ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತಾ? ಈಕೆ ಕೋಚ್ ಒಬ್ಬರ ಮಗಳು... ದೇಶದ ಪ್ರಖ್ಯಾತ ಉದ್ಯಮಿಯೂ ಹೌದು

Thu, 06 Jun 2024-7:14 pm,

ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮಾರ್ಥ್ಯ ಹೊಂದಿದ್ದವರು. ನಾವಿಂದು ಈ ವರದಿಯಲ್ಲಿ ರೈನಾ ಅವರ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಸುರೇಶ್ ರೈನಾ ಪತ್ನಿ ಹೆಸರು ಪ್ರಿಯಾಂಕಾ ಚೌಧರಿ. ಇಂಜಿನಿಯರಿಂಗ್ ಪದವಿ ಪಡೆದಿರುವ ಪ್ರಿಯಾಂಕ, ಐಟಿ ವೃತ್ತಿಪರರಾಗಿ ಕೆಲಸ ಮಾಡಿದರು. ಅದಾದ ಬಳಿಕ ನೆದರ್ಲ್ಯಾಂಡ್’ಗೆ ತೆರಳಿದರು.

ಅಲ್ಲಿಂದ ಭಾರತಕ್ಕೆ ಬಂದ ಪ್ರಿಯಾಂಕಾ ಚೌಧರಿ, ತನ್ನ ಬಾಲ್ಯದ ಗೆಳೆಯ ಸುರೇಶ್ ರೈನಾ ಅವರನ್ನು ಭೇಟಿಯಾದರು. ಆ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಸುರೇಶ್ ರೈನಾ 3 ಏಪ್ರಿಲ್ 2015 ರಂದು ದೆಹಲಿಯಲ್ಲಿ ಖಾಸಗಿ ವಿವಾಹ ಸಮಾರಂಭದಲ್ಲಿ ಪ್ರಿಯಾಂಕಾ ಚೌಧರಿ ಅವರನ್ನು ಮದುವೆಯಾದರು.

ಅಂದಹಾಗೆ ಪ್ರಿಯಾಂಕಾ ಚೌಧರಿ ಬೇಬಿ ಕೇರ್ ಬ್ರ್ಯಾಂಡ್ 'Maate’ಯನ್ನು ಪ್ರಾರಂಭಿಸಿದ್ದಾರೆ. ಇದು 'ಗ್ರೇಸಿಯಾ ರೈನಾ ಫೌಂಡೇಶನ್ (GRF) ಜೊತೆ ಕಾರ್ಯನಿರ್ವಹಿಸುತ್ತದೆ. GRFನ ಮುಖ್ಯಸ್ಥೆ ಪ್ರಿಯಾಂಕಾ ಚೌಧರಿ.

ಸುರೇಶ್ ರೈನಾ ಮತ್ತು ಪ್ರಿಯಾಂಕಾ ಇಬ್ಬರೂ ಬಾಲ್ಯದಿಂದಲೂ ಪರಿಚಿತರು. ಪ್ರಿಯಾಂಕಾ ಕುಟುಂಬ ಪಂಜಾಬ್‌’ಗೆ ಶಿಫ್ಟ್ ಆದ ಸಂದರ್ಭದಲ್ಲಿ ಇಬ್ಬರ ನಡುವಿನ ಸಂಪರ್ಕವು ಕಡಿತಗೊಂಡಿತ್ತು. ಆದರೆ 2008ರ ಸಮಯದಲ್ಲಿ ಇಬ್ಬರೂ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಇದಾದ ನಂತರ ರೈನಾ ಮತ್ತು ಪ್ರಿಯಾಂಕಾ ಪರಸ್ಪರ ಡೇಟಿಂಗ್ ಆರಂಭಿಸಿದರು.

ಅಂದಹಾಗೆ ಪ್ರಿಯಾಂಕ ಅವರ ತಂದೆ ಕ್ರಿಕೆಟ್ ಕೋಚ್ ಆಗಿದ್ದರು. ಇವರ ಬಳಿಯೇ ಸುರೇಶ್ ರೈನಾ ಆರಂಭಿಕ ಕ್ರಿಕೆಟ್ ಕಲಿತಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link