ಈ ಒಂದು ಪುಡಿ ಸಾಕು ಹಲ್ಲುಗಳಲ್ಲಿ ಅಂಟಿ ಕುಳಿತಿರುವ ಹಳದಿ ಕಲೆ ತೆಗೆಯಲು !ಬಾಯಿ ದುರ್ವಾಸನೆಯಿಂದಲೂ ಸಿಗುವುದು ಮುಕ್ತಿ
ಹಳದಿ ಹಲ್ಲುಗಳನ್ನು ಬಿಳುಪುಗೊಳಿಸುವ ಪರಿಣಾಮಕಾರಿ ಮನೆಮದ್ದು ಒಂದಿದೆ. ಇದಕ್ಕಾಗಿ ದೊಡ ಮಟ್ಟದ ಖರ್ಚು ಮಾಡುವ ಅಗತ್ಯವಿಲ್ಲ.ನಿತ್ಯ ಮಸಾಲೆಯಾಗಿ ಬಳಸುವ ಈ ಪದಾರ್ಥದಿಂದ ಹಳದಿ ಹಲ್ಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.
ನಾವಿಲ್ಲಿ ಹೇಳುತ್ತಿರುವುದು ಅರಿಶಿನದ ಬಗ್ಗೆ.ಅರಿಶಿನವು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ.ಇದು ಪ್ಲೇಕ್-ನಿಯಂತ್ರಿಸುವ ಗುಣಲಕ್ಷಣಗಳನ್ನು ಹೊಂದಿದೆ.ಇದು ಹಲ್ಲುಗಳಲ್ಲಿ ಕಚ್ಚಿ ಕುಳಿತಿರುವ ಹಳದಿ ಪದರವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು,ಅರಿಶಿನವನ್ನು ಹಾಗೆಯೇ ತೆಗೆದುಕೊಂಡು ಅದನ್ನು ಬ್ರಷ್ ಮೇಲೆ ಹಾಕಿ ಹಲ್ಲುಜ್ಜಲು ಆರಂಭಿಸಿ.ಅರಿಶಿನವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಸಾಮಾನ್ಯ ಪೇಸ್ಟ್‌ನಂತೆ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ.
ತೆಂಗಿನ ಎಣ್ಣೆಯೊಂದಿಗೆ ಅರಿಶಿನವನ್ನು ಬೆರೆಸಿ ಹಲ್ಲುಗಳನ್ನು ಸ್ವಚ್ಛಗೊಳಿಸಬಹುದು.ಈ ಮೂಲಕ ಹಲ್ಲಿನ ಹಳದಿ ಕಲೆಗಳನ್ನು ತೆಗೆದು ಹಾಕುವುದು ಸಾಧ್ಯವಾಗುವುದಲ್ಲದೆ,ಬಾಯಿಯ ದುರ್ವಾಸನೆಯನ್ನು ಕೂಡಾ ಕಡಿಮೆ ಮಾಡಬಹುದು.
ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು,ಉಪ್ಪು ಮತ್ತು ಅರಿಶಿನ ಮಿಶ್ರಣವನ್ನು ಬಳಸಬಹುದು.ಉಪ್ಪು ಮತ್ತು ಅರಿಶಿನವನ್ನು ಒಟ್ಟಿಗೆ ಬಳಸಿದರೆ ಅದು ಹಲ್ಲುಗಳ ಮೇಲೆ ತ್ವರಿತ ಪರಿಣಾಮ ಬೀರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