Astro Tips: ಸ್ನಾನ ಮಾಡುವ ನೀರಿನಲ್ಲಿ ಈ 1 ಪದಾರ್ಥವನ್ನು ಮಿಕ್ಸ್ ಮಾಡಿದರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ

Tue, 28 Sep 2021-10:53 am,

ನಿತ್ಯ ಬೆಳಿಗ್ಗೆ ನೀವು ಸ್ನಾನ ಮಾಡುವ ನೀರಿನಲ್ಲಿ ಬೆಲ್ಲ (Jaggery), ಅರಿಶಿನ (Turmeric), ಜೇನುತುಪ್ಪ (Honey), ಸಕ್ಕರೆ (Sugar), ಉಪ್ಪು (Salt) ಅಥವಾ ಯಾವುದಾದರೂ ಹಳದಿ ಹೂವುಗಳನ್ನು ಬೆರೆಸಿ ನಂತರ ಸ್ನಾನ ಮಾಡಿ. ಇದನ್ನು ಮಾಡುವುದರಿಂದ, ಗೌರವವನ್ನು ಪಡೆಯುವ ಬಯಕೆ ಶೀಘ್ರದಲ್ಲೇ ಈಡೇರುತ್ತದೆ ಎಂಬ ನಂಬಿಕೆ ಇದೆ.  

ಬೆಳಿಗ್ಗೆ ಸ್ನಾನ ಮಾಡಿದ ನಂತರ, ತಾಮ್ರದ ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಒಂದು ಚಿಟಿಕೆ ರೋಲಿಯನ್ನು ಹಾಕಿ ಮತ್ತು ಸೂರ್ಯನಿಗೆ (Surya Dev) ಅರ್ಘ್ಯವನ್ನು ಅರ್ಪಿಸಿ. ನಿತ್ಯ ಈ ರೀತಿ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ (Animals and birds removes many problems). ಮತ್ತೊಂದೆಡೆ, ಪ್ರತಿನಿತ್ಯ ಪಕ್ಷಿಗಳಿಗೆ ಆಹಾರ ನೀಡುವ ಮೂಲಕ, ನೀವು ಸಮಾಜದಲ್ಲಿ ಗೌರವವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Astrology: ತುಂಬಾ ಬುದ್ಧಿವಂತರಂತೆ ಈ 5 ರಾಶಿಯ ಜನ, ಈ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆಯೇ

ಸಮಾಜದಲ್ಲಿ ಗೌರವ ಪಡೆಯುವ ಬಯಕೆ ನಿಮಗೂ ಇದ್ದರೆ ಪ್ರತಿ ದಿನ ದುರ್ಗಾ ಸಪ್ತಶತಿಯ (Durga Saaptashati) ಹನ್ನೆರಡನೆಯ ಅಧ್ಯಾಯವನ್ನು ತಪ್ಪದೆ ಓದಿ.  ಈ ಪಠ್ಯವನ್ನು ನಿತ್ಯ ಓದುವುದರಿಂದ  ಖ್ಯಾತಿಯನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ- Astrology: ಈ 4 ರಾಶಿಚಕ್ರದ ಜನರು ಜನ್ಮತಃ ಅದೃಷ್ಟವಂತರು, ಇವರು ಇತರರಿಗೆ ಸಹಾಯ ಮಾಡುವಲ್ಲಿಯೂ ಹಿಂದೆ ಸರಿಯುವುದಿಲ್ಲ

ರಾತ್ರಿ ಮಲಗುವಾಗ, ನೀರಿನಿಂದ ತುಂಬಿದ ಪಾತ್ರೆಯನ್ನು ನಿಮ್ಮ ತಲೆಯ ಬಳಿ ಇರಿಸಿ. ಬೆಳಿಗ್ಗೆ ಎದ್ದ ನಂತರ ಆ ನೀರನ್ನು ಮನೆಯ ಮುಂದೆ ಸುರಿಯಿರಿ. ಇದನ್ನು ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಈ ಕಾರಣದಿಂದಾಗಿ ವ್ಯಕ್ತಿಯು ದುಃಸ್ವಪ್ನಗಳಿಂದ ಪರಿಹಾರ ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಅದೇ ಸಮಯದಲ್ಲಿ, ಪ್ರತಿಷ್ಠೆಯು ಹೆಚ್ಚಾಗುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link