ನಟಿ ದೀಪಿಕಾ ದಾಸ್ ಪತಿ ಯಾರು? ಇವರು ಮಾಡುವ ಕೆಲಸ, ಹೆಸರು, ಹಿನ್ನೆಲೆಯ ಸಂಪೂರ್ಣ ಪರಿಚಯ ಇಲ್ಲಿದೆ..
Deepika Das husband: ನಟಿ ದೀಪಿಕಾ ದಾಸ್ ಪತಿ ಯಾರು.. ಇವರ ಹಿನ್ನೆಲೆ ಏನು ಎಂಬ ಸಂಪೂರ್ಣ ಪರಿಚಯ ಇಲ್ಲಿದೆ..
ನಟಿ ದೀಪಿಕಾ ದಾಸ್ ಸದ್ಯ ಸುದ್ದಿಯಲ್ಲಿದ್ದಾರೆ. ದೀಪಿಕಾ ದಾಸ್ ತಾಯಿಗೆ ಅಪರಿಚಿತನೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನಟಿ ದೀಪಿಕಾ ದಾಸ್ ಮತ್ತು ಪತಿ ದೀಪಕ್ ವಿರುದ್ಧ ಅಪಪ್ರಚಾರ ಮಾಡುವುದಾಗಿ ಯಶವಂತ್ ಎಂಬಾತ ದೀಪಿಕಾ ದಾಸ್ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ದೀಪಿಕಾ ದಾಸ್ ಗೂ ಕರೆ ಮಾಡಿರುವ ಯಶವಂತ್, ಹಣ ಕೊಡಿ ಇಲ್ಲವೇ ನಿಮ್ಮ ಹೆಸರು ಬರೆದಿಟ್ಟ ಸಾಯುವುದಾಗಿ ಹೇಳಿದ್ದಾನೆ.
ಈ ಎಲ್ಲ ಬೆಳವಣಿಗೆಗಳ ನಡುವೆ ನಟಿ ದೀಪಿಕಾ ದಾಸ್ ಪತಿ ಯಾರು ಎಂಬ ಚರ್ಚೆ ನಡೆಯುತ್ತಿದೆ. ದೀಪಕ್ ಎಂಬುವವರ ಜೊತೆ ನಟಿ ದೀಪಿಕಾ ದಾಸ್ ಮದುವೆಯಾಗಿದ್ದಾರೆ.
ದೀಪಿಕಾ ದಾಸ್ ಪತಿ ದೀಪಕ್ ಗೌಡ ರಿಯಲ್ ಎಸ್ಟೇಟ್ ಮತ್ತು ಐಟಿ ಉದ್ಯಮಿಯಾಗಿದ್ದಾರೆ. ದೀಪಿಕಾ ದಾಸ್ ಮತ್ತು ದೀಪಕ್ ಪರಸ್ಪರ ಪ್ರೀತಿಸಿ ಮದುವೆಯಾದವರು.
ದೀಪಕ್ ಮತ್ತು ದೀಪಿಕಾ ದಾಸ್ ಮಾರ್ಚ್ ನಲ್ಲಿ ಮದುವೆ ಆಗಿದ್ದರು. ಗೋವಾದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವಿವಾಹ ನಡೆದಿತ್ತು.
ದೀಪಕ್ ಬೆಂಗಳೂರಿನವರಾಗಿದ್ದು, ರಿಯಲ್ ಎಸ್ಟೇಟ್ ಡೆವೆಲಪರ್ ಆಗಿದ್ದಾರೆ. ದುಬೈ, ಯುಕೆ ಅಲ್ಲಿಯೇ ಹೆಚ್ಚಾಗಿ ಇರಿತ್ತಾರೆ. ಯುಕೆ ಮತ್ತು ದುಬೈನಲ್ಲಿ ದೀಪಕ್ ಸ್ಟಾರ್ಟಪ್ ಹೊಂದಿದ್ದಾರೆ.
ದೀಪಕ್ ಅವರು ಗೌಡ, ಕನ್ನಡಿಗ, ದೇಸಿ ಹುಡುಗ ಎಂದು ದೀಪಿಕಾ ದಾಸ್ ಮದುವೆ ಸಮಯದಲ್ಲಿ ತಮ್ಮ ಪತಿಯನ್ನು ಪರಿಚಯಸಿದ್ದರು.