WhatsApp ಮೇಲೆ Spam ಹಾಗೂ Fake ಸಂದೇಶ ತಡೆಗಟ್ಟಲು ಕೇಂದ್ರ ಸರ್ಕಾರದ ಹೊಸ ಯೋಜನೆ

WhatsAppನಲ್ಲಿ ಬರುವ ಫೇಕ್ ಹಾಗೂ ಸ್ಪ್ಯಾಮ್ ಸಂದೇಶಗಳನ್ನೂ ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ (Government Of India) ಹೊಸ ಸಿಸ್ಟಂ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. 

Written by - Nitin Tabib | Last Updated : Mar 23, 2021, 03:32 PM IST
  • Fake ಹಾಗೂ Spam ಸಂದೇಶಗಳ ಮೂಲ ಪತ್ತೆಗೆ ಕೇಂದ್ರ ಸರ್ಕಾರದ ಹೊಸ ಯೋಜನೆ
  • ಯೋಜನೆಯ ಕುರಿತು WhatsApp ಜೊತೆಗೆ ಚರ್ಚೆ.
  • ಇದರಿಂದ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಗೂ ಕೂಡ ಧಕ್ಕೆ ಬರುವುದಿಲ್ಲ.
WhatsApp ಮೇಲೆ Spam ಹಾಗೂ Fake ಸಂದೇಶ ತಡೆಗಟ್ಟಲು ಕೇಂದ್ರ ಸರ್ಕಾರದ ಹೊಸ ಯೋಜನೆ title=
Tracing The Origin Of Message On WhatsApp(File Photo)

WhatsAppನಲ್ಲಿ ಬರುವ ಫೇಕ್ ಹಾಗೂ ಸ್ಪ್ಯಾಮ್ ಸಂದೇಶಗಳನ್ನೂ ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ (Government Of India) ಹೊಸ ಸಿಸ್ಟಂ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಜನಪ್ರೀಯ ಮೆಸೇಜಿಂಗ್ ಪ್ಲಾಟ್ ಫಾರ್ಮ್ ಆಗಿರುವ ವಾಟ್ಸ್ ಆಪ್ ನ ಪ್ರತಿಯೊಂದು ಸಂದೇಶಗಳಿಗೆ ಒಂದು ಅಲ್ಫಾ ನ್ಯೂಮರಿಕ್ ಹ್ಯಾಶ್ ಅಸೈನಿಂಗ್ ಸಿಸ್ಟಂ ಆರಂಭಿಸಲು ಹೇಳಿದೆ. WhatsApp ಮೇಲೆ ಬರುವ ಸ್ಪ್ಯಾಮ್ ಮೆಸೇಜ್ ಗಳು ಬಹುಬೇಗನೆ ವೈರಲ್ ಆಗುತ್ತವೆ. ಇದೆ ಕಾರಣದಿಂದ ಸರ್ಕಾರವಾಟ್ಸ್ ಆಪ್ ನ ಮಾಧ್ಯಮದ ಮೂಲಕ ಹರಡುವ ಭ್ರಾಂತಿ ಹುಟ್ಟಿಸುವ ಸಂದೇಶಗಳಿಂದ ಜನರನ್ನು ಕಾಪಾಡುವ ಪ್ಲಾನ್ ಮಾಡಿದೆ.

ಇದನ್ನೂ ಓದಿ - ನಿಮಗೆ ಗೊತ್ತಿಲ್ಲದಂತೆ ಯಾರಾದರು ನಿಮ್ಮ whatsapp DP ನೋಡುತ್ತಿದ್ದಾರಾ ಹೀಗೆ ತಿಳಿಯಿರಿ

ದೀರ್ಘಕಾಲದಿಂದ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ವಾಟ್ಸ್ ಆಪ್ ನ ಹಿರಿಯ ಅಧಿಕಾರಿಗಳು ಸ್ಪ್ಯಾಮ್ ಸದೇಶಗಳ ಉತ್ಪತ್ತಿ ತಡೆಗಟ್ಟುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಆದರೆ, ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಕಾರಣದಿಂದ ಫೇಸ್ ಬುಕ್ ಮಾಲೀಕತ್ವದ ಈ ಪ್ಲಾಟ್ಫಾರ್ಮ್ ಗೆ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕುರಿತು ವಾಟ್ಸ್ ಆಪ್ ಹೇಳುವುದನ್ನು ನಂಬುವುದಾದರೆ, ವಾಟ್ಸ್ ಆಪ್ ನಲ್ಲಿ ಬರುವ ಪ್ರತಿ ಸಂದೇಶಗಳು ಎನ್ಕ್ರಿಪ್ಟ್ ಆಗಿರುತ್ತವೆ. ಒಂದು ವೇಳೆ ಯಾವುದೇ ಒಂದು ಸಂದೇಶದ ಮೂಲ ಪತ್ತೆಹಚ್ಚಲು (Tracing Origin Of Message) ಹೋದರೆ, ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಗೆ ಧಕ್ಕೆ ಉಂಟಾಗಲಿದೆ. ಆಂಗ್ಲ ಮಾಧ್ಯಮದಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಇದೀಗ ಭಾರತ ಸರ್ಕಾರ ಇದಕ್ಕಾಗಿ ಪರ್ಯಾಯ ಮಾರ್ಗ ಸೂಚಿಸಿದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಈ ಪರ್ಯಾಯ ಮಾರ್ಗದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಇದನ್ನೂ ಓದಿ-ಒಮ್ಮೆಗೆ ಡೌನ್ ಆದ Facebook, WhatsApp, Instagram- ಟ್ವಿಟರ್‌ನಲ್ಲಿ ಮೈಮ್‌ಗಳ ಪ್ರವಾಹ

