Price Hike: ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಅಡುಗೆ ಎಣ್ಣೆ ಬೆಲೆ..!
ಜಾರಿ ಯಂತ್ರ (Enforcement Machinery)ಗಳನ್ನು ಸ್ಥಾಪಿಸುವಂತೆ ಕೇಂದ್ರವು ರಾಜ್ಯಗಳಿಗೆ ಸೂಚನೆ ನೀಡಿದೆ. ಇದರೊಂದಿಗೆ ಕೃತಕ ಬೆಲೆ ಏರಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಕಾಳಧನ, ಬೆಲೆ ಹೆಚ್ಚಳದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಜಿಲ್ಲಾ ಮಟ್ಟದಲ್ಲಿ ನಿಗಾ ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.
ಕಳೆದ ಒಂದು ವಾರದಲ್ಲಿ ಪರಿಷ್ಕರಿಸಿದ ಅಡುಗೆ ಎಣ್ಣೆ ಬೆಲೆ(Edible Oil Price Rise) ಲೀಟರ್‌ಗೆ ಸುಮಾರು 25 ರೂ. ಏರಿಕೆಯಾಗಿದ್ದು, ಬಾದಾಮಿ ಬೆಲೆ ಕೆಜಿಗೆ 20 ರಿಂದ 30 ರೂ. ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಖಾದ್ಯ ತೈಲದ ಬೆಲೆಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ತಿಂಗಳಲ್ಲಿ ದೇಶೀಯ ಖಾದ್ಯ ತೈಲ ಬೆಲೆಗಳು ಶೇ.25-40ರಷ್ಟು ಏರಿಕೆಯಾಗಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಸೂರ್ಯಕಾಂತಿ ಎಣ್ಣೆ(Sunflower Oil Price), ಪಾಮ್ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯ ಪೂರೈಕೆಗೆ ಭಾರೀ ಹೊಡೆತವನ್ನು ನೀಡಿದೆ. ಉಕ್ರೇನ್‌ನಿಂದ ಸೂರ್ಯಕಾಂತಿ ಪೂರೈಕೆಯ ಮೇಲಿನ ಒತ್ತಡವು ಇಂಡೋನೇಷ್ಯಾದಿಂದ ರಫ್ತು ನೀತಿಯನ್ನು ಮತ್ತಷ್ಟು ಪ್ರಭಾವಿಸಿದೆ. ಇದರಿಂದ ತಾಳೆ ಎಣ್ಣೆ ಆಮದು ಮೇಲೆ ಪರಿಣಾಮ ಬೀರಿದೆ. ಇದರ ಜೊತೆಗೆ ದಕ್ಷಿಣ ಅಮೆರಿಕಾದಲ್ಲಿ ಬೆಳೆ ಹಾನಿಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಇದರಿಂದ ಸೋಯಾಬೀನ್ ಎಣ್ಣೆಯ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ.
ಕೇವಲ ಒಂದು ತಿಂಗಳೊಳಗೆ ಖಾದ್ಯ ತೈಲಗಳ ಬೆಲೆ(Edible Oil Price)ಗಳು 125 ರೂ.ನಿಂದ 170-180 ರೂ.ನಷ್ಟವಾಗಿದೆ. ಮೇ ಅಥವಾ ಜೂನ್‌ನಲ್ಲಿ ಇದು ಮತ್ತಷ್ಟು ಹೆಚ್ಚಾಗಬಹುದು. ಬೆಲೆ ಏರಿಕೆ ಪ್ರಮಾಣವು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಗಳಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಖಾದ್ಯ ತೈಲ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ.