“ನಾನು ವಿಚ್ಛೇದನ ಪಡೆಯುತ್ತಿದ್ದೇನೆ…”- ಐಶ್ವರ್ಯಾ ಜೊತೆ ಡಿವೋರ್ಸ್ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್ ಹೇಳಿಕೆ

Fri, 21 Jun 2024-3:34 pm,

ಅದು 2014… "ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ಏಕೆ ಎಂದು ಆಶ್ಚರ್ಯಪಡುತ್ತೀರಾ?" ಎನ್ನುತ್ತಾ ನಟ ಅಭಿಷೇಕ್ ಬಚ್ಚನ್ ಟ್ವಿಟರ್‌ ಮೂಲಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಇದನ್ನು ಕಂಡ ಜನರು ಶಾಕ್ ಆಗಿದ್ದರು.

ಬಾಲಿವುಡ್ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ವದಂತಿ ಅನೇಕ ದಿನಗಳಿಂದ ಸುದ್ದಿಯಲ್ಲಿದೆ.

ಈ ವದಂತಿಗಳ ಮಧ್ಯೆ ಜೋಡಿ ಎಷ್ಟೇ ಬಾರಿ ಒಟ್ಟಾಗಿ ಕಾಣಿಸಿಕೊಂಡರೂ ಸಹ, ಇವರ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬಂತೇ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲದರ ಮಧ್ಯೆ ಅಭಿಷೇಕ ಮಾಡಿರುವ ಹಳೆಯ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.

ಅಂದು ಕೂಡ ಇದೇ ರೀತಿ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ ಹಬ್ಬಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ನಟ, ಇಂತಹದ್ದೊಂದು ಪೋಸ್ಟ್ ಶೇರ್ ಮಾಡಿದ್ದರು.

"ಸರಿ.. ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ನನಗೆ ಈ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು! ಅಂದಹಾಗೆ ನಾನು ಮರು ಮದುವೆ ಯಾವಾಗ ಆಗುತ್ತೇನೆ ಎಂಬುದನ್ನು ಸಹ ನನಗೆ ತಿಳಿಸುವಿರಾ? ಧನ್ಯವಾದಗಳು”ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದರು.

"ನನಗೆ ಮತ್ತು ಐಶ್ವರ್ಯಾಗೆ ಹೇಗೆ ನಮ್ಮ ಜೀವನವನ್ನು ನಡೆಸಬೇಕು ಎಂಬುದು ತಿಳಿದಿದೆ. ಮೂರನೇ ವ್ಯಕ್ತಿ ಅದರ ಬಗ್ಗೆ ತಿಳಿಸಿಕೊಡುವ ಅಗತ್ಯವಿಲ್ಲ. ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ಅವಳು ನನ್ನನ್ನು ಎಷ್ಟು ಪ್ರೀತಿಸುತ್ತಾಳೆಂದು ನನಗೆ ತಿಳಿದಿದೆ'' ಎಂದಿದ್ದರು,

“ನೀವು ನಿಮ್ಮ ಅನುಕೂಲಕ್ಕಾಗಿ ಏನನ್ನಾದರೂ ತಪ್ಪಾಗಿ ಅರ್ಥೈಸಿಕೊಂಡಿದ್ದರೆ, ಅದನ್ನೇ ಮುಂದುವರಿಸಿ. ಅಷ್ಟಕ್ಕೂ ನಾನು ಸಾರ್ವಜನಿಕ ವ್ಯಕ್ತಿ. ನಾನು ಎಲ್ಲಾ ಸಮಯದಲ್ಲೂ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ನನ್ನ ಮದುವೆ ಮತ್ತು ನನ್ನ ಜೀವನ ಮಾಧ್ಯಮಗಳು ಏನು ಹೇಳುತ್ತವೆ ಎಂಬುದನ್ನು ಅನುಸರಿಸಲು-ಅರಿಯಲು ಹೋಗುವುದಿಲ್ಲ. ಹಾಗಾಗಿ ಇದು ನಿಜವಾಗಿಯೂ ನನಗೆ ಸಮಸ್ಯೆಯಲ್ಲ" ಎಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link