ಈ ರೀತಿ ಕಾರ್ಯನಿರ್ವಹಿಸಲಿದೆ ಈ ಹೊಸ ಸಿಸ್ಟಂ
ಒಂದು ನೂತನ ಸಿಸ್ಟಂ ಜಾರಿಗೆ ತರುವ ಪ್ರಸ್ತಾವನೆಯೊಂದನ್ನು ಭಾರತ ಸರ್ಕಾರ WhatsAppಗೆ ನೀಡಿದ್ದು,  ಈ ಮಾಧ್ಯಮದ ಮೂಲಕ ಎಂಡ್ ಟು ಎಂಡ್ ಎನ್ಕ್ರಿಪ್ಶೇನ್ ಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸಂದೇಶದ ಮೂಲ ಪತ್ತೆ ಹಚ್ಚಬಹುದಾಗಿದೆ. ಈ ನೂತನ ಸಿಸ್ಟಂ ಅನ್ನು 'ಅಲ್ಫಾ ನ್ಯೂಮರಿಕ್ ಹ್ಯಾಶ್' (Alpha Numaric Hash To Messages) ಎಂದು ಎಸರಿಸಲಾಗಿದೆ. ಈ ಸಿಸ್ಟಂ ಆಧಾರದ ಮೇಲೆ ಸರ್ಕಾರ ವಾಟ್ಸ್ ಆಪ್ ಗೆ ತನ್ನ ಪ್ಲಾಟ್ ಫಾರ್ಮ್ ಮೇಲೆ ಪ್ರಕಟವಾಗುವ ಪ್ರತಿಯೊಂದು ಸಂದೇಶಗಳಿಗೆ ಒಂದು ಯುನಿಕ್ ಅಲ್ಫಾ ನ್ಯೂಮರಿಕ್ ಹ್ಯಾಶ್ ನಂಬರ್ ಜನರೆತ್ ಮಾಡಲು ಕೋರಿದೆ. ಒಂದು ವೇಳೆ ವಾಟ್ಸ್ ಆಪ್ ಈ ಸಿಸ್ಟಂ ಅನ್ನು ಅಳವಡಿಸಿಕೊಂಡರೆ, ಪ್ಲಾಟ್ ಫಾರ್ಮ್ ನಲ್ಲಿ ಪ್ರಕಟವಾಗುವ ಪ್ರತಿಯೊಂದು ಸಂದೇಶ A ಟು Z ಹಾಗೂ 0-9 ಸಂಖ್ಯೆಗಳ ಒಂದು ಕೋಡ್ ನೊಂದಿಗೆ ಬರಲಿವೆ. ಇದರಿಂದ ಯಾವುದೇ ಒಂದು ಸಂದೇಶವನ್ನು ಮೂಲತಃ ಯಾರು ಕಳುಹಿಸಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದಾಗಿದೆ ಎಂದು ಸರ್ಕಾರ ಹೇಳಿದೆ. ಅಷ್ಟೇ ಅಲ್ಲ ಇದರಿಂದ ವಾಟ್ಸ್ ಆಪ್ ನ ಎನ್ಕ್ರಿಪ್ಶನ್ ತಂತ್ರಜ್ಞಾನಕ್ಕೂ ಕೂಡ ಇದರಿಂದ ಧಕ್ಕೆ ಉಂಟಾಗುವುದಿಲ್ಲ ಎಂದು ಸರ್ಕಾರ ಮನವರಿಕೆ ಮಾಡಿಕೊಟ್ಟಿದೆ.

ಇದನ್ನೂ ಓದಿ-ಜಾಗತಿಕವಾಗಿ ಸ್ಥಗಿತಗೊಂಡ WhatsApp ಮತ್ತು Instagram

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News