ಮಹಿಳೆಯ ದೇಹದ ಈ ಭಾಗ ಅಗಲವಾಗಿ ದುಂಡಾಗಿದ್ದರೆ ಅವರಷ್ಟು ಲಕ್ಕಿ ಮತ್ತೊಬ್ಬರಿಲ್ಲ..!
ನಾವಿಂದು ಈ ವರದಿಯಲ್ಲಿ ಮುಖಚರ್ಯೆ ಮತ್ತು ದೇಹದ ಕೆಲವು ಅಂಗಗಳ ಬಗ್ಗೆ ಫೆಂಗ್ ಶೂಯಿ ಹೇಳುವ ಜ್ಯೋತಿಷ್ಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಣೆ: ಫೆಂಗ್ ಶೂಯಿ ಜ್ಯೋತಿಷ್ಯ ಪ್ರಕಾರ ಹಣೆಯನ್ನು ಮುಖದ ಸಮೃದ್ಧಿ ಪರ್ವತ ಎಂದು ಹೇಳಲಾಗುತ್ತದೆ. ಈ ಭಾಗವು ಅಗಲವಾಗಿ ದುಂಡು ದುಂಡಾಗಿದ್ದರೆ ಅವರಷ್ಟು ಅದೃಷ್ಟವಂತರು ಮತ್ಯಾರೂ ಇರಲ್ಲ. ಅಷ್ಟೇ ಅಲ್ಲದೆ, ಹಣೆಯು ಅಗಲವಾಗಿದ್ದರೆ ಅದು ಅದೃಷ್ಟ, ಶಕ್ತಿ ಹಾಗೂ ಸಂಪತ್ತಿನ ಸೂಚಕ.
ಕಣ್ಣು: ಯಾವುದೇ ಒಬ್ಬ ವ್ಯಕ್ತಿಯ ಕಣ್ಣುಗಳು ಪ್ರಕಾಶಮಾನವಾಗಿದ್ದರೆ, ಅವರು ಬಹಳಷ್ಟು ಲಕ್ಕಿ ಎಂದು ಹೇಳುತ್ತದೆ ಫೆಂಗ್ ಶೂಯಿ ಭವಿಷ್ಯ. ಇದು ಸಮೃದ್ಧಿಯ ಸೂಚಕವೂ ಹೌದು.
ಮೂಗು: ದುಂಡಾಗಿರುವ ಮೂಗು ಹೊಂದಿರುವ ಜನರು ಸಂಪತ್ತು ಮತ್ತು ಅದೃಷ್ಟವನ್ನು ಪಡೆಯುತ್ತಾರೆ ಎಂದು ಫೆಂಗ್ ಶೂಯಿ ಹೇಳುತ್ತದೆ. ಈ ರೀತಿಯ ಮೂಗಿನ ಆಕಾರ ಹೊಂದಿರುವ ಜನರ ಜೀವನದಲ್ಲಿ ಅಭಿವೃದ್ಧಿ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ.
ತುಟಿ: ಫೆಂಗ್ ಶೂಯಿ ಭವಿಷ್ಯದ ಪ್ರಕಾರ ತುಟಿಯನ್ನು ಮುಖದ ಮೇಲಿನ ನದಿ ಎಂದು ಪರಿಗಣಿಸಲಾಗುತ್ತದೆ. ತುಟಿಗಳು ಒಣಗಿದರೆ ಅಥವಾ ಬಿರುಕು ಬಿಟ್ಟರೆ ʼನದಿʼ ಒಣಗುವುದನ್ನು ಸೂಚಿಸುತ್ತದೆ. ನದಿ ಒಣಗಿದರೆ, ಸಂಪತ್ತು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.