Shreyas Iyer: ತನಗಿಂತ 8 ವರ್ಷ ಹಿರಿಯ ನಟಿ ಜೊತೆ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಡೇಟಿಂಗ್! ಯಾರು ಗೊತ್ತಾ ಆ ಚೆಲುವೆ?

Fri, 15 Mar 2024-10:55 am,

ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್‌’ನಲ್ಲಿ ಮುಂಬೈ ಪರ ಆಡುವಂತೆ ಬಿಸಿಸಿಐ ಕೇಳಿದಾಗ, ಅವರು ಫಿಟ್ ಆಗಿಲ್ಲ. ಬೆನ್ನುನೋವು ಇದೆ ಎಂದು ಎಂದು ಹೇಳಿದರು. ಆದರೆ ಎನ್ ಸಿಎ ಫಿಟ್ ಸರ್ಟಿಫಿಕೇಟ್ ನೀಡಿತ್ತು.

ಇದೀಗ ಮತ್ತೆ ಅಭ್ಯಾಸ ಪಂದ್ಯ ನಡೆಸುತ್ತರುವ ಅಯ್ಯರ್ ಟೀಕೆಗೆ ಗುರಿಯಾಗಿದ್ದರು. ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಗುತ್ತಿಗೆಯಿಂದ ಬಿಡುಗಡೆ ಮಾಡಿದೆ.

ಕೆರಿಯರ್ ವಿಚಾರದಲ್ಲಿ ಇತ್ತೀಚಿನವರೆಗೂ ಸುದ್ದಿಯಾಗಿದ್ದ ಅಯ್ಯರ್ ಈಗ ವೈಯಕ್ತಿಕ ವಿಚಾರದಲ್ಲೂ ಮುಂಚೂಣಿಗೆ ಬಂದಿದ್ದಾರೆ. ಅವರು ಓರ್ವ ನಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಲಿವುಡ್ ಹೀರೋಯಿನ್ ಜೊತೆ ಶುರುವಾದ ಸ್ನೇಹ ಪ್ರೇಮಕ್ಕೆ ತಿರುಗಿದೆ ಎಂಬುದು ಸುದ್ದಿಯ ಸಾರಾಂಶ. ಶ್ರದ್ಧಾ ಕಪೂರ್ ಟಾಲಿವುಡ್ ಪ್ರೇಕ್ಷಕರಿಗೂ ಪರಿಚಿತರು. ಪ್ರಭಾಸ್ ಅಭಿನಯದ ಸಾಹೋ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

ಶ್ರೇಯಸ್ ಅಯ್ಯರ್ ಮತ್ತು ಶ್ರದ್ಧಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿಗೆ ಕಾರಣವಿದೆ. ಇತ್ತೀಚೆಗೆ ಇವರಿಬ್ಬರು ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದರು. ಇವರಿಬ್ಬರು ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದು, ಮತ್ತೊಬ್ಬರು ಪರಸ್ಪರರ ಸಾಮಾಜಿಕ ಜಾಲತಾಣ ಖಾತೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿವೆ.

ಆದರೆ, ಈ ಸುದ್ದಿಗೆ ಶ್ರೇಯಸ್ ಅಯ್ಯರ್ ಅಥವಾ ಶ್ರದ್ಧಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಕೇವಲ ವದಂತಿ ಎಂದು ಕೆಲವು ನೆಟ್ಟಿಗರು ಹೇಳುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link