Airtel, Jio, Vi, BSNL ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ
ನವದೆಹಲಿ: ಪ್ರಿಪೇಯ್ಡ್ ಗ್ರಾಹಕರಿಗೆ, ಮೊಬೈಲ್ ರೀಚಾರ್ಜ್ ಮಾಡುವ ಮೊದಲು ಅದರ ಕೊಡುಗೆಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಏರ್‌ಟೆಲ್, ಬಿಎಸ್‌ಎನ್‌ಎಲ್, ಜಿಯೋ ಮತ್ತು Vi ನಂತಹ ಪ್ರಮುಖ ಕಂಪನಿಗಳು ಪ್ರಿಪೇಯ್ಡ್ ಗ್ರಾಹಕರಿಗೆ 84 ದಿನಗಳ ಮಾನ್ಯತೆ ಹೊಂದಿರುವ ಬಂಪರ್ ಆಫರ್ ನೀಡುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ ಪ್ರಿಪೇಯ್ಡ್ ರೀಚಾರ್ಜ್ ಮಾಡುವ ಮೊದಲು ನೀವು ಎಲ್ಲಾ ಕಂಪನಿಗಳ ಕೊಡುಗೆಗಳನ್ನು ಪರಿಶೀಲಿಸುವುದು ಮುಖ್ಯ. ಸರಿಯಾದ ಯೋಜನೆಯನ್ನು ಆರಿಸಿದರೆ ಹಣ ಮತ್ತು ಡೇಟಾ ಎರಡೂ ಪ್ರಯೋಜನ ಪಡೆಯಬಹುದು. ಯಾವ ರೀಚಾರ್ಜ್‌ಗಳು ಈ ಸಮಯದಲ್ಲಿ ಮೂರು ತಿಂಗಳ ಸಿಂಧುತ್ವದ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಯಿರಿ...
ಜಿಯೋನ ಈ ಯೋಜನೆಯ ಸಿಂಧುತ್ವವೂ 84 ದಿನಗಳು. ಇದು ದಿನಕ್ಕೆ 1.5 ಜಿಬಿ ಡೇಟಾ, ಜಿಯೋದಿಂದ ಜಿಯೋಗೆ ಅನಿಯಮಿತ ಕರೆ, ಜಿಯೋದಿಂದ ಇತರ ನೆಟ್‌ವರ್ಕ್‌ಗಳಿಗೆ 3,000 ನಿಮಿಷಗಳ ಉಚಿತ ಕರೆ ಸೌಲಭ್ಯ ಮತ್ತು ಪ್ರತಿದಿನ 100 ಎಸ್‌ಎಂಎಸ್ ಮುಂತಾದ ಪ್ರಯೋಜನಗಳನ್ನು ಪಡೆಯಲಿದೆ. ಆದರೆ ಬೇರೆಲ್ಲಾ ಮೊಬೈಲ್ ಕಂಪನಿಗಳು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ನೀಡಿವೆ. ಇದಲ್ಲದೆ ಕಂಪನಿಯು ಈ ಪ್ಯಾಕ್‌ನೊಂದಿಗೆ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತಿದೆ.
ಏರ್‌ಟೆಲ್, ಜಿಯೋ ಗ್ರಾಹಕರಿಗೆ ಮಾತ್ರ 84 ದಿನಗಳ ಸಿಂಧುತ್ವದ ಯೋಜನೆ ಎಂದೇನಿಲ್ಲ ಅದೇ ಮಾನ್ಯತೆಯೊಂದಿಗೆ Vi (ವೊಡಾಫೋನ್-ಐಡಿಯಾ) ನೂತನ ಪ್ಲಾನ್ ನೀಡುತ್ತಿದೆ. ಇದರಲ್ಲಿ ನೀವು ಪ್ರತಿದಿನ 1.5 ಜಿಬಿ ಡೇಟಾವನ್ನು 84 ದಿನಗಳ ಸಿಂಧುತ್ವದೊಂದಿಗೆ ಪರಿಚಯಿಸಿದೆ. ಇದರಲ್ಲಿ ಗ್ರಾಹಕರು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯ ಲಭ್ಯವಿದೆ.
ಮೂರು ದೊಡ್ಡ ಖಾಸಗಿ ಟೆಲಿಕಾಂ ಆಪರೇಟರ್‌ಗಳಲ್ಲಿ ಬಿಎಸ್‌ಎನ್‌ಎಲ್ ಏಕೈಕ ಸರ್ಕಾರಿ ಟೆಲಿಕಾಂ ಕಂಪನಿಯಾಗಿದೆ. ಕಂಪನಿಯು ತನ್ನ ಗ್ರಾಹಕರಿಗೆ 84 ದಿನಗಳ ಮಾನ್ಯತೆ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಪ್ಯಾಕೇಜ್‌ನಲ್ಲಿ, ಪ್ರಿಪೇಯ್ಡ್ ಗ್ರಾಹಕರು ಪ್ರತಿದಿನ 1 ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ, ಪ್ರತಿದಿನ ಅನಿಯಮಿತ ಕರೆಗಳು, ಉಚಿತ ರೋಮಿಂಗ್ ಮತ್ತು 100 ಎಸ್‌ಎಂಎಸ್ ಉಚಿತ ಸೌಲಭ್ಯವಿದೆ.
ನೀವು ಏರ್‌ಟೆಲ್‌ನ ಪ್ರಿಪೇಯ್ಡ್ ಗ್ರಾಹಕರಾಗಿದ್ದರೆ ಕಂಪನಿಯು ನಿಮಗಾಗಿ 84 ದಿನಗಳ ಯೋಜನೆಯನ್ನು ಸಿದ್ಧಪಡಿಸಿದೆ. ಈ ಯೋಜನೆಯಲ್ಲಿ ನೀವು ಪ್ರತಿದಿನ 1.5 ಜಿಬಿ ಡೇಟಾವನ್ನು ಪಡೆಯುತ್ತೀರಿ. ಇದಲ್ಲದೆ ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯವೂ ಯೋಜನೆಯಲ್ಲಿದೆ. ಇದರೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ಫ್ರೀ ಹೆಲೋಟೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಸಹ ಉಚಿತ ಚಂದಾದಾರಿಕೆಯನ್ನು ಪಡೆಯಲಿದೆ.