ಆ ನಟಿ ನನ್ನನ್ನು ಕೊಲಿನಿಂದ ಹೊಡೆದು ಹಿಂಸೆಕೊಟ್ಟಳು, ನಾನು ಏನೂ ಮಾಡಿಲ್ಲ..! ನೋವು ತೋಡಿಕೊಂಡ ನಟ..

Mon, 30 Dec 2024-2:20 pm,

ಪ್ರಸಿದ್ಧ ಕಿರುತೆರೆ ನಟಿ ಶ್ವೇತಾ ತಿವಾರಿ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಶ್ವೇತಾ ಎರಡು ಬಾರಿ ವಿವಾಹವಾದರು. ಆದರೆ ಎರಡೂ ಬಾರಿ ಅವರ ಸಂಬಂಧ ಗಟ್ಟಿಯಾಗಿ ಉಳಿಯಲಿಲ್ಲ.   

ಶ್ವೇತಾ ಮೊದಲು ನಟ ರಾಜಾ ಚೌಧರಿ ಅವರನ್ನು ವಿವಾಹವಾದರು. ಅದರ ನಂತರ, ಎರಡನೇ ಬಾರಿಗೆ 2013 ರಲ್ಲಿ ಅಭಿನವ್ ಕೊಹ್ಲಿಯನ್ನು ವಿವಾಹವಾದರು. ಶ್ವೇತಾ ತನ್ನ ಇಬ್ಬರು ಗಂಡನ ಮೇಲೂ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು.   

ರಾಜಾ ಚೌಧರಿ ಅವರಿಗೆ ವಿಚ್ಛೇದನ ನೀಡಿದ ಸ್ವಲ್ಪ ಸಮಯದ ನಂತರ ಅವರು ಅಭಿನವ್ ಕೊಹ್ಲಿಯನ್ನು ವಿವಾಹವಾದರು. ಇಬ್ಬರಿಗೂ ಒಬ್ಬ ಮಗನಿದ್ದಾನೆ. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರೂ ಬೇರೆಯಾದರು. ಅಭಿನವ್ ವಿರುದ್ಧ ಶ್ವೇತಾ ಪೊಲೀಸರಿಗೂ ದೂರು ನೀಡಿದ್ದರು.   

ಶ್ವೇತಾ ಅಭಿನವ್‌ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದಳು. ನಂತರ ಅಭಿನವ್ ಈ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಶ್ವೇತಾ ವಿರುದ್ಧ ಕೆಲವು ಆಘಾತಕಾರಿ ಆರೋಪಗಳನ್ನು ಮಾಡಿದರು.. ಅಭಿನವ್‌ ಕೊಹ್ಲಿ ತಮ್ಮ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದರು..  

ಆದರೆ ಈ ಕುರಿತು ಸಂದರ್ಶನವೊಂದರಲ್ಲಿ ಅಭಿನವ್, “ನಾನು ಶ್ವೇತಾ ಮೇಲೆ ಕೈ ಎತ್ತಿಲ್ಲ.. ಎಂದಿಗೂ ಹಾಗೆ ವರ್ತಿಸಲಿಲ್ಲ, ಆದರೆ ಶ್ವೇತಾ ನನ್ನ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಿದ್ದಾರೆ. ನನ್ನ ಮೇಲಿನ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಸಾಬೀತುಪಡಿಸಲು ಆಕೆ ಹೀಗೆ ಹೇಳುತ್ತಿದ್ದಳು, ಇದರಲ್ಲಿ ಯಾವುದೇ ಸತ್ಯವಿಲ್ಲ. ನಾನು ಯಾವತ್ತೂ ಹೆಣ್ಣಿನ ಮೇಲೆ ಕೈ ಮಾಡಿಲ್ಲ ಎಂದು ಸ್ಪಷ್ಟತೆ ನೀಡಿದ್ದರು.  

ವಾಸ್ತವವಾಗಿ ಶ್ವೇತಾ ನನ್ನನ್ನು ಕೋಲಿನಿಂದ ಹೊಡೆದಳು. ನಾನು ಯಾರಿಗೂ ಹೊಡೆದಿಲ್ಲ, ಅವಳೇ ನನ್ನ ಮೇಲೆ ಕೈ ಎತ್ತಿದ್ದಳು. ನನ್ನ ಮೇಲೆ ಸುಳ್ಳು ಆರೋಪ ಮಾಡಲು ಮಗಳನ್ನು ಬಳಸಿಕೊಂಡಿದ್ದಾಳೆ. ನನ್ನ ಇಮೇಜ್ ಹಾಳು ಮಾಡಲು ಪ್ರಯತ್ನಿಸಿದಳು ಅಂತ ಅಭಿನವ್‌ ಆರೋಪಿಸಿದ್ದಾರೆ..  

ಸುಮಾರು ನಾಲ್ಕು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಶ್ವೇತಾ ಮತ್ತು ಅಭಿನವ್ 2013 ರಲ್ಲಿ ವಿವಾಹವಾದರು. ಇಬ್ಬರೂ ಮೊದಲ ಬಾರಿಗೆ 'ಜಾನೆ ಕ್ಯಾ ಬಾತ್ ಹುಯಿ' ಧಾರಾವಾಹಿಯ ಸೆಟ್‌ನಲ್ಲಿ ಭೇಟಿಯಾದರು. ಇವರಿಬ್ಬರಿಗೂ ರೆಯಾನ್ಶ್ ಎಂಬ ಮಗನಿದ್ದಾನೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link