Dhan Rajyog: 50 ವರ್ಷಗಳ ಬಳಿಕ 3 ರಾಶಿಗಳ ಗೋಚರ ಜಾತಕದಲ್ಲಿ `ಮಹಾಧನ ರಾಜಯೋಗ`, ಆಕಸ್ಮಿಕ ಧನಲಾಭದ ಜೊತೆಗೆ ಅಪಾರ ಉನ್ನತಿ!

Tue, 18 Apr 2023-2:24 pm,

ವೃಷಭ ರಾಶಿ: 'ಧನ ರಾಜಯೋಗ' ವೃಷಭ ರಾಶಿಯ ಜಾತಕದವರ ಪಾಲಿಗೆ ಅಪಾರ ಅನುಕೂಲಕರ ಸಿದ್ಧ ಸಾಬೀತಾಗಲಿದ್ದು, ನಿಮ್ಮ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಏಕೆಂದರೆ ನಿಮ್ಮ ಗೋಚರ ಜಾತಕದ ನವಾಂಶದ ಅಧಿಪತಿ ದಶಾಂಶ ಭಾವ ಅಂದರೆ ಕೇಂದ್ರ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಇದಲ್ಲದೆ ಏಪ್ರಿಲ್ 6 ರಂದು ಶುಕ್ರ ಕೂಡ ಲಗ್ನ ಭಾವಕ್ಕೆ ಎಂಟ್ರಿ ನೀಡಿದ್ದು, ನಿಮ್ಮ ಗೋಚರ ಜಾತಕದಲ್ಲಿ ಶಶ, ಮಾಲವ್ಯ ಹಾಗೂ ಲಕ್ಷ್ಮಿ ಯೋಗಗಳು ನಿರ್ಮಾಣಗೊಂಡಿವೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ-ಹೊಸ ಮೂಲಗಳು ಕೂಡ ನಿರ್ಮಾಣಗೊಳ್ಳಲಿವೆ. ನೌಕರ ವರ್ಗದ ಜನರಿಗೆ ಪದೋನ್ನತಿಯಾಗುವ ಸಾಧ್ಯತೆ ಇದೆ. ನೌಕರಿಯ ಹುಡುಕಾಟದಲ್ಲಿ ನಿರತರಾದವರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ.   

ಮಕರ ರಾಶಿ: ಶುಕ್ರನಿಂದ ನಿರ್ಮಾಣಗೊಂಡ ಈ ಮಹಾ ಧನ ರಾಜಯೋಗ ಮಕರ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಎಕೆಂದರೆ ನಿಮ್ಮ ಗೋಚರ ಜಾತಕದ ಅದೃಷ್ಟದ ಭಾವಕ್ಕೆ ಬುಧ ಅಧಿಪತಿಯಾಗಿದ್ದು, ಆತ ಕೇಂದ್ರ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಇದಲ್ಲದೆ ಈ ಕೇಂದ್ರ ಭಾವಕ್ಕೆ ಏಪ್ರಿಲ್ 6 ರಂದು ಶುಕ್ರನ ಎಂಟ್ರಿ ಕೂಡ ನೆರವೇರಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ ಕಾರ್ಯಗಳಲ್ಲಿ ಉನ್ನತಿ ಪ್ರಾಪ್ತಿಯಾಗಲಿದೆ. ಅದರಲ್ಲಿಯೂ ವಿಶೇಷವಾಗಿ ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಅಪಾರ ಲಾಭ ಉಂಟಾಗಲಿದೆ. ಇನ್ನೊಂದೆಡೆ ಶನಿ ಮಹಾರಾಜ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ವಿರಾಜಮಾನನಾಗಿದ್ದು. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆ ಇದೆ. ಆದರೆ, ಈ ಅವಧಿಯಲ್ಲಿ ತಾಯಿಯ ಆರೋಗ್ಯದ ಕಡೆಗೆ ಗಮನಹರಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ.  

ಕುಂಭ ರಾಶಿ: ಶುಕ್ರ ನಿರ್ಮಿಸಿರುವ ಈ ಧನರಾಜ ಯೋಗ ನಿಮ್ಮ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಭಾಗ್ಯೇಶ ಶುಕ್ರನಾಗಿದ್ದು, ಆತ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ನಿಮ್ಮ ಗೋಚರ ಜಾತಕದಲ್ಲಿ ಕೇಂದ್ರ ತ್ರಿಕೋನ ಹಾಗೂ ಮಾಲವ್ಯ ರಾಜಯೋಗಗಳು ನಿರ್ಮಾಣಗೊಂಡಿವೆ. ಜೊತೆಗೆ ಧನ ರಾಜಯೋಗ ಕೂಡ ನಿರ್ಮಾಣಗೊಂಡಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿದ್ದು. ತಾಯಿ ಲಕ್ಷ್ಮಿಯ ಅಪಾರ ಕೃಪಾದೃಷ್ಟಿ ನಿಮ್ಮ ಮೇಲಿರಲಿದೆ.  ಇದರಿಂದ ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸ-ಕಾರ್ಯಗಳಿಗೆ ಅಪಾರ ಪ್ರಶಂಸೆ ವ್ಯಕ್ತವಾಗಲಿದ್ದು, ನಿಮ್ಮ ಆತ್ಮವಿಶ್ವಾಸ ಬಲಗೊಳ್ಳಲಿದೆ. ಇದಲ್ಲದೆ ನಿಮ್ಮೊಳಗೆ ಅಡಗಿರುವ ಪ್ರತಿಭೆ ಕೂಡ ಜನರ ಮುಂದೆ ಬರಲಿದೆ.  ಈ ಅವಧಿಯಲ್ಲಿ  ನೀವು ವಿದೇಶಕ್ಕೆ ಸುತಾಡಲು ಹೋಗುವ ಪ್ಲಾನ್ ಕೂಡ ಮಾಡಬಹುದು. ಆದರೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಏಕೆಂದರೆ ಶನಿಯ ಸಾಡೇಸಾತಿ ಇನ್ನೂ ಸಂಪೂರ್ಣ ಕೊನೆಗೊಂಡಿಲ್ಲ ಎಂಬುದನ್ನು ನೆನಪಿನಲ್ಲಿಡಿ. (ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link