Navratri 2021: ನವರಾತ್ರಿ ಆರಂಭಕ್ಕೆ ದಿನಗಣನೆ ಆರಂಭ, ಘಟಸ್ಥಾಪನೆಯ ಮುಹೂರ್ತ ಮತ್ತು ವಿಧಿಗಳ ವಿವರ ಇಲ್ಲಿದೆ

Navratri 2021 - ಶಕ್ತಿದೇವಿಯ ಆರಾಧನೆಯ ಹಬ್ಬ ಅಂದರೆ ನವರಾತ್ರಿ ಅಕ್ಟೋಬರ್ 7, 2021 ಗುರುವಾರದಿಂದ ಆರಂಭವಾಗುತ್ತಿದೆ. ಈ ದಿನ ಘಟಸ್ಥಾಪನೆಗೆ ಒಟ್ಟು 2 ಶುಭ ಮುಹೂರ್ತಗಳಿವೆ.

Written by - Nitin Tabib | Last Updated : Sep 27, 2021, 04:11 PM IST
  • ಈ ಬಾರಿ ಅಕ್ಟೋಬರ್ 7ರಂದು ನವರಾತ್ರಿ ಉತ್ಸವ ಆರಂಭಗೊಳ್ಳುತ್ತಿದೆ.
  • ಮನೆ ಮನೆಗಳಲ್ಲಿ ಘಟಸ್ಥಾಪನೆ ಮಾಡಲಾಗುವುದು.
  • ಈ ಬಾರಿ ದೇವಿ ದುರ್ಗೆ ಪಲ್ಲಕ್ಕಿಯಲ್ಲಿ ಸವಾರಿಯಾಗಿ ಬರುತ್ತಿದ್ದಾಳೆ.
Navratri 2021: ನವರಾತ್ರಿ ಆರಂಭಕ್ಕೆ ದಿನಗಣನೆ ಆರಂಭ, ಘಟಸ್ಥಾಪನೆಯ ಮುಹೂರ್ತ ಮತ್ತು ವಿಧಿಗಳ ವಿವರ ಇಲ್ಲಿದೆ title=
Ashwin Navratri 2021 (File Photo)

ನವದೆಹಲಿ: Ghatasthapana - ಶಕ್ತಿಯ ಆರಾಧನೆಯ ಹಬ್ಬವಾದ ನವರಾತ್ರಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ವರ್ಷದಲ್ಲಿ 4 ಬಾರಿ ನವರಾತ್ರಿ ಬಂದರೂ, ಈ ಹಬ್ಬದ ಅತಿ ದೊಡ್ಡ ಆಚರಣೆಯನ್ನು ಅಶ್ವಿನ್ ತಿಂಗಳ ನವರಾತ್ರಿಯಲ್ಲಿ ಆಚರಿಸಲಾಗುತ್ತದೆ.  ಏಕೆಂದರೆ ಈ ಹಬ್ಬದಲ್ಲಿ ಶಕ್ತಿಯ ಪೂಜೆಯಾ ಜೊತೆಗೆ ಹಬ್ಬವನ್ನು ಕೂಡ ಆಚರಿಸಲಾಗುತ್ತದೆ. ಈ ವೇಳೆ ಶಕ್ತಿ ದೇವಿಯ ವಿಗ್ರಹವನ್ನು ಸ್ಥಾಪಿಸಿ, ಭವ್ಯವಾದ  ಅಲಂಕಾರ ಮಾಡಲಾಗುತ್ತದೆ ನಂತರ ದಸರಾ ಹಬ್ಬದ ದಿನ ದುರ್ಗಾ ದೇವಿಯ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಇದರೊಂದಿಗೆ, ಮುಂದಿನ ವರ್ಷದ ತಾಯಿಯ ಆಗಮನಕ್ಕೂ ಕೂಡ ನಿರೀಕ್ಷೆ ಆರಂಭಗೊಳ್ಳುತ್ತದೆ.

