Ayurveda - ಸದಾ ಫಿಟ್ ಆಗಿರಲು ನಿಮ್ಮ ದಿನವನ್ನು ಈ ರೀತಿ ಆರಂಭಿಸಿ

Fri, 16 Jul 2021-9:26 am,

ಆಯುರ್ವೇದದ ಪ್ರಕಾರ, ನಿತ್ಯ ಬೆಳಿಗ್ಗೆ ಬ್ರಹ್ಮ ಮುಹೂರ್ತ ಅಂದರೆ ಸೂರ್ಯೋದಯಕ್ಕೆ 2 ಗಂಟೆಗಳ ಮೊದಲು ಏಳುವುದು ಉತ್ತಮ. ಇದರಿಂದ ಶುದ್ಧ ಗಾಳಿಯ ಜೊತೆಗೆ ವ್ಯಾಯಾಮ, ಪ್ರಾಣಾಯಾಮ, ಪ್ರಾರ್ಥನೆ ಇತ್ಯಾದಿಗಳನ್ನು ಮಾಡಬಹುದು. ಹಾಗಾಗಿ ಬೆಳಿಗ್ಗೆ ಬೇಗನೆ ಏಳಲು ಪ್ರಯತ್ನಿಸಿ.

ಬೆಳಿಗ್ಗೆ ಎದ್ದ ಕೂಡಲೇ ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ. ವಿಶೇಷವಾಗಿ ಕಣ್ಣುಗಳಲ್ಲಿ ನೀರು ಸ್ಪ್ಲಾಶ್ ಮಾಡಿ. ನೀರಿನ ತಾಪಮಾನ ಸಾಮಾನ್ಯವಾಗಿರಬೇಕು ಎಂದು ನೆನಪಿಡಿ.

ಆಯುರ್ವೇದವು  (Ayurveda) ರಾತ್ರಿಯಲ್ಲಿ ಮಲಗುವ ಮೊದಲು ಮತ್ತು ಬೆಳಿಗ್ಗೆ ಎದ್ದ ನಂತರ ಶೌಚಾಲಯಕ್ಕೆ ಹೋಗಲು ಶಿಫಾರಸು ಮಾಡುತ್ತದೆ, ಇದರಿಂದಾಗಿ ಎಲ್ಲಾ ಜೀವಾಣುಗಳನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-  Exclusive: ನೀವೂ Deepika Padukone ರೀತಿ Foodie ಆಗಿದ್ದರೆ, ಈ Diet ಅನುಸರಿಸಿ

ಬೆಳಿಗ್ಗೆ ಎದ್ದ ನಂತರ ಬರೀ ಹಲ್ಲುಜ್ಜುವುದು ಸಾಕಾಗುವುದಿಲ್ಲ. ಇದಲ್ಲದೆ, ನಾಲಿಗೆ ಮತ್ತು ಒಸಡುಗಳನ್ನು ಸ್ವಚ್ಛಗೊಳಿಸುವುದು ಸಹ ಅಗತ್ಯವಾಗಿದೆ. ಪ್ರತಿದಿನ ಉಪ್ಪು ನೀರಿನಿಂದ ಗಾರ್ಗ್ಲ್ ಮಾಡಿ. 

ದೇಹವನ್ನು ಆರ್ಧ್ರಕವಾಗಿಸಲು ಕ್ರೀಮ್ ಸಾಕಾಗುವುದಿಲ್ಲ. ವಾರಕ್ಕೆ 2 ರಿಂದ 3 ಬಾರಿ ತೈಲ ಬಳಸಿ ಮಸಾಜ್ ಮಾಡಿ. ಇಡೀ ದೇಹವನ್ನು ಮಸಾಜ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಕನಿಷ್ಠ ಹೊಕ್ಕುಳು, ಪಾದದ ಅಡಿಭಾಗ, ತಲೆ, ಕಿವಿ, ಕೈ ಮತ್ತು ಮೊಣಕೈಯನ್ನು ಮಸಾಜ್ ಮಾಡಿ.

ಇದನ್ನೂ ಓದಿ- Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು

ಜಿಮ್‌ಗೆ ಹೋಗಿ ಕಠಿಣ ವ್ಯಾಯಾಮ (Exercise) ಮಾಡುವುದು ಅನಿವಾರ್ಯವಲ್ಲ. ಬೆಳಿಗ್ಗೆ ಜಾಗಿಂಗ್, ಲಘು ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ದೇಹವು ಮೃದುವಾಗಿರುತ್ತದೆ. ಯೋಗ (Yoga) ಮಾಡುವುದು ಬಹಳ ಒಳ್ಳೆಯ ಆಯ್ಕೆಯಾಗಿದೆ. ಬೆಳಿಗ್ಗೆ ವ್ಯಾಯಾಮದಲ್ಲಿ ಹೆಚ್ಚು ಶ್ರಮಿಸಬೇಡಿ, ಇಲ್ಲದಿದ್ದರೆ ನೀವು ದಿನವಿಡೀ ಸುಸ್ತಾಗಿರಬಹುದು. ಕಠಿಣ ವ್ಯಾಯಾಮಕ್ಕೆ ಸಂಜೆ ಸಮಯ ಉತ್ತಮವಾಗಿದೆ.

ಬೆಳಗಿನ ಉಪಾಹಾರ ಮತ್ತು ಸರಿಯಾದ ಉಪಹಾರವನ್ನು ಖಚಿತಪಡಿಸಿಕೊಳ್ಳಿ. ಅದರಲ್ಲಿ ಮೊಳಕೆ ಕಾಳು, ಮೊಸರು, ಹಣ್ಣುಗಳು, ರಸಗಳಂತಹ ಪೌಷ್ಠಿಕಾಂಶವನ್ನು ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link