ಬಾಲಿವುಡ್ ನಟಿಯರಿಗಿಂತಲೂ ಬ್ಯೂಟಿಫುಲ್ ಸೂರ್ಯಕುಮಾರ್ ಯಾದವ್ ಪತ್ನಿ! ಈಕೆಯ ಡ್ಯಾನ್ಸ್ ನೋಡಿಯೇ ಲವ್ವಲ್ಲಿ ಬಿದ್ದ ಭಾರತದ ಮಿ.360
2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಸೂಪರ್ 8ರ ತನ್ನ ಮೊದಲ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನವನ್ನು 47 ರನ್’ಗಳಿಂದ ಸೋಲಿಸಿತು. ಭಾರತದ 360 ಡಿಗ್ರಿ ಸೂರ್ಯಕುಮಾರ್ ಯಾದವ್ ಈ ಬಾರಿಯ ಟಿ20 ವಿಶ್ವಕಪ್ 2024 ರಲ್ಲಿ ಉತ್ತಮ ರನ್ ಗಳಿಸುತ್ತಿದ್ದಾರೆ
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ತಮ್ಮ ಹಳೆಯ ಫಾರ್ಮ್’ನಲ್ಲಿ ಕಾಣಿಸಿಕೊಂಡ ಸೂರ್ಯ ಕೇವಲ 28 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್’ಗಳ ಸಹಾಯದಿಂದ 53 ರನ್ ಗಳಿಸಿದರು.
ಅಂದಹಾಗೆ ಈ ವರದಿಯಲ್ಲಿ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಈಕೆ ಶಾಸ್ತ್ರೀಯ ನೃತ್ಯಗಾರ್ತಿ.
ಈಕೆಯ ನೃತ್ಯ ನೋಡಿಯೇ ಸೂರ್ಯಕುಮಾರ್ ಫಿದಾ ಆಗಿದ್ದಲ್ಲದೆ, ಲವ್ವಲ್ಲಿ ಬಿದ್ದಿದ್ದರಂತೆ. ಇನ್ನು ದೇವಿಶಾ ಮುಂಬೈನಲ್ಲಿ ಮಕ್ಕಳಿಗೆ ಶಾಸ್ತ್ರೀಯ ನೃತ್ಯವನ್ನು ಕಲಿಸುತ್ತಾರೆ.
ದೇವಿಶಾ ಮೂಲತಃ ಕರ್ನಾಟಕದ ಕರಾವಳಿ ಜಿಲ್ಲೆಯವರು. ಆದರೆ ಮುಂಬೈನ ಆರ್ ಎ ಪೋಧರ್ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ದೇವಿಶಾ ಮತ್ತು ಸೂರ್ಯಕುಮಾರ್ ಯಾದವ್ ತಮ್ಮ ಪದವಿ ಅಧ್ಯಯನದ ಸಮಯದಲ್ಲಿ ಭೇಟಿಯಾಗಿದ್ದರು.
ಕಾಲೇಜ್ ಫಂಕ್ಷನ್’ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ದೇವಿಶಾ ಅವರನ್ನು ಕಂಡ ಸೂರ್ಯ, ಆ ಸಮಯದಲ್ಲೇ ಮನಸೋತಿದ್ದರು. ಇದಾದ ಬಳಿಕ ಇಬ್ಬರ ನಡುವೆ ಪ್ರೀತಿ ಮೂಡಿ, ಕೊನೆಗೆ 2016ರಲ್ಲಿ ಇಬ್ಬರೂ ಮದುವೆಯಾಗಿದ್ದರು.
ಸೂರ್ಯ ಮದುವೆಯಾದಾಗ ಐಪಿಎಲ್ ಮತ್ತು ದೇಶೀಯ ಟೂರ್ನಿಗಳನ್ನು ಆಡುತ್ತಿದ್ದರು. ಆ ಸಂದರ್ಭದಲ್ಲಿ ದೇವಿಶಾ ಪತಿ ಮಾಡುವ ಪ್ರತಿ ಕೆಲಸದಲ್ಲೂ ಬೆನ್ನೆಲುಬಾಗಿ ನಿಂತರು. ಸಾಕಷ್ಟು ಬೆಂಬಲ ನೀಡಿದರು.
2021 ರಲ್ಲಿ ಭಾರತದ ಪರ ತಮ್ಮ ಮೊದಲ T20 ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಪ್ರಸ್ತುತ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಆಗಿದ್ದು, ಅವರನ್ನು ಭಾರತದ 360 ಡಿಗ್ರಿ ಎಂದೂ ಕರೆಯುತ್ತಾರೆ.