ಈ ಬಾರಿಯ ಘಟಸ್ಥಾಪನೆಯ ಮುಹೂರ್ತ(Ghatasthapana Muhurat)
ಈ ವರ್ಷ ನವರಾತ್ರಿಯು (Ashwin Navratri 2021) 7 ನೇ ಅಕ್ಟೋಬರ್ 2021 ರಿಂದ ಆರಂಭವಾಗುತ್ತಿದೆ, ಇದು 15 ನೇ ಅಕ್ಟೋಬರ್ (Ashwin Navratri 2021 Date) ವರೆಗೆ ಇರಲಿದೆ. ಚೈತ್ರ ನವರಾತ್ರಿಯಂತೆ, ಅಶ್ವಿನ್ ಮಾಸದ ನವರಾತ್ರಿಯಂದು ಪ್ರತಿ ಮನೆಯಲ್ಲೂ ಘಟ ಸ್ಥಾಪನೆ ನಡೆಸಲಾಗುತ್ತದೆ. ಈ ವರ್ಷ, ಘಟ್ ಸ್ಥಾಪನೆಗೆ ಶುಭ ಸಮಯ ಬೆಳಗ್ಗೆ 06:17 ರಿಂದ 10:11 ರವರೆಗೆ ಇರಲಿದೆ. ಇದೇ ವೇಳೆ ಅಭಿಜಿತ್ ಮುಹೂರ್ತವು 11:46 ರಿಂದ 12:32 ರವರೆಗೆ ಇರಲಿದೆ. ಈ ಒಂಬತ್ತು ದಿನಗಳಲ್ಲಿ ಉಪವಾಸವನ್ನು ಆಚರಿಸುವವರಿಗೆ, ಪಾರಾಯಣದ ಮುಹೂರ್ತ 15 ಅಕ್ಟೋಬರ್ 15 ರ ಸಂಜೆ 06:22 ರ ನಂತರ ಇರಲಿದೆ. 

ಈ ಬಾರಿ ಪಲ್ಲಕ್ಕಿಯಲ್ಲಿ ಬರುತ್ತಿದ್ದಾಳೆ ದೇವಿ ದುರ್ಗೆ
ನವರಾತ್ರಿಯ 9 ದಿನಗಳನ್ನು ದೇವಿಯ 9 ರೂಪಗಳಿಗೆ ಸಮರ್ಪಿಸಲಾಗಿದೆ. ಪ್ರತಿ ದಿನವನ್ನು  ಒಂದು ರೂಪಕ್ಕೆ ಮೀಸಲಿರಿಸಲಾಗಿದೆ. ಈ ವರ್ಷ ನವರಾತ್ರಿಯಂದು, ಮಾತೃ ದೇವಿಯು ಪಲ್ಲಕ್ಕಿಯಲ್ಲಿ  ಸವಾರಿ ಮಾಡಲಿದ್ದಾಳೆ. ತಾಯಿಯು ಪಲ್ಲಕ್ಕಿಯಲ್ಲಿ ಸವಾರಿ ಮಾಡುವುದು ಬಹಳ ಶುಭ ಎಂದು ಹೇಳಲಾಗುತ್ತದೆ. ನವರಾತ್ರಿ ಗುರುವಾರ ಅಥವಾ ಶುಕ್ರವಾರ ಆರಂಭವಾದಾಗ, ತಾಯಿ ಪಲ್ಲಕ್ಕಿಯಲ್ಲಿ ಸವಾರಿ ಮಾಡುತ್ತಾಳೆ.  ಈ ವರ್ಷದ ಅಶ್ವಿನ್ ತಿಂಗಳ ನವರಾತ್ರಿಯು ಗುರುವಾರದಿಂದ ಆರಂಭವಾಗುತ್ತಿದೆ.

ಇದನ್ನೂ ಓದಿ-ಮನೆಯಲ್ಲಿ ತುಳಸಿ ಇದ್ದರೆ ಸಾಲದು, ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ

ಈ ರೀತಿ ಘಟಸ್ಥಾಪನೆ ಮಾಡಿ
ಘಟಸ್ಥಾಪನೆಗಾಗಿ ಮಣ್ಣಿನ ಮಡಿಕೆಯಲ್ಲಿ ಏಳು ರೀತಿಯ ಧಾನ್ಯಗಳನ್ನು ಇರಿಸಿ. ನಂತರ ಕಲಶದಲ್ಲಿ ನೀರನ್ನು ತುಂಬಿ ಅದನ್ನು ಮಣ್ಣಿನ ಮಡಿಕೆಯ ಮೇಲಿಡಿ. ಇದಾದ ಬಳಿಕ ಕಳಶದ ಮೇಲೆ ಎಲೆ ಹಾಗೂ ತೆಂಗಿನ ಕಾಯಿಯನ್ನಿರಿಸಿ ಅದನ್ನು ಕೆಂಪು ವಸ್ತ್ರದಿಂದ ಕಟ್ಟಿ. ನಂತರ ಶ್ರೀಗಣೇಶನಿಗೆ ಪೂಜೆ ಸಲ್ಲಿಸಿ ಹಾಗೂ ದೇವಿ ದುರ್ಗೆಗೆ ಆಮಂತ್ರಣ ನೀಡಿ.

ಇದನ್ನೂ ಓದಿ-Vakri Budh: ಇಂದಿನಿಂದ ಈ ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್, ಸಿಗಲಿದೆ ಬುಧನ ಆಶೀರ್ವಾದ

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ.. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ನುರಿತ ತಜ್ಞರ ಸಲಹೆ ಪಡೆದುಕೊಳ್ಳಿ )

ಇದನ್ನೂ ಓದಿ-Vastu Tips:ಅಪ್ಪಿತಪ್ಪಿಯೂ ಕೂಡ ಈ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಡಿ, ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News