ಬಿಎಸ್‌ಎನ್‌ಎಲ್ ನ್ಯೂ ಇಯರ್ ಕೊಡುಗೆ: ಕೇವಲ 277ರೂ.ಗೆ ಬರೋಬ್ಬರಿ 120ಜಿಬಿ ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ..!
ದೇಶವಾಸಿಗಳಿಗೆ ಈಗಾಗಲೇ 4ಜಿ ಸೇವೆಗಳನ್ನು ವೇಗವಾಗಿ ಅಭಿವೃದ್ಧಿ ಪಡಿಸುತ್ತಿರುವ ಬಿಎಸ್‌ಎನ್‌ಎಲ್ ಶೀಘ್ರದಲ್ಲೇ 5ಜಿ ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸಿದೆ.
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಹೊಸ ವರ್ಷದ ಹೊಸ್ತಿಲಿನಲ್ಲಿ ಭರ್ಜರಿ ಕೊಡುಗೆಯೊಂದನ್ನು ನೀಡಿದೆ.
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ 5ಜಿ ಸೇವೆಯನ್ನು ಒದಗಿಸಿದೆ. ಈ ರಿಚಾರ್ಜ್ ಯೋಜನೆಯ ಬೆಲೆ 277 ರೂ. ಆಗಿದೆ.
ಬಿಎಸ್‌ಎನ್‌ಎಲ್ 277 ರೂ. ಪ್ರಿಪೇಯ್ಡ್ ಯೋಜನೆಯು 60 ದಿನಗಳ ಮಾನ್ಯತೆಯೊಂದಿಗೆಬರುತ್ತದೆ.
ಇದರಲ್ಲಿ ದೈನಂದಿನ 2ಜಿಬಿ ಡೇಟಾ ಸಂಪೂರ್ಣ ಎರಡು ತಿಂಗಳವರೆಗೆ 120 ಜಿಬಿ ಡೇಟಾ ದೊರೆಯಲಿದೆ. ದೈನಂದಿನ ಮಿತಿ ಖಾಲಿಯಾದ ಬಳಿಕ ಇದರ ವೇಗ 40 Kbpsಗೆ ಇಳಿಕೆಯಾಗುತ್ತದೆ.
ಬಿಎಸ್‌ಎನ್‌ಎಲ್ ನ ಈ ಆಫರ್ ಜನವರಿ 16ರವರೆಗೆ ಮಾತ್ರ ಲಭ್ಯವಿರುತ್ತದೆ.