ಮಾರುಕಟ್ಟೆಗೆ ಬಂದಿದೆ BMW Bike ..! ಅಬ್ಬಬ್ಬಾ ಬೆಲೆ ಎಷ್ಟು ಗೊತ್ತಾ?

Tue, 23 Feb 2021-5:46 pm,

BMW R 18 Classic cruiser  ಮೋಟಾರ್‌ಸೈಕಲ್ ಅನ್ನು ಭಾರತದಲ್ಲಿ  ಬಿಡುಗಡೆ ಮಾಡಲಾಗಿದೆ. ಇದರ ಮಾರುಕಟ್ಟೆ ಬೆಲೆ 24 ಲಕ್ಷ ರೂಪಾಯಿಗಳು. ಆರ್ 18 ಕ್ಲಾಸಿಕ್ ಕ್ರೂಸರ್ ಈಗ ಹೆರಿಟೇಜ್ ಶ್ರೇಣಿಯಲ್ಲಿ ಬ್ರಾಂಡಿನ  ಎರಡನೇ ಮೋಟಾರ್ ಸೈಕಲ್ ಆಗಿದೆ. 

BMW R 18 Classic cruiser  ಅನ್ನು ಎಲ್ಲಾ ಬಿಎಂಡಬ್ಲ್ಯು ಮೋಟರ್ರಾಡ್ ಶೋ ರೂಂಗಳಲ್ಲಿ ಕಾಯ್ದಿರಿಸಬಹುದು. ಕ್ರೂಸರ್ ಅನ್ನು CBU (Completely Built Unit) ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು. ಬೈಕುಗಳ ವಿತರಣೆಯನ್ನೂ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.  

ಆರ್ 18 ಕ್ಲಾಸಿಕ್ ಕ್ರೂಸರ್‌ನಲ್ಲಿ ನೀವು Rain, Roll ಮತ್ತು Rock ಎಂಬ ಮೂರು ರೈಡ್ ಮೋಡ್‌ಗಳಿವೆ . ಎಲ್ಲಾ ಮೋಡ್‌ಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ,. ರೈಲು ಮೋಡ್‌ನಲ್ಲಿ ಬೈಕ್ ಯಾವುದೇ ಕಾರಣಕ್ಕೂ ಜಾರುವುದಿಲ್ಲ, ಅತಿ ವೇಗವಾಗಿ ಚಲಿಸುತ್ತದೆ. ರೋಲ್ ಮೋಡ್‌ನಲ್ಲಿ ಬೈಕ್‌ ಎಂಜಿನ್ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ರಾಕ್ ಮೋಡ್‌ನಲ್ಲಿ, ಬೈಕ್‌ನ ಹೆಚ್ಚಿನ ಪವರ್ ಅನುಭವಕ್ಕೆ ಬರುತ್ತದೆ. 

ನೀವು ಆರ್ 18 ಕ್ಲಾಸಿಕ್ ಕ್ರೂಸರ್‌ ABS ಅನ್ನು ಹೊಂದಿದೆ.   ಎಂಜಿನ್ ಬಗ್ಗೆ ಹೇಳುವುದಾದರೆ, ಇದು air/oil-cooled ಎರಡು ಸಿಲಿಂಡರ್ ಬಾಕ್ಸರ್ ಎಂಜಿನ್ ಹೊಂದಿದೆ. ಇದು ಬಿಎಂಡಬ್ಲ್ಯುನ ಅತ್ಯಂತ ಶಕ್ತಿಶಾಲಿ ಎಂಜಿನ್ ಗಳಲ್ಲಿ ಒಂದಾಗಿದೆ. ಇದು 1802 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ. ಇದು ಸಾಮಾನ್ಯವಾಗಿ ಭಾರತದ ಯಾವುದೇ ಎಸ್ಯುವಿಯಲ್ಲಿ ಇಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link