IND vs PAK Players Fight : IND vs PAK ಮ್ಯಾಚ್ ವೇಳೆ ಮೈದಾನದಲ್ಲಿ ಜಗಳ ಮಾಡಿಕೊಂಡ ಆಟಗಾರರ ಲಿಸ್ಟ್ ಇಲ್ಲಿದೆ!
2012ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಈ ಪ್ರವಾಸದ ವೇಳೆ, ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಪಾಕಿಸ್ತಾನಿ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ನಡುವೆ ನಡೆದ ಜಗಳ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಪಂದ್ಯದಲ್ಲಿ ಇಬ್ಬರು ಆಟಗಾರರ ಜಗಳ ನೋಡಿದ ಐಸಿಸಿ ಇಬ್ಬರಿಗೂ ದಂಡ ವಿಧಿಸಿತ್ತು.
ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಆಟಗಾರರನ್ನು ಪ್ರಚೋದನಕ್ಕೆ ಹೆಸರುವಾಸಿ. 2010 ರಲ್ಲಿ, ಶೋಯೆಬ್ ಅಖ್ತರ್ ಹರ್ಭಜನ್ ಸಿಂಗ್ ಅವರೊಂದಿಗೆ ಇದೇ ರೀತಿ ಜಗಳ ಮಾಡಿಕೊಂಡಿದ್ದರು, ನಂತರ ಇಬ್ಬರ ನಡುವೆ ತೀವ್ರ ಚರ್ಚೆ ನಡೆಯಿತು. ಈ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾಗೆ ಜಯ ತಂದುಕೊಟ್ಟಿದ್ದರು.
2007ರಲ್ಲಿ ಶಾಹಿದ್ ಅಫ್ರಿದಿ ಅವರು ಗೌತಮ್ ಗಂಭೀರ್ ಅವರೊಂದಿಗೆ ಮೈದಾನದಲ್ಲಿ ಜಗಳವಾಡಿದ್ದರು. ಈ ಪಂದ್ಯದಲ್ಲಿ ಗೌತಮ್ ಗಂಭೀರ್ ರನ್ ತೆಗೆದುಕೊಳ್ಳುವಾಗ ಶಾಹಿದ್ ಅಫ್ರಿದಿಗೆ ಡಿಕ್ಕಿ ಹೊಡೆದರು. ಈ ಘಟನೆಯ ನಂತರ, ಇಬ್ಬರೂ ಆಟಗಾರರು ತಮ್ಮ ತಾಳ್ಮೆ ಕಳೆದುಕೊಂಡರು, ಇದು ಅಭಿಮಾನಿಗಳಿಗೆ ತೀವ್ರ ಮುಜುಗರ ಉಂಟು ಮಾಡಿತ್ತು.
2005 ರಲ್ಲಿ, ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಎಂಎಸ್ ಧೋನಿ ಮತ್ತು ಶಾಹಿದ್ ಅಫ್ರಿದಿ ನಡುವೆ ಜಗಳವಾಗಿತ್ತು. ಈ ಪಂದ್ಯದಲ್ಲಿ ಧೋನಿ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದು, ಶಾಹಿದ್ ಅಫ್ರಿದಿ ಕೋಪದಲ್ಲಿ ಏನೋ ಹೇಳಿದ್ದನ್ನ ನೋಡಿದರು. ಈ ಘಟನೆಯ ನಂತರ ಧೋನಿ ತಮ್ಮ ವೇಗದ ಬ್ಯಾಟಿಂಗ್ ಮೂಲಕ ಅಫ್ರಿದಿಗೆ ಉತ್ತರಿಸಿದರು.
1996 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ವಿಶ್ವಕಪ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತದ ವೆಂಕಟೇಶ್ ಪ್ರಸಾದ್ ಹಾಗೂ ಪಾಕಿಸ್ತಾನದ ಅಮೀರ್ ಸೊಹೈಲ್ ನಡುವೆ ಬಿಸಿ ಬಿಸಿ ವಾತಾವರಣ ಕಂಡು ಬಂತು. ಈ ಪಂದ್ಯದಲ್ಲಿ ಅಮೀರ್ ಸೊಹೈಲ್ ಈ ಹಿಂದೆ ವೆಂಕಟೇಶ್ ಪ್ರಸಾದ್ ಅವರ ಎಸೆತದಲ್ಲಿ ಬೌಂಡರಿ ಬಾರಿಸಿದ್ದರು, ಆದರೆ ವೆಂಕಟೇಶ್ ಪ್ರಸಾದ್ ಮುಂದಿನ ಎಸೆತದಲ್ಲಿ ಅವರನ್ನು ಔಟ್ ಮಾಡುವ ಮೂಲಕ ಅದ್ಭುತ ಸಂಭ್ರಮವನ್ನು ಸೃಷ್ಟಿಸಿದರು.