ಭಾರತದಲ್ಲಿ 10 ಲಕ್ಷ ರೂ. ಒಳಗಿನ ಉತ್ತಮ ಆಟೋಮ್ಯಾಟಿಕ್ ಕಾರುಗಳು
ಮಾರುತಿ ಸುಜುಕಿ ಡಿಸೈರ್ : ಡಿಜೈರ್ ಟೂರ್ ಎಸ್ ಸಿಎನ್‌ಜಿ ಕಾರುಗಳು ವಿಶೇಷವಾಗಿ ಯೆಲ್ಲೊ ಬೋರ್ಡ್ ಬಳಕೆಯ ಗ್ರಾಹಕರಿಗಾಗಿ ಸಿದ್ದವಾಗಿದ್ದು, ಪ್ರತಿಗಂಟೆಗೆ 80 ಕಿ.ಮೀ ಸ್ಪೀಡ್ ಗರ್ವನರ್ ಅಳವಡಿಕೆಯನ್ನು ಹೊಂದಿರಲಿವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ 2ನೇ ತಲೆಮಾರಿನ ಡಿಜೈರ್ ಟೂರ್ ಎಸ್ ಕಾರ್‌ಗಿಂತಲೂ ಸಿಎನ್‌ಜಿ ಆವೃತ್ತಿಯು ಭಾರೀ ಬದಲಾವಣೆ ಹೊಂದಿದ್ದು, 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯ ಕೂಡಾ ಲಭ್ಯವಿರಲಿದೆ.
ಮಾರುತಿ ಸುಜುಕಿ ಬಲೆನೋ : ಸಖತ್ ಸ್ಟೈಲಿಶ್ ಆಗಿ ಉತ್ತಮ ವಿಶೇಷತೆಗಳೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿರುವ ಬಲೆನೊ ಆವೃತ್ತಿಯು, 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಎರಡೂ (ಪೆಟ್ರೋಲ್ ಮಾದರಿಯ ಸಿವಿಟಿ ಗೇರ್ಬಾಕ್ಸ್) ಆಯ್ಕೆಯಲ್ಲಿ ಬಲೆನೋ ದೊರೆಯಲಿದೆ. ಮಾರುತಿ ಬಲೆನೋ ಎಲ್ಲಾ ಮಾದರಿಗಳಲ್ಲಿ ಮುಂಭಾಗದಲ್ಲಿರುವ ಡ್ಯುಯಲ್ ಏರ್ ಬ್ಯಾಗ್ಗಳು ಹೆಚ್ಚು ಸ್ಟ್ಯಾಂಡರ್ಡ್ ಆಗಿವೆ.
ರೆನಾಲ್ಟ್ ಕ್ವಿಡ್ : ಹ್ಯಾಚ್ ಬ್ಯಾಕ್ ಆವೃತ್ತಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಕಾರುಗಳಲ್ಲಿ ರೆನಾಲ್ಟ್ ಕ್ವಿಡ್ ಕೂಡಾ ಒಂದು. ಈ ಕಾರಿನಲ್ಲಿ ಆಯ್ಕೆ ರೂಪದಲ್ಲಿ 5-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆವೃತ್ತಿಯನ್ನು ಆಯ್ಕೆ ಮಾಡಬಹುದು. ಇದರಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದ್ದು, ಕಡಿಮೆ ಬೆಲೆಗಳಲ್ಲಿ ಬೆಸ್ಟ್ ಹ್ಯಾಚ್ ಬ್ಯಾಕ್ ಖರೀದಿಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.
ಮಾರುತಿ ಸುಜುಕಿ ಆಲ್ಟೊ K10 : ಎಎಂಟಿ ಗೇರ್ ಬಾಕ್ಸ್ ಹೊಂದಿರುವ ಮಾರುತಿ ಆಲ್ಟೊ ಕೆ10 ದೇಶದಲ್ಲಿಯೇ ಅತ್ಯುತ್ತಮವಾದ ಸ್ವಯಂಚಾಲಿತ ಕಾರುಗಲಲ್ಲಿ ಒಂದಾಗಿದ್ದು, ಕೈಗೆಟುಕುವ ಬೆಲೆಯೊಂದಿಗೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಟಾಟಾ ಮೋಟಾರ್ಸ್ Tiago : ಟಾಟಾ Tiago ಹ್ಯಾಚ್ ಬ್ಯಾಕ್ಕ್ನಲ್ಲಿ ಸ್ವಯಂಚಾಲಿತ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ಗಳಿಗೆ AMT ಗೇರ್ ಬಾಕ್ಸ್ ಅನ್ನು ಒದಗಿದೆ. ಟಿಯಾಗೋವು 8 ಜೆಬಿಎಲ್ ಸ್ಪೀಕರ್ಗಳು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಮಲ್ಟಿ-ಡ್ರೈವ್ ಮೋಡ್, ಹರ್ಮನ್ ಟ್ಯೂನ್ಡ್ ಇನ್ಫೋಟೈನ್ಮೆಂಟ್ ಸಿಸ್ಟಮ್ನಂತಹ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
ನಿಸ್ಸಾನ್ ಮೈಕ್ರಾ : ಸ್ವಯಂಚಾಲಿತ CVT ಗೇರ್ಬಾಕ್ಸ್ ಹೊಂದಿರುವ ನಿಸ್ಸಾನ್ ಮೈಕ್ರಾದ ಪೆಟ್ರೋಲ್ ಆವೃತ್ತಿಗಳು ಭಾರತದಲ್ಲಿ ಮಾತ್ರ ಲಭ್ಯವಿದೆ. ಸಖಟ್ ಸ್ಟೈಲಿಶ್ ಆಗಿರುವ ಈ ಕಾರು ನಗರ ಸಂಚಾರಕ್ಕೆ ಹೇಳಿ ಮಾಡಿಸಿದಂತಿದೆ.