೆ. ಎಲ್ಲಾದರೂ ಎನ್‌ಆರ್‌ಐಗಳಿಗೆ ಭಾರತಕ್ಕೆ ಬರಲು ಸಾಧ್ಯವಾಗದೆ ಇದ್ದರೆ ಅಟಾರ್ನಿ ಪವರ್‌ ಇರುವ ಬೇರೆ ವ್ಯಕ್ತಿಗಳ ಮೂಲಕ ದಾಖಲೆ ಪತ್ರಗಳನ್ನು ಸಲ್ಲಿಸಿಯೂ ಖರೀದಿಸಬಹುದು.

ಆರ್‌ಬಿಐನ ಸಾಮಾನ್ಯ ಅನುಮತಿಯಡಿ ಎನ್‌ಆರ್‌ಐಗಳು ಕೃಷಿ ಅಥವಾ ಪ್ಲಾಂಟೇಷನ್‌ ಪ್ರಾಪರ್ಟಿಯನ್ನು ಖರೀದಿಸುವಂತೆ ಇಲ್ಲ. ಎಲ್ಲಾದರೂ ಎನ್‌ಆರ್‌ಐಗಳು ಫಾರ್ಮ್‌ ಹೌಸ್‌ ಅಥವಾ ಪ್ಲಾಂಟೇಷನ್‌ ಖರೀದಿಸಲೇಬೇಕು ಎಂದಿದ್ದರೆ ಅವರು ಆರ್‌ಬಿಐನಿಂದ ನಿರ್ದಿಷ್ಟ ಅನುಮತಿ ಪಡೆಯಬೇಕಾಗುತ್ತದೆ. 

ಇದನ್ನು ಓದಿ: ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಕುರಿತು ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ..

ಜಂಟಿ ಮಾಲೀಕತ್ವ: ಎನ್‌ಆರ್‌ಐಯು ಸಿಂಗಲ್‌ ಓನರ್‌ ಆಗಿ ಅಥವಾ ಇನ್ನೊಬ್ಬರು ಎನ್‌ಆರ್‌ಐಯನ್ನು ಒಳಗೊಂಡು ಜಂಟಿಯಾಗಿ ಪ್ರಾಪರ್ಟಿ ಖರೀದಿಸಬಹುದು. ಆದರೆ, ಜಂಟಿ ಮಾಲೀಕರು ಅನಿವಾಸಿ ಭಾರತೀಯರು ಅಥವಾ ಭಾರತೀಯ ಮೂಲದವರಾಗಿರಬೇಕು. 

ಎಲ್ಲಾದರೂ ಒಬ್ಬ ವ್ಯಕ್ತಿಯು ಭಾರತದಲ್ಲಿ ಪ್ರಾಪರ್ಟಿ ಹೊಂದಿದ್ದು, ಆತನಿಗೆ ವಿದೇಶದಲ್ಲಿ ಉದ್ಯೋಗ ದೊರಕಿದ ಬಳಿಕ ಎನ್‌ಆರ್‌ಐಯಾಗಿ ಬದಲಾದರೆ, ಇಂತಹ ಸಮಯದಲ್ಲಿಆತನ ಪ್ರಾಪರ್ಟಿ ಕತೆಯೇನು ಎಂಬ ಪ್ರಶ್ನೆ ಮೂಡಬಹುದು. ಈ ರೀತಿ ಮೊದಲು ಹೊಂದಿದ್ದ ಯಾವುದೇ ಕೃಷಿ ಭೂಮಿ, ಪ್ಲಾಂಟೇಷನ್‌ ಪ್ರಾಪರ್ಟಿ ಅಥವಾ ಫಾರ್ಮ್‌ ಹೌಸ್‌ನ ಮಾಲೀಕತ್ವವನ್ನು ಆತ ಅಥವಾ ಆಕೆ ಮುಂದುವರಿಸಬಹುದು. ಆದರೆ, ಎನ್‌ಆರ್‌ಐ ಆದ ಬಳಿಕ ಖರೀದಿಸಿದ ಪ್ರಾಪರ್ಟಿ ಇದಾಗಿರಬಾರದು. ಈ ರೀತಿ ಮೊದಲೇ ಹೊಂದಿರುವ ಪ್ರಾಪರ್ಟಿಯಿಂದ ಬಂದ ಆದಾಯಕ್ಕೆ ಅಥವಾ ಬಾಡಿಗೆಗೆ ಭಾರತದ ಕಾನೂನಿನ್ವಯ ತೆರಿಗೆ ಪಾವತಿಸಬೇಕು. ಇದರೊಂದಿಗೆ ಎನ್‌ಆರ್‌ಐಯು ಹೊಂದಿರುವ ಯಾವುದೇ ಪ್ರಾಪರ್ಟಿಯನ್ನು ಭಾರತದಲ್ಲಿರುವ ಯಾವುದೇ ವ್ಯಕ್ತಿಗೆ ಮಾರಾಟ ಮಾಡಲು ಅಥವಾ ಉಡುಗೊರೆಯಾಗಿ ನೀಡಲು ಅವಕಾಶವಿದೆ. ಎನ್‌ಆರ್‌ಐಗಳಿಗೂ ಮಾರಾಟ ಮಾಡಬಹುದು ಅಥವಾ ಉಡುಗೊರೆ ನೀಡಬಹುದು.
 

Trending News