ಅಭೂತಪೂರ್ವ ಪ್ರಿಪೇಯ್ಡ್ ಪ್ಲಾನ್..! ಒಂದೇ ರಿಚಾರ್ಜಿನಲ್ಲಿ ಎಲ್ಲಾ ಅನ್ ಲಿಮಿಟೆಡ್..!
ಇದು 398 ರೂಪಾಯಿಯ ರಿಚಾರ್ಜ್ ಪ್ಲಾನ್ : ಬಿಜಿಆರ್.ಇನ್ ವೆಬ್ ಸೈಟ್ ಪ್ರಕಾರ ಬಿಎಸ್ ಎನ್ ಎಲ್ ಹೊಸ ಪ್ರಿಪೆಯ್ಡ್ ಪ್ಲಾನ್ ಪರಿಚಯಿಸುತ್ತಿದೆ. ಇದರ ರಿಚಾರ್ಜ್ ಮೌಲ್ಯ 398 ರೂಪಾಯಿ. ಈ ಪ್ಲಾನ್ ಖರೀದಿಸಿದರೆ ಎಲ್ಲಾ ಸೌಲಭ್ಯಗಳೂ ಅನ್ ಲಿಮಿಟೆಡ್ ಇರಲಿವೆ. ಅತ್ಯಧಿಕ ಡೇಟಾ, ಮತ್ತು ಕಾಲ್ ಮಾಡುವವರಿಗೆ ಹೇಳಿ ಮಾಡಿಸಿದ ಪ್ಲಾನ್ ಇದಾಗಿದೆ.
ಡೇಟಾ ಖತಂ ಆಗೋದೇ ಇಲ್ಲ..! ಈ ಪ್ಲಾನ್ ಬಳಸುವ ಬಳಕೆದಾರರಿಗೆ ಇಂಟರ್ ನೆಟ್ ಡೇಟಾ ಕೊನೆಗೊಳ್ಳುವ ಆತಂಕ ಇಲ್ಲ. ಈ ರಿಚಾರ್ಜಿನಲ್ಲಿ ಅನ್ ಲಿಮಿಟೆಡ್ ಡೇಟಾ ಸಿಗಲಿದೆ. ಡೇಟಾ ಬಳಕೆಗೆ ಯಾವುದೇ ಮಿತಿ ಇರುವುದಿಲ್ಲ. ಬೇಕಾದಷ್ಟು ಡೇಟಾ ಬಳಸಬಹುದು.
ಸಿಗಲಿದೆ ಅನ್ ಲಿಮಿಟೆಡ್ ಕಾಲಿಂಗ್ : ಈ ರಿಚಾರ್ಜ್ ನಲ್ಲಿ ಅನ್ ಲಿಮಿಟೆಡ್ ಡೇಟಾ ಜೊತೆಗೆ ಅನ್ ಲಿಮಿಟೆಡ್ ಕಾಲಿಂಗ್ ಸೌಲಭ್ಯ ಕೂಡಾ ಇದೆ. ಯಾವುದೇ ಮೊಬೈಲ್ ನೆಟ್ ವರ್ಕ್ ಗೆ ಎಷ್ಟು ಬೇಕಾದರೂ ಕಾಲ್ ಮಾಡಬಹುದಾಗಿದೆ.
30 ದಿನದ ವಾಲಿಡಿಟಿ : ಆದರೆ ಇದರ ವ್ಯಾಲಿಡಿಟಿ 30 ದಿನಗಳಷ್ಟಾಗಿದೆ. 30 ದಿನಗಳಿಗೆ ಎಷ್ಟು ಬೇಕಾದರೂ ಡೇಟಾ ಮತ್ತು ಕಾಲ್ ಸೌಲಭ್ಯ ಬಳಸಬಹುದಾಗಿದೆ.
ಸದ್ಯಕ್ಕೆ ಈ ರಾಜ್ಯದಲ್ಲಿ ಮಾತ್ರ : ವರದಿ ಪ್ರಕಾರ ಈ ಪ್ಲಾನ್ ಸೌಲಭ್ಯ ಸದ್ಯ ತಮಿಳುನಾಡಿನ ಚೆನ್ನೈ ಟೆಲಿಕಾಂ ಸರ್ಕಲ್ ಅಲ್ಲದೆ ಕೆಲವು ಆಯ್ದ ಟೆಲಿಕಾಂ ಸರ್ಕಲ್ ನಲ್ಲಿ ಮಾತ್ರ ಲಭ್ಯವಿದೆ.