ದುಬಾರಿಯಾಯಿತು ಟೀ , ಕಾಫಿ ,maggi..! ಬೆಲೆ ಏರಿಸಿದ ನೆಸ್ಲೆ , ಹಿಂದೂಸ್ತಾನ್ ಯೂನಿಲಿವರ್

ಹಿಂದೂಸ್ತಾನ್ ಯೂನಿಲಿವರ್ (HUL) ಮತ್ತು ನೆಸ್ಲೆ ಮಾರ್ಚ್ 14 ರಿಂದ ಚಹಾ, ಕಾಪಿ, ಹಾಲು ಮತ್ತು ನೂಡಲ್ಸ್ ಬೆಲೆಗಳನ್ನು ಹೆಚ್ಚಿಸಿವೆ. HUL ಬ್ರೂ ಕಾಫಿಯ ಬೆಲೆಗಳನ್ನು 3-7% ರಷ್ಟು ಹೆಚ್ಚಿಸಿದೆ. 

Written by - Ranjitha R K | Last Updated : Mar 14, 2022, 04:49 PM IST
  • ಮ್ಯಾಗಿ, ಟೀ ಪ್ರಿಯರಿಗೆ ಸಖತ್ ಶಾಕ್
  • ಹೆಚ್ಚು ಪಾವತಿಸಬೇಕಾಗುತ್ತದೆ ಈ ಎಲ್ಲಾ ವಸ್ತುಗಳಿಗೆ
  • ಇನ್ನೂ ಹಲವು ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ
ದುಬಾರಿಯಾಯಿತು ಟೀ , ಕಾಫಿ ,maggi..! ಬೆಲೆ ಏರಿಸಿದ ನೆಸ್ಲೆ ,  ಹಿಂದೂಸ್ತಾನ್ ಯೂನಿಲಿವರ್  title=
ಮ್ಯಾಗಿ, ಟೀ ಪ್ರಿಯರಿಗೆ ಸಖತ್ ಶಾಕ್ (file photo)

ನವದೆಹಲಿ :   ಹಿಂದೂಸ್ತಾನ್ ಯೂನಿಲಿವರ್ (HUL) ಮತ್ತು ನೆಸ್ಲೆ ತಮ್ಮ ಹಲವು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. ಚಹಾ (Tea), ಕಾಫಿ, ಹಾಲು ಮತ್ತು ನೂಡಲ್ಸ್‌ಗಳ ಬೆಲೆಯನ್ನು (Noodles price)ಮಾರ್ಚ್ 14 ರಿಂದ ಅಂದರೆ ಇಂದಿನಿಂದ ಹೆಚ್ಚಿಸಲಾಗಿದೆ. ಎಚ್‌ಯುಎಲ್ ಬ್ರೂ ಕಾಫಿಯ ಬೆಲೆಯನ್ನು 3-7% ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್‌ನ ಬೆಲೆಯನ್ನು 3-4% ಹೆಚ್ಚಿಸಿದೆ. ಇನ್‌ಸ್ಟಂಟ್ ಕಾಫಿ ಪೌಚ್‌ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ.

ಇದಲ್ಲದೇ ತಾಜ್ ಮಹಲ್ (Taj Mahal) ಟೀ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ (Tea price hike). ಬ್ರೂಕ್ ಬಾಂಡ್‌ನ (Brooke Bond) ಎಲ್ಲಾ ವಿಧದ ಚಹಾಗಳ ಬೆಲೆಗಳು 1.5% ರಿಂದ 14% ಕ್ಕೆ ಏರಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ (Price hike) ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು HUL ಹೇಳಿದೆ.

ಇದನ್ನೂ ಓದಿ : Bank Holiday March 2022: ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಮಾಹಿತಿ

ಮ್ಯಾಗಿ ದರದಲ್ಲಿ  ಶೇ.9ರಿಂದ 16ರಷ್ಟು ಏರಿಕೆ :
ನೆಸ್ಲೆ ಇಂಡಿಯಾ (Nestle India) ಕೂಡ ಮ್ಯಾಗಿ (Maggi) ಬೆಲೆಯನ್ನು 9 ರಿಂದ 16% ರಷ್ಟು ಹೆಚ್ಚಿಸಿದೆ. ಇದಲ್ಲದೇ ಕಂಪನಿಯು ಹಾಲು ಮತ್ತು ಕಾಫಿ ಪುಡಿಯ ಬೆಲೆಯನ್ನು ಕೂಡ ಹೆಚ್ಚಿಸಿದೆ (cofee price). ದರ ಹೆಚ್ಚಳದ ನಂತರ 70 ಗ್ರಾಂ ಮ್ಯಾಗಿ ಪ್ಯಾಕ್‌ಗೆ 12 ರೂ. ಬದಲಿಗೆ 14 ರೂ. ನೀಡಬೇಕಾಗುತ್ತದೆ. 40 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್‌ಗೆ  3 ರೂಪಾಯಿ ಹೆಚ್ಚು ಪಾವತಿಸಬೇಕಾಗುತ್ತದೆ. ಈ ಹಿಂದೆ 560 ಗ್ರಾಂ ಮ್ಯಾಗಿ ಪ್ಯಾಕ್‌ಗೆ 96 ರೂ. ಪಾವತಿಸಬೇಕಾಗಿತ್ತು ಆದರೆ ಈಗ ಇದಕ್ಕೆ 105 ರೂ. 
ನೀಡಬೇಕಾಗುತ್ತದೆ. 

ಈ ವಸ್ತುಗಳ ಬೆಲೆಯೂ ಹೆಚ್ಚಿದೆ :
ನೆಸ್ಲೆ ಒಂದು ಲೀಟರ್ ಎ+ ಹಾಲಿನ ಬೆಲೆಯನ್ನೂ ಹೆಚ್ಚಿಸಿದೆ. ಇದಕ್ಕೆ ಮೊದಲು 75 ರೂಪಾಯಿ ಪಾವತಿಸಬೇಕಾಗಿತ್ತು. ಆದರೆ ಈಗ 78 ರೂಪಾಯಿ ಪಾವತಿಸಬೇಕಾಗಿದೆ. ನೆಸ್ಕೆಫೆ ಕ್ಲಾಸಿಕ್ ಕಾಫಿ ಪೌಡರ್ ಬೆಲೆ ಶೇ.3-7ರಷ್ಟು ಹೆಚ್ಚಾಗಿದೆ. ನೆಸ್ಕೆಫೆಯ 25 ಗ್ರಾಂ ಪ್ಯಾಕ್ ಈಗ 2.5% ರಷ್ಟು ದುಬಾರಿಯಾಗಿದೆ. ಇದಕ್ಕೆ 78 ರೂಪಾಯಿ ಬದಲು ಈಗ 80 ರೂಪಾಯಿ ಪಾವತಿಸಬೇಕಾಗುತ್ತದೆ. ಇದರೊಂದಿಗೆ 50 ಗ್ರಾಂ ನೆಸ್ಕೆಫೆ ಕ್ಲಾಸಿಕ್‌ಗೆ 145 ರೂಪಾಯಿ ಬದಲಿಗೆ 150 ರೂಪಾಯಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ ಈ ವಾಹನಗಳ ನೋಂದಣಿ ಈಗ 8 ಪಟ್ಟು ಹೆಚ್ಚು ದುಬಾರಿ.! ಹೊಸ ನಿಯಮದಿಂದ ಆಗಲಿದೆ ಭಾರೀ ನಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News