WhatsApp: ಅದ್ಭುತ ಹೊಸ ವೈಶಿಷ್ಟ್ಯದೊಂದಿಗೆ ವಾಟ್ಸಾಪ್, ಫೋನ್‌ಗೆ ಸಂಪರ್ಕಿಸದೆ ಕಾರ್ಯನಿರ್ವಹಿಸುತ್ತೆ ಅಪ್ಲಿಕೇಶನ್
ನಮ್ಮ ಪಾಲುದಾರ ವೆಬ್‌ಸೈಟ್ zeenews.com ಪ್ರಕಾರ, ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಹೊಸ ವೈಶಿಷ್ಟ್ಯ ಬರಲಿದೆ. ಈ ವೈಶಿಷ್ಟ್ಯದ ಆಗಮನದ ನಂತರ ಕಂಪ್ಯೂಟರ್‌ನಲ್ಲಿ ಚಾಟ್ ಮಾಡುವಾಗ ನೀವು ಅದನ್ನು ಮತ್ತೆ ಮತ್ತೆ ಮೊಬೈಲ್‌ಗೆ ಸಂಪರ್ಕಿಸುವ ಅಗತ್ಯವಿರುವುದಿಲ್ಲ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಈ ಹೊಸ ವೈಶಿಷ್ಟ್ಯಕ್ಕಾಗಿ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ವೈಶಿಷ್ಟ್ಯದ ಬೀಟಾ ಆವೃತ್ತಿ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಮಾಹಿತಿಯ ಪ್ರಕಾರ, ಬಳಕೆದಾರರು ಮೊಬೈಲ್‌ನಿಂದ ಕಂಪ್ಯೂಟರ್‌ಗೆ ವಾಟ್ಸಾಪ್‌ಗೆ (Whatsapp) ಲಾಗ್ ಇನ್ ಮಾಡಿದಾಗ ಹೊಸ ಸಾಧನವನ್ನು ಸೇರಿಸಲು ಕೇಳಲಾಗುತ್ತದೆ. ಆಗ ಒಮ್ಮೆ ಅಕ್ಸೆಪ್ಟ್ ಮಾಡಿದ ನಂತರ ಬಳಕೆದಾರರನ್ನು ಮತ್ತೆ ಮತ್ತೆ ಲಾಗಿನ್ ಮಾಡಲು ಕೇಳಲಾಗುವುದಿಲ್ಲ. ಇದರಿಂದಾಗಿ ಗ್ರಾಹಕರು ಪದೇ ಪದೇ ಲಾಗಿನ್ ಆಗುವ ತೊಂದರೆಗೆ ಸಿಲುಕುವುದಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ - WhatsAppನಲ್ಲಿ ಬರುವ ಈ ಲಿಂಕ್ ಅನ್ನು ಅಪ್ಪಿತಪ್ಪಿಯೂ ತೆರೆಯದಿರಿ, ಖಾಲಿಯಾಗುತ್ತೆ ಅಕೌಂಟ್
ಯಾವುದೇ ಹೊಸ ಸಾಧನದಿಂದ ವಾಟ್ಸಾಪ್ (WhatsApp) ಅನ್ನು ಪ್ರವೇಶಿಸಲು, ಸೆಟ್ಟಿಂಗ್‌ಗಳಲ್ಲಿ ವಿಶೇಷ ಆಯ್ಕೆಯನ್ನು ನೀಡಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ - WhatsApp: App ತೆರೆಯದೆಯೇ ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿ ಯಾರಿದ್ದಾರೆಂದು ತಿಳಿಯಲು ಇದು ಸುಲಭ ಉಪಾಯ
ವಾಟ್ಸಾಪ್‌ನಲ್ಲಿ ಬಳಕೆದಾರರಿಗೆ ಏಕಕಾಲದಲ್ಲಿ 4 ಸಾಧನಗಳನ್ನು ಸಂಪರ್ಕಿಸುವ ಆಯ್ಕೆಯನ್ನು ನೀಡಲಾಗುತ್ತದೆ ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.