ತೆಂಗಿನಸಿಪ್ಪೆಯನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ 5 ನಿಮಿಷದಲ್ಲಿ ಬಿಳಿಕೂದಲು ಗಾಢ ಕಪ್ಪಾಗುತ್ತೆ! 2 ತಿಂಗಳವರೆಗೆ ಚಿಂತೆಯೇ ಬೇಡ

Sat, 10 Aug 2024-5:51 pm,

ನಮ್ಮಲ್ಲಿ ಹಲವಾರು ಮಂದಿ ಬಿಳಿ ಕೂದಲನ್ನು ಕಪ್ಪಾಗಿಸಲು ಇಲ್ಲಸಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ. ಇನ್ನೂ ಕೆಲ ಜನರು ಹೇರ್ ಡೈ ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಹೇರ್ ಡೈಗಳಲ್ಲಿ ಹಲವು ಬಗೆಯ ರಾಸಾಯನಿಕಗಳಿದ್ದು, ಅವು ಕೂದಲಿನ ಮೇಲೆ ಭಾರಿ ಪರಿಣಾಮ ಬೀರುತ್ತವೆ.

 

ನಿಮ್ಮ ಕೂದಲನ್ನು ಕಪ್ಪಾಗಿಸಲು ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು, ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಿ ನೋಡಿ. ಈ ನೈಸರ್ಗಿಕ ಪರಿಹಾರಗಳಲ್ಲಿ ತೆಂಗಿನ ಸಿಪ್ಪೆ ಕೂಡ ಒಂದು. ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಬಳಕೆಯಾಗದೆ ಬಿಡವ ತೆಂಗಿನ ಸಿಪ್ಪೆಯೇ ಬಿಳಿಕೂದಲಿಗೆ ಬೆಸ್ಟ್‌ ಮನೆಮದ್ದಾಗುತ್ತದೆ.

 

ಕೂದಲನ್ನು ಕಪ್ಪಾಗಿಸಲು ತೆಂಗಿನಸಿಪ್ಪೆಯನ್ನು ಹೇಗೆ ಬಳಸಬಹುದು ಎಂಬುದನ್ನು ಮುಂದಕ್ಕೆ ತಿಳಿಯೋಣ. ತೆಂಗಿನ ಸಿಪ್ಪೆ, ಅಲೋವೆರಾ ಜೆಲ್, ತೆಂಗಿನ ಎಣ್ಣೆ ಇದಕ್ಕೆ ಬೇಕಾಗಿರುವ ಅಗತ್ಯವಾದ ವಸ್ತುಗಳು.

 

ತೆಂಗಿನ ಸಿಪ್ಪೆಯಿಂದ ಹೇರ್ ಡೈ ಮಾಡಲು, ಮೊದಲು ತೆಂಗಿನ ಸಿಪ್ಪೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅದನ್ನು ಸಣ್ಣ ತುಂಡುಗಳಾಗಿ ಮಾಡಿ. ಈಗ ಅದನ್ನು ಕಬ್ಬಿಣದ ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ. ಸುಮಾರು 30 ನಿಮಿಷಗಳ ಕಾಲ ಇದನ್ನು ಹುರಿದ ನಂತರ ತಣ್ಣಗಾಗಲು ಬಿಡಿ. ನಂತರ ಅದನ್ನು ಹಿಸುಕಿ ಚೆನ್ನಾಡಿ ಪುಡಿ ಮಾಡಿ.

 

ಈ ಪುಡಗೆ ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ. ಬೇಕಿದ್ದಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಕೂಡ ಬೆರೆಸಬಹುದು. ಎಲ್ಲವನ್ನೂ ಚೆನ್ನಾಗಿ ಬೆರೆಸಿದ ನಂತರ, 10 ನಿಮಿಷಗಳ ಕಾಲ ಬಿಡಿ,

 

ಈ ಮಿಶ್ರಣವನ್ನು ಬ್ರಷ್‌ ಸಹಾಯದಿಂದ ಕೂದಲಿಗೆ ಹಚ್ಚಿಕೊಳ್ಳಿ. ಸುಮಾರು 20 ರಿಂದ 30 ನಿಮಿಷಗಳ ಕಾಲ ಬಿಡಿ. ನಂತರ ಸಾಮಾನ್ಯ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದು ನಿಮ್ಮ ಕೂದಲು ಕಪ್ಪಾಗಿ ಕಾಣುವಂತೆ ಮಾಡುತ್ತದೆ. ಈ ಸುಲಭ ವಿಧಾನಗಳನ್ನು ಆಗಾಗ್ಗೆ ಬಳಸಬಹುದು.

 

(ಸೂಚನೆ: ಪ್ರಿಯ ಓದುಗರೇ, ನಮ್ಮ ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಜೊತೆಗೆ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ)

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link