ಈ ತರಕಾರಿಯನ್ನು ತಿಂದರೂ ಸರಿ,ಕೂದಲಿಗೆ ಈ ರೀತಿ ಹಚ್ಚಿದರೂ ಸೈ, ಬಿಳಿ ಕೂದಲು ಕಪ್ಪಾಗುವುದು ಗ್ಯಾರಂಟಿ ! ವರ್ಷ ಪೂರ್ತಿ ಸಿಗುವ ತರಕಾರಿ ಇದು
ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಈಗ ಸಾಮಾನ್ಯವಾಗಿ ಎಲ್ಲರನ್ನೂ ಕಾಸುವ ಸಮಸ್ಯೆ. ಹದಿ ಹರೆಯದ ಮಕ್ಕಳನ್ನು ಕೂಡಾ ಈ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ. ನ್ನೇ ಈ ಸಮಸ್ಯೆ ಕಾಡುತ್ತಿದೆ.
ಬಿಳಿ ಕೂದಲನ್ನು ಮರೆಮಾಚಲು ಅನೇಕರು ಹೇರ್ ಡೈ ಬಳಸುವುದು ಸುಲಭ ಪರಿಹಾರ ಎನ್ನುವುದು ಬಹುತೇಕರ ಯೋಚನೆ. ಆದರೆ ಇದು ಪರಿಹಾರದ ಬದಲು ಕೂದಲಿಗೆ ಹಾನಿ ಮಾಡುವುದೇ ಹೆಚ್ಚು.
ಕೂದಲಿನ ಬಣ್ಣಕ್ಕೆ ಕಾರಣವಾಗಿರುವ ಮೆಲನಿನ್ ಉತ್ಪಾದನೆ ನಿಧಾನವಾದಾಗ ಬಿಳಿ ಕೂದಲು ಹುಟ್ಟಿ ಕೊಳ್ಳುತ್ತದೆ. ಹಾಗಾಗಿ ಸಮಸ್ಯೆಗೆ ಬೇರಿನಿಂದಲೇ ಮದ್ದು ಸಿಗುವಂತೆ ಮಾಡುವುದು ಅವಶ್ಯಕ.
ಹೀಗಿರುವಾಗ ಬಿಳಿಯಾದ ಕೂದಲನ್ನು ಮತ್ತೆ ಕಪ್ಪಾಗಿಸಲು ನೈಸರ್ಗಿಕ ಪರಿಹಾರಗಳನ್ನು ಕಂಡುಕೊಳ್ಳಬಹುದು. ಈ ವಿಧಾನಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಯಾವ ಅಡ್ಡ ಪರಿಣಾಮಗಳೂ ಇಲ್ಲದೆ ಬಿಳಿ ಕೂದಲು ಕಪ್ಪಾಗುವುದು.
ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನಗಳನ್ನು ಬಳಸುವ ಬದಲು ಸೋರೆಕಾಯಿಯನ್ನು ಬಳಸಿ ನೋಡಿ. ದುಬಾರಿ ಉತ್ಪನ್ನಗಳು ನೀಡುವ ಫಲಿತಾಂಶವನ್ನೇ ಸೋರೆಕಾಯಿ ಕೂಡಾ ನೀಡುತ್ತದೆ.
ಸೋರೆಕಾಯಿ ಎಲ್ಲಾ ಋತುವಿನಲ್ಲಿಯೂ ಸಿಗುವ ತರಕಾರಿ. ಇದನ್ನು ತಿನ್ನುವುದರಿಂದ ನೈಸರ್ಗಿಕವಾಗಿ ಕೂದಲು ಕಪ್ಪಾಗುವುದಲ್ಲದೆ, ಕೂದಲು ಆರೋಗ್ಯಕರವಾಗಿ ಕಾಂತಿಯುತವಾಗಿ ಬೆಳೆಯುತ್ತದೆ.
ಸೋರೆಕಾಯಿಯ ಸಹಾಯದಿಂದ ವಿಶೇಷ ಎಣ್ಣೆಯನ್ನು ತಯಾರಿಸಿ ಹಚ್ಚುವುದರಿಂದ ಕೂಡಾ ಬಿಳಿ ಕೂದಲು ಕಪ್ಪಾಗುವುದು. ಸೋರೆಕಾಯಿ ಎಣ್ಣೆ ತಯಾರಿಸಲು ಕೊಬ್ಬರಿ ಎಣ್ಣೆಯ ಅಗತ್ಯವಿರುತ್ತದೆ.
ಸೋರೆಕಾಯಿಯನ್ನು ಸಿಪ್ಪೆಯೊಂದಿಗೆ ಕತ್ತರಿಸಿ ಸುಮಾರು 5 ದಿನಗಳವರೆಗೆ ಸೂರ್ಯನ ಕಡು ಬಿಸಿಲಿನಲ್ಲಿ ಒಣಗಿಸಿ. ನಂತರ ಈ ಹೋಳುಗಳನ್ನು ತೆಂಗಿನೆಣ್ಣೆಗೆ ಹಾಕಿ ಬಿಸಿ ಮಾಡಿ. ಈ ಎಣ್ಣೆ ಸಂಪೂರ್ಣ ತಣ್ಣಗಾದ ಮೇಲೆ ಕೂದಲಿಗೆ ಹಚ್ಚಬೇಕು.
ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ, ಬೆಳಗ್ಗೆ ತಲೆ ಸ್ನಾನ ಮಾಡಬೇಕು. ಹೀಗೆ ಮಾಡುತ್ತಾ ಬಂದರೆ ಬಿಳಿ ಕೂದಲಿನ ಸಮಸ್ಯೆ ಶಾಶ್ವತವಾಗಿ ದೂರವಾಗುವುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.