Aadhaar Card Alert: ಆಧಾರ್ ಕೇಂದ್ರಕ್ಕೆ ಸುತ್ತುವ ಅಗತ್ಯವಿಲ್ಲ, ಈ ಆನ್‌ಲೈನ್ ಸೇವೆ ಮತ್ತೆ ಪ್ರಾರಂಭ
ನವದೆಹಲಿ: ಕೋಟ್ಯಂತರ ಆಧಾರ್ ಕಾರ್ಡ್ ಬಳಕೆದಾರರಿಗೆ ಆಧಾರ್ ಕಾರ್ಡ್ ಒದಗಿಸುವ ಯುಐಡಿಎಐ ಮತ್ತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈಗ ನೀವು ಮನೆಯಿಂದಲೇ ಆಧಾರ್-ಸಂಬಂಧಿತ ಜನಸಂಖ್ಯಾ ವಿವರಗಳನ್ನು ನವೀಕರಿಸಬಹುದು. ಇದಕ್ಕಾಗಿ ಈಗ ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ. ಈ ವಿವರಗಳಲ್ಲಿ ಕಾರ್ಡ್‌ದಾರರು ತಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ಸುಲಭವಾಗಿ ನವೀಕರಿಸಲು ಸಾಧ್ಯವಾಗುತ್ತದೆ.
Uidai.gov.in/images/AadhaarHandbook2020.pdf ನಲ್ಲಿ ಆಧಾರ್ ಕೈಪಿಡಿಯ ಪಿಡಿಎಫ್ ಫೈಲ್ ಇದೆ. ಈ ಕೈಪಿಡಿಯಲ್ಲಿ ಆಧಾರ್‌ನಲ್ಲಿ ಹೆಸರನ್ನು ಬದಲಾಯಿಸುವುದರಿಂದ ಯಾವುದೇ ರೀತಿಯ ತಿದ್ದುಪಡಿಗಳನ್ನು ಸರಿಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನೀಡಲಾಗಿದೆ.
ಆಧಾರ್‌ನಲ್ಲಿ, ನೀವು ಡಾಕ್ಯುಮೆಂಟ್ ಇಲ್ಲದೆ ಇಮೇಲ್ ಐಡಿಯನ್ನು ಬದಲಾಯಿಸಬಹುದು ಅಥವಾ ಸೇರಿಸಬಹುದು. ಇದಕ್ಕಾಗಿ ಆಧಾರ್ ಸೇವಾ ಕೇಂದ್ರದಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಆನ್‌ಲೈನ್ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವ ಮೂಲಕ ನೀವು ಈ ಕೆಲಸವನ್ನು ಮಾಡಬಹುದು.
ನೀವು ನಗರವನ್ನು ಬದಲಾಯಿಸುತ್ತಿದ್ದರೆ ಅಥವಾ ಮನೆಯನ್ನು ಬದಲಾಯಿಸುತ್ತಿದ್ದರೆ, ಆಧಾರ್ ಕಾರ್ಡ್ (Aadhaar Card) ಅನ್ನು ನವೀಕರಿಸುವುದು ನಿಮಗೆ ಮುಖ್ಯವಾಗಿದೆ. ಇದಕ್ಕಾಗಿ ಮೊದಲು ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಬೇಕಾಗಿತ್ತು. ಈಗ ಈ ಸೌಲಭ್ಯವು ಆನ್‌ಲೈನ್ನಲ್ಲಿಯೂ ಲಭ್ಯವಿದೆ.
ಇದನ್ನೂ ಓದಿ: ಯಾವುದೇ ದಾಖಲೆಗಲಿಲ್ಲದೆ ಆಧಾರ್‌ನಲ್ಲಿ ಮೊಬೈಲ್ ನಂಬರ್ ನವೀಕರಿಸಲು ಇಲ್ಲಿದೆ ಸುಲಭ ವಿಧಾನ
ಯುಐಡಿಎಐ (UIDAI) ಪ್ರಕಾರ ಭಾರತದಲ್ಲಿ 1.30 ಶತಕೋಟಿಗೂ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ನೀಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಆಧಾರ್ ಕಾರ್ಡ್ ಬಳಕೆ ಹೆಚ್ಚಾಗಿದೆ. ಜನರು ತಮ್ಮ ಆಧಾರ್ ವಿವರಗಳನ್ನು ಆಗಾಗ್ಗೆ ನವೀಕರಿಸುತ್ತಿದ್ದಾರೆ ಎಂದು ಕಂಡುಬಂದಿದೆ.
ಇದನ್ನೂ ಓದಿ: Aadhaar ಮೂಲಕ ನಿಮಿಷಗಳಲ್ಲಿ ಉಚಿತವಾಗಿ ಪಡೆಯಿರಿ PAN Card
ಆಧಾರ್‌ನಲ್ಲಿ ಬಯೋಮೆಟ್ರಿಕ್ ತರಹದ ಫೋಟೋ ಬದಲಾವಣೆಗಳನ್ನು ಮಾಡಲು 100 ರೂಪಾಯಿ ತೆಗೆದುಕೊಳ್ಳುತ್ತದೆ. ಲಿಂಗವನ್ನು ಬದಲಾಯಿಸಲು ಅಥವಾ ಸರಿಪಡಿಸಲು ಯುಐಡಿಎಐ ನಿಮಗೆ ಅನುಮತಿಸುತ್ತದೆ. ಈ ಕೆಲಸವನ್ನು ಆಧಾರ್ ಸೇವಾ ಕೇಂದ್ರದಿಂದಲೂ ಮಾಡಲಾಗುವುದು.