ಇನ್ನು 13 ದಿನಗಳಲ್ಲಿ ಬದಲಾಗುವುದು ಈ ರಾಶಿಯವರ ಅದೃಷ್ಟ!

Wed, 15 Feb 2023-10:36 am,

ಫೆಬ್ರವರಿ 27 ರಂದು, ಬುಧ ಕುಂಭ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ.  ಈಗಾಗಲೇ ಶನಿಯು ಕುಂಭ ರಾಶಿಯಲ್ಲಿದ್ದು, ಅಸ್ತಮ ಸ್ಥಿತಿಯಲ್ಲಿದ್ದಾನೆ. ಈ ಹೊತ್ತಿನಲ್ಲಿ ಬುಧನ ಪ್ರವೇಶ ಶನಿಯ ರಾಶಿಗೆ ಆಗಲಿದೆ. ಬುಧ ರಾಶಿಯ ಬದಲಾವಣೆಯು ಜನರ ವೃತ್ತಿ, ವ್ಯಾಪಾರ, ಮಾತು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. 

ವೃಷಭ ರಾಶಿ : ವೃಷಭ ರಾಶಿಯವರ ವೃತ್ತಿಗೆ ಸಂಬಂಧಿಸಿದಂತೆ ಬುಧ ಸಂಕ್ರಮಣ ಶುಭ ಫಲವನ್ನೇ ನೀಡಲಿದೆ. ಉದ್ಯೋಗದಲ್ಲಿ ದೊಡ್ಡ ಅವಕಾಶವನ್ನು ಪಡೆಯಬಹುದು. ಹೊಸ ಕೆಲಸಕ್ಕೆ ಸೇರುವ ಅವಕಾಶ ಲಭಿಸಬಹುದು. ಅಪೇಕ್ಷಿತ ವೇತನ ಮತ್ತು ಸ್ಥಾನಮಾನ ಲಭಿಸುವುದು.  ನಿಮ್ಮ ಜವಾಬ್ದಾರಿಗಳು ಮತ್ತು ಪ್ರಭಾವ ಹೆಚ್ಚಾಗುವುದು. ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆಯಾಗಲಿದೆ. 

ಸಿಂಹ ರಾಶಿ : ಸಿಂಹ ರಾಶಿಯವರಿಗೆ ಬುಧದ ರಾಶಿ ಬದಲಾವಣೆಯು ಶುಭ ಫಲಿತಾಂಶಗಳನ್ನು ನೀಡಲಿದೆ. ಇವರ ವೈವಾಹಿಕ ಜೀವನ ಮತ್ತು ಪ್ರೇಮ ಜೀವನವು ತುಂಬಾ ಚೆನ್ನಾಗಿರುತ್ತದೆ. ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ದೊಡ್ಡ ಮಟ್ಟದ  ಲಾಭವನ್ನು ಪಡೆಯಬಹುದು. ಉದ್ಯೋಗದಲ್ಲಿರುವವರು ಉತ್ತಮ ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಮಕರ ರಾಶಿ : ಶನಿಯು ಮಕರ ರಾಶಿಯ ಅಧಿಪತಿಯೂ ಆಗಿದ್ದು, ಬುಧನು ಶನಿಯ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ರೀತಿಯಾಗಿ, ಈ ಸಮಯವು ಮಕರ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಈ ರಾಶಿಯವರಿಗೆ  ಇದ್ದಕ್ಕಿದ್ದಂತೆ ಯಾವ ಮೂಲದಿಂದಾದರೂ ಹಣ ಸಿಗಬಹುದು. ಹಳೆಯ ಹೂಡಿಕೆಗಳಿಂದ ಪ್ರಯೋಜನವಾಗುವುದು. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